ಆ್ಯಪ್ನಗರ

ಕ್ಯಾಬ್ ನೆಚ್ಚಿಕೊಂಡವರಿಗೆ ಬಿಗ್ ಶಾಕ್: ಪೀಕ್ ಅವರ್‌ನಲ್ಲಿ ದರ 3 ಪಟ್ಟಾಗುವ ಸಾಧ್ಯತೆ

ಓಲಾ, ಉಬರ್, ಅಗ್ರಿಗೇಟರ್ ವಾಹನಗಳ ಬಾಡಿಗೆ ವಿಚಾರ, ನೂತನ ನೀತಿ ತಯಾರಿಕೆಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Vijaya Karnataka 14 Sep 2019, 11:04 am
ಬೇಡಿಕೆ ಹೆಚ್ಚಾದಾಗ ಗ್ರಾಹಕರಿಗೆ ಗರಿಷ್ಠ ಮೂಲ ದರಕ್ಕಿಂತ 3 ಪಟ್ಟಿನವರೆಗೆ ಬಾಡಿಗೆ ವಿಧಿಸಲು (ಸರ್ಜ್‌ ಪ್ರೈಸಿಂಗ್‌) ಓಲಾ, ಉಬರ್‌ ಸೇರಿ ಕ್ಯಾಬ್‌ ಅಗ್ರಿಗೇಟರ್ಸ್‌ಗಳ ಮನವಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
Vijaya Karnataka Web Uber


ಈ ಸಂಬಂಧ ನೂತನ ನೀತಿ- ನಿಯಮಗಳನ್ನು ಸಿದ್ದಪಡಿಸಲಾಗುತ್ತಿದೆ, ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಬೇಡಿಕೆ ಹೆಚ್ಚಾದಾಗ ಬಾಡಿಗೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ಬೇಡಿಕೆ ಮತ್ತು ಸರಬರಾಜನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಮೊದಲಿನಿಂದಲೂ ಓಲಾ, ಉಬರ್‌ ವಾದಿಸುತ್ತಿವೆ. ಕೇಂದ್ರ ಸರಕಾರ ನೀತಿ ನಿಯಮ ರೂಪಿಸುತ್ತಿರುವ ಕಾರಣ ಎಷ್ಟು ಪಟ್ಟು ಬಾಡಿಗೆ ಹೆಚ್ಚಿಸಿಕೊಳ್ಳಲು ಕ್ಯಾಪ್‌ ವಿಧಿಸಲಾಗುತ್ತದೆ ಎಂಬುದರ ಕುರಿತು ಶೀಘ್ರದಲ್ಲೇ ತೀರ್ಮಾನವಾಗಲಿದೆ.

ಕ್ಯಾಬ್‌ ಅಗ್ರಿಗೇಟರ್ಸ್‌ಗಳ ನಿಯಂತ್ರಣ ಕಾಯ್ದೆ ಹೊಂದಿರುವ ಮೊದಲ ರಾಜ್ಯವಾಗಿರುವ ಕರ್ನಾಟಕದಲ್ಲಿ, ವಾಹನದ ಮೌಲ್ಯ ಆಧರಿಸಿ ಗರಿಷ್ಠ ಮತ್ತು ಕನಿಷ್ಠ ಸರ್ಜ್‌ ಪ್ರೈಸಿಂಗ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಲಕ್ಸುರಿ ಕ್ಯಾಬ್‌ಗಳ ಮೇಲೆ ಗರಿಷ್ಠ 2.25ಪಟ್ಟು ಹೆಚ್ಚು ಮತ್ತು ಲಘು ಕ್ಯಾಬ್‌‌ಗಳಿಗೆ 2ಪಟ್ಟು ಹೆಚ್ಚು ಸರ್ಜ್‌ ಪ್ರೈಸಿಂಗ್‌ಗೆ ಅವಕಾಶ ಇದೆ. ಬೇಡಿಕೆ ಹೆಚ್ಚಾಗಿರುವ ಪ್ರದೇಶದಲ್ಲಿ ಚಾಲಕರು ಸೇವೆ ಮಾಡಲು ಸರ್ಜ್‌ ಪ್ರೈಸಿಂಗ್‌ ಅವಕಾಶ ಕಲ್ಪಿಸುತ್ತದೆ ಎಂಬುದು ಕ್ಯಾಬ್‌ ಅಗ್ರಿಗೇಟರ್ಸ್‌ಗಳ ವಾದವಾಗಿದೆ.

‘‘ಭಾರತದ ನಗರ ಪ್ರದೇಶಗಳಲ್ಲಿ ಆ್ಯಪ್‌ ಆಧಾರಿತ ಕ್ಯಾಬ್‌ಗಳು, ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ. ಸಮರ್ಥ ಮತ್ತು ಅಗತ್ಯವಿರುವಷ್ಟು ಸಮೂಹ ಸಾರಿಗೆ ಕೊರತೆಯೇ ಕ್ಯಾಬ್‌ ಗಳ ಬೇಡಿಕೆ ಹೆಚ್ಚಲು ಕಾರಣವಾಗಿದೆ’’, ಎಂಬುದು ಸಾರಿಗೆ ತಜ್ಞರ ವಾದವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ