ಆ್ಯಪ್ನಗರ

ಏರ್‌ಫೋರ್ಟ್‌ನಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆ..! ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಮತ್ತು ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆದಾರರಿಂದ ಜಪ್ತಿ ಮಾಡಲಾಗಿದ್ದ ಎರಡೂವರೆ ಕೆಜಿ ಚಿನ್ನ ನಾಪತ್ತೆ ಪ್ರಕರಣದಲ್ಲಿ ಆರು ಮಂದಿ ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಬೆಂಗಳೂರು ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿದೆ.

Vijaya Karnataka Web 19 Oct 2020, 12:01 am
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಮತ್ತು ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆದಾರರಿಂದ ಜಪ್ತಿ ಮಾಡಲಾಗಿದ್ದ ಎರಡೂವರೆ ಕೆಜಿ ಚಿನ್ನ ನಾಪತ್ತೆ ಪ್ರಕರಣದಲ್ಲಿ ಆರು ಮಂದಿ ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಬೆಂಗಳೂರು ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web cbi files case against six customs officers in bengaluru in gold missing case
ಏರ್‌ಫೋರ್ಟ್‌ನಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆ..! ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌


ಕಸ್ಟಮ್ಸ್‌ ಮತ್ತು ಸೆಂಟ್ರಲ್‌ ಎಕ್ಸೈಸ್‌ ಇಲಾಖೆಯಲ್ಲಿಸಹಾಯಕ ಆಯುಕ್ತರಾಗಿರುವ ವಿನೋದ್‌ ಚಿನ್ನಪ್ಪ, ಕೆ.ಕೇಶವ, ಅಧೀಕ್ಷಕರಾದ ಕೆ.ಬಿ. ಲಿಂಗರಾಜು, ಡೀನ್‌ ರೆಕ್ಸ್‌, ಎನ್‌.ಜೆ.ರವಿಶೇಖರ್‌ ಮತ್ತು ಇಲಾಖೆಯ ಇನ್ನೊಬ್ಬ ಅಧಿಕಾರಿ ಎಸ್‌.ಡಿ.ಹಿರೇಮಠ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಪ್ರಸ್ತುತ ಹೈದಬಾದ್ನಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ವಿನೋದ್‌ ಚಿನ್ನಪ್ಪ ಎಂಬುವರ ವಿರುದ್ಧ ಚಿನ್ನ ಜಪ್ತಿಗೆ ಸಂಬಂಧಿಸಿದಂತೆ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಈ ವೇಳೆ ಬೆಂಗಳೂರು ಏರ್‌ಪೋರ್ಟ್ನಲ್ಲಿ ಕಾರ್ಯನಿರ್ವಹಿಸುವ ವೇಳೆ ಒಟ್ಟು 13 ಪ್ರಯಾಣಿಕರಿಂದ ಜಪ್ತಿ ಮಾಡಲಾಗಿದ್ದ ಚಿನ್ನ ಇಲಾಖೆಯ ಗೋದಾಮಿನ ಲಾಕರ್‌ನಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಬಾರ್‌ ಮಾಲೀಕ ಮನೀಶ್‌ ಶೆಟ್ಟಿ ಹಂತಕರ ಬಂಧನ: ಇಬ್ಬರ ಕಾಲಿಗೆ ಗುಂಡು

ವಿನೋದ್‌ ಚಿನ್ನಪ್ಪ ಅವರ ಜತೆಗೆ ಇನ್ನಿತರ ಅಧಿಕಾರಿಗಳು ಜಪ್ತಿ ಮಾಡಿದ ಆಭರಣಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ಇಲಾಖೆಯ ಎಂಎಚ್‌ಬಿ ಗೋದಾಮಿನ ಸೇಫ್‌ ಲಾಕರ್‌ನಲ್ಲಿ ಇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜಪ್ತಿ ಮಾಡಲಾದ ಚಿನ್ನವನ್ನು ಗೋದಾಮಿನ ಸೇಫ್‌ ಲಾಕರ್‌ನಲ್ಲಿ ಇರಿಸುವ ಜವಾಬ್ದಾರಿಯನ್ನು ಈ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಚಿನ್ನಾಭರಣ ಕುರಿತು ಸೂಕ್ತ ಲೆಕ್ಕ ಮಾಡಿಲ್ಲ. ಜಪ್ತಿ ಮಾಡಿದ್ದ ಆಭರಣಗಳನ್ನು ಪಡೆದು ತಮ್ಮ ಪಾಳಿ ಮುಗಿದ ಬಳಿಕ ನಂತರದ ಪಾಳಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿಲ್ಲ.

ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿರುವುದೇ ಮೋದಿ ದೊಡ್ಡ ಸಾಧನೆ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಬದಲಿಗೆ, ಗೋದಾಮಿನ ಅಧಿಕಾರಿಗಳ ಕೈಗೆ ಕೀಲಿ ನೀಡಿದ್ದರು. ಡಬಲ್‌ ಲಾಕ್‌ ನಿಯಮ ಪಾಲಿಸಿಲ್ಲ. ಒಂದು ಕೀಲಿ ತಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಕೀಲಿಯನ್ನು ಹಿರಿಯ ಅಧಿಕಾರಿಗಳ ಕೈಗೆ ಒಪ್ಪಿಸಬೇಕಾಗಿತ್ತು. ಅದನ್ನು ಪಾಲಿಸಿಲ್ಲ. ಇದರಿಂದಾಗಿ 13 ಪ್ರಯಾಣಿಕರಿಂದ ಜಪ್ತಿ ಮಾಡಿದ್ದ ಒಟ್ಟು 2,594 ಗ್ರಾಂ ಚಿನ್ನ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ