ಆ್ಯಪ್ನಗರ

ಪೊಲೀಸರ ಸೋಗಿನಲ್ಲಿ ಸರಗಳ್ಳತನ: ಬಂಧನ

ನಗರದಲ್ಲಿ ಮೂರು ಕಡೆ ಸರಗಳ್ಳತನ ಪ್ರಕರಣಗಳು ವರದಿಯಾಗಿದ್ದು ಪೊಲೀಸ್‌ ಸೋಗಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಒಬ್ಬಾತನನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಮನೆ ಸಮೀಪವೇ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರ ಕೊರಳಿನಲ್ಲಿದ್ದ ಸರ ಕಿತ್ತಿರುವ ಬಗ್ಗೆ ಆಯಾ ಠಾಣೆಗಳಲ್ಲಿ ದೂರು ದಾಖಲಾಗಿದೆ.

Vijaya Karnataka 21 Mar 2019, 5:00 am
ಬೆಂಗಳೂರು : ನಗರದಲ್ಲಿ ಮೂರು ಕಡೆ ಸರಗಳ್ಳತನ ಪ್ರಕರಣಗಳು ವರದಿಯಾಗಿದ್ದು ಪೊಲೀಸ್‌ ಸೋಗಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಒಬ್ಬಾತನನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಮನೆ ಸಮೀಪವೇ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರ ಕೊರಳಿನಲ್ಲಿದ್ದ ಸರ ಕಿತ್ತಿರುವ ಬಗ್ಗೆ ಆಯಾ ಠಾಣೆಗಳಲ್ಲಿ ದೂರು ದಾಖಲಾಗಿದೆ.
Vijaya Karnataka Web chain snatching in disguise of police
ಪೊಲೀಸರ ಸೋಗಿನಲ್ಲಿ ಸರಗಳ್ಳತನ: ಬಂಧನ


ಚಂದ್ರಾಲೇಔಟ್‌ ಠಾಣೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸರಗಳ್ಳ ಸೈಯದ್‌ ಅಬೂಬಕರ್‌ನಿಂದ ಸುಮಾರು 50 ಲಕ್ಷ ರೂ ಮೌಲ್ಯದ 40 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹನುಮಂತನಗರ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಸರಗಳ್ಳತನದ ಸುಳಿವು ಹಿಡಿಯಲು ಮುಂದಾಗಿರುವ ಪೊಲೀಸರು ಸಿಸಿಟಿವಿಗಳ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ವಾಕಿಟಾಕಿ ಕೈಯಲ್ಲಿ ಸರಗಳವು

ಚಂದ್ರಾಲೇಔಟ್‌ನ ನಿವಾಸಿಯಾದ ಸೈಯದ್‌ ಅಬೂಬಕರ್‌ ಥೇಟ್‌ ಪೊಲೀಸರಂತೆ ಸಮವಸ್ತ್ರ ಧರಿಸಿ ಕೈಯಲ್ಲಿ ವಾಕಿ ಟಾಕಿ ಹಿಡಿದು ಓಡಾಡುತ್ತಿದ್ದ. ನಕಲಿ ವಾಕಿ ಟಾಕಿಯನ್ನು ಈತ ಹಿಡಿದು ಓಡಾಡುತ್ತಿದ್ದನಾದರೂ ಸಾರ್ವಜನಿಕರು ಈತನನ್ನು ಪೊಲೀಸ್‌ ಎಂದೇ ನಂಬಿದ್ದರು. ಕೆ.ಎಸ್‌.ಆರ್‌.ಪಿ ಸಿಬ್ಬಂದಿಯೊಬ್ಬರ ಬಳಿ ಪೊಲೀಸ್‌ ಸಮವಸ್ತ್ರ ಕದ್ದಿದ್ದ ಆರೋಪಿ ಕಾವಲು ಸಿಬ್ಬಂದಿ ಬಳಿ ಇದ್ದ ಹಾಳಾಗಿದ್ದ ವಾಕಿಟಾಕಿಯನ್ನು ಕದ್ದಿದ್ದ. ಇದನ್ನೇ ಬಳಸಿಕೊಂಡು ರಸ್ತೆಯಲ್ಲಿ ಗಸ್ತು ತಿರುಗುವಂತೆ ನಟಿಸುತ್ತಿದ್ದ. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ 50 ವರ್ಷ ದಾಟಿದ ಮಹಿಳೆಯರನ್ನು ಮಾತ್ರ ಟಾರ್ಗೆಟ್‌ ಮಾಡಿ ಅವರ ಕೊರಳಿನಲ್ಲಿದ್ದ ಸರ ಕದಿಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಅರ್ಧ ಗಂಟೆ ಮೊದಲು ಹಿಂದಿನ ರಸ್ತೆಯಲ್ಲಿ ಸರಗಳ್ಳತನ ನಡೆದಿದೆ ಎಂದು ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹೆದರಿಸುತ್ತಿದ್ದ ಆರೋಪಿ ಅವರ ಕೊರಳಿನಲ್ಲಿರುವ ಸರವನ್ನು ಬಿಚ್ಚಿ ಬ್ಯಾಗಿನಲ್ಲಿ ಹಾಕಿಕೊಳ್ಳುವಂತೆ ಸಲಹೆ ನೀಡುತ್ತಿದ್ದ. ಅವರು ಸರ ಬಿಚ್ಚಿದಾಗ ಅದನ್ನು ತಾನೇ ಅವರ ಬ್ಯಾಗಿಗೆ ಹಾಕುವ ನೆಪದಲ್ಲಿ ಲಪಟಾಯಿಸಿರುತ್ತಿದ್ದ. ಇದೇ ರೀತಿ 40 ಕ್ಕೂ ಹೆಚ್ಚು ಮಂದಿಗೆ ವಂಚಿಸಿ ಸರಗಳನ್ನು ಲಪಟಾಯಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ.

ಹನುಮಂತನಗರ: ಹನುಮಂತನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಪ್ರಕರಣದಲ್ಲಿ ತರಕಾರಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ಶ್ರೀನಿವಾಸನಗರದಲ್ಲಿ ನಡೆದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಶ್ರೀನಿವಾಸ ನಗರದ 4ನೇ ಮುಖ್ಯರಸ್ತೆಯ 2ನೇ ತಿರುವಿನ ನಿವಾಸಿ ಜಯಲಕ್ಷ್ಮಿ ಸರ ಕಳೆದುಕೊಂಡವರು. ಕಪ್ಪು ಬಣ್ಣದ ಪಲ್ಸರ್‌ ಬೈಕಿನಲ್ಲಿ ಹೆಲ್ಮೆಟ್‌ ಹಾಕಿಕೊಂಡು ಬಂದವನಿಂದ ಕೃತ್ಯ ನಡೆದಿದೆ.

ಬನಶಂಕರಿ: ಬನಶಂಕರಿ 3ನೇ ಹಂತದ ಬಾಲಾಜಿ ಲೇಔಟ್‌ನ 2ನೇ ತಿರುವಿನ ನಿವಾಸಿ ಶಾರದಾ ಎನ್ನುವವರ ಕೊರಳಿನಲ್ಲಿರುವ ಸರವನ್ನು ಬೈಕಿನಲ್ಲಿ ಬಂದವರು ಕಿತ್ತುಕೊಂಡು ಹೋಗಿದ್ದಾರೆ. ಮನೆ ಸಮೀಪವೇ ಘಟನೆ ನಡೆದಿದೆ. ಹನುಮಂತನಗರದಲ್ಲಿ ಜಯಲಕ್ಷ್ಮಿ ಅವರ ಸರ ಕಿತ್ತ ದುಷ್ಕರ್ಮಿಯೇ ಆನಂತರ ಶಾರದಾ ಅವರ ಸರ ಕಿತ್ತಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಿರುವ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ