ಆ್ಯಪ್ನಗರ

ಡಿಜೆ ಹಳ್ಳಿ ಗಲಭೆ ಕೇಸ್‌: ಸಂಪತ್‌ ರಾಜ್‌ ಬಂಧನದ ಕುರಿತು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಏನಂದ್ರು?

ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನದ ಕುರಿತು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಏನಂದ್ರು? ಸದ್ಯ ವಿಚಾರಣೆಯಲ್ಲಿರುವ ಸಂಪತ್‌ ರಾಜ್‌ ಅವರನ್ನು ಇನ್ನಷ್ಟು ತೀವ್ರ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಸಿಬಿ ಸಂದೀಪ್‌ ಪಾಟೀಲ್‌ ಹೇಳಿದ್ದೇಕೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

Vijaya Karnataka Web 17 Nov 2020, 1:48 pm
ಬೆಂಗಳೂರು: ಡಿಜೆ ಹಳ್ಳಿ ಗಲಭೆಗೆ ಸಂಬಂಧಪಟ್ಟಂತೆ ಸದ್ಯ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆಯೊಳಗೆ ಕೋರ್ಟ್‌ಗೆ ಹಾಜರು ಪಡಿಸಲು ಸಿಸಿಬಿ ಮುಂದಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌, ಸದ್ಯ ವಿಚಾರಣೆ ನಡೆಯುತ್ತಿದೆ. ಇಂದು ಸಂಜೆಯೊಳಗೆ ಕೋರ್ಟ್‌ಗೆ ಸಂಪತ್‌ ರಾಜ್‌ ಅವರನ್ನು ಹಾಜರುಪಡಿಸಲಿದ್ದೇವೆ.
Vijaya Karnataka Web sandeep patil


ಹೆಚ್ಚಿನ ವಿಚಾರಣೆ ಹಿನ್ನೆಲೆ ನಮ್ಮ ಕಸ್ಟಡಿಗೆ ಕೇಳಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಡಿಜೆ ಹಳ್ಳಿ ಕೇಸ್‌ ಸಂಬಂಧ ಮಾಹಿತಿ ನೀಡಿದ ಸಂದೀಪ್‌ ಪಾಟೀಲ್‌, ಈಗಾಗಲೇ ಪ್ರಕರಣದ ಸಂಬಂಧ 53 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ.

ಘಟನೆ ಹಿನ್ನಲೆ ಏನು?
ಆಗಸ್ಟ್ 11ರಂದು ರಾತ್ರಿ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರೀ ಗಲಭೆ ನಡೆದಿತ್ತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಅಖಂಡ ಮೂರ್ತಿ ಸಂಬಂಧಿಕ ನವೀನ್ ಎಂಬಾತ ಒಂದು ಸಮುದಾಯದ ವಿರುದ್ಧ ಫೇಸ್‌ ಬುಕ್ ಪೋಸ್ಟ್ ಹಾಕಿದ್ದರು ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದಿತ್ತು.ಇತ್ತ ಪೊಲೀಸ್‌ ಸ್ಟೇಷನ್‌ ಸೇರಿ ಹಲವು ವಾಹನಗಳು ಕೂಡ ಬೆಂಕಿಗಾಹುತಿಯಾಗಿದ್ದವು.

ಬಿಡದಿ ಟೊಯೋಟಾ ಕಾರ್ಖಾನೆ ಲಾಕ್‌ಔಟ್‌ ತೆರವು, ನಾಳೆಯಿಂದ ಕಾರ್ಮಿಕರ ಕೆಲಸಕ್ಕೆ ಅನುವು: ಅಶ್ವಥ್‌ ನಾರಾಯಣ್‌ ಸೂಚನೆ

ಈ ಗಲಭೆಯ ಹಿಂದೆ ಮಾಜಿ ಮೇಯರ್‌ ಸಂಪತ್‌ ರಾಜ್‌ ಕೈವಾಡವಿದೆ ಎನ್ನುವ ಆರೋಪ ಕೂಡ ಕೇಳಿಬಂದಿತ್ತು, ಇದೀಗ ಸಂಪತ್‌ ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. 28 ಸೆಪ್ಟೆಂಬರ್ 2017 ರಿಂದ 28 ಸೆಪ್ಟೆಂಬರ್‌ 2018ರ ವರೆಗೆ ಸಂಪತ್‌ರಾಜ್‌ ಬಿಬಿಎಂಪಿಯ ಮೇಯರ್‌ ಆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ