ಆ್ಯಪ್ನಗರ

Chamarajpet Election Results 2023: ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್‌ಗೆ ಭರ್ಜರಿ ಗೆಲುವು

Chamarajpet Election Results 2023: ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭೆ ಚುನಾವಣೆ ಏಕಪಕ್ಷೀಯ ಫಲಿತಾಂಶದ ಸೂಚನೆ ನೀಡಿದೆ. ಇಲ್ಲಿನ ಪ್ರಬಲ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಅವರು ದಾಖಲೆಯ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಭಾಸ್ಕರ್ ರಾವ್ ಸೇರಿದಂತೆ ಯಾವ ಅಭ್ಯರ್ಥಿಯೂ ಅವರ ಸಮೀಪಕ್ಕೆ ಸುಳಿಯುವುದು ಸಾಧ್ಯವಾಗಿಲ್ಲ.

Authored byಅಮಿತ್ ಎಂ.ಎಸ್ | Vijaya Karnataka Web 13 May 2023, 12:22 pm

ಹೈಲೈಟ್ಸ್‌:

  • ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಚುನಾವಣೆ ಮತ ಎಣಿಕೆ
  • ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಭಾರಿ ಮತಗಳಿಂದ ಗೆಲುವು
  • ಎದುರಾಳಿ ಅಭ್ಯರ್ಥಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Chamarajpet Election Results 2023
ಜಮೀರ್‌ ಅಹ್ಮದ್‌ ಖಾನ್‌
ಬೆಂಗಳೂರು: ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ತಮ್ಮ ಕಮಾಲ್ ಮಾಡಿದ್ದಾರೆ. ಬುಧವಾರ ನಡೆದ ಚುನಾವಣೆಯ ಮತಗಳ ಎಣಿಕೆ ಶನಿವಾರ ನಡೆಯುತ್ತಿದ್ದು, ಆರಂಭಿಕ ಸುತ್ತುಗಳಿಂದಲೇ ಜಮೀರ್ ಅಹ್ಮದ್ ಭಾರಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಚುನಾವಣಾ ಆಯೋಗದ ಬೆಳಗ್ಗಿನ 11.30ರ ಮಾಹಿತಿ ಪ್ರಕಾರ ಜಮೀರ್ ಅಹ್ಮದ್ ಖಾನ್ ಅವರಿಗೆ 58,756 ಮತಗಳು ದೊರಕಿವೆ. ಜೆಡಿಎಸ್‌ನ ಸಿ ಗೋವಿಂದರಾಜು 10,675 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಭಾಸ್ಕರ್ ರಾವ್ 9,181 ಮತಗಳನ್ನು ಪಡೆದಿದ್ದಾರೆ. ಎಎಪಿಯ ಜಗದೀಶ್ ಚಂದ್ರ ಸಿ ಅವರು 459 ಮತಗಳನ್ನು ಪಡೆದಿದ್ದಾರೆ. 660 ಮತಗಳು ನೋಟಾಕ್ಕೆ ಚಲಾವಣೆ ಆಗಿವೆ.

ಜಮೀರ್ ಅಹ್ಮದ್ ಅವರು 42,802 ಮತಗಳನ್ನು ಪಡೆದಿದ್ದರೆ, ಜೆಡಿಎಸ್‌ನ ಸಿ ಗೋವಿಂದರಾಜು ಅವರು 8378 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾಸ್ಕರ್ ರಾವ್ 6571 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಜಮೀರ್ ಅಹ್ಮದ್ ಅವರ ಶೇಕಡಾವಾರು ಮತಗಳ ಪ್ರಮಾಣ ಶೇ 71ಕ್ಕೆ ಇಳಿಕೆಯಾಗಿದೆ.

ಮೊದಲ ಹಂತ
ಜಮೀರ್ ಅಹ್ಮದ್ ಖಾನ್ ಅವರು 24,633 ಮತಗಳನ್ನು ಪಡೆದಿದ್ದು, ಅವರ ಸಮೀಪದ ಎದುರಾಳಿಯಾಗಿರುವ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಅವರು ಕೇವಲ 3,890 ಮತಗಳನ್ನು ಪಡೆದಿದ್ದಾರೆ. ಇನ್ನು ಜೆಡಿಎಸ್‌ನ ಸಿ ಗೋವಿಂದರಾಜು ಅವರು 3235 ಮತಗಳನ್ನು ಪಡೆದಿದ್ದಾರೆ. ಬೆಳಿಗ್ಗೆ 10 ಗಂಟೆಯವರೆಗೂ ನಡೆದ ಮತ ಎಣಿಕೆಯಲ್ಲಿ ದಾಖಲಾದ ಒಟ್ಟು ಮತಗಳಲ್ಲಿ ಶೇ 75ರಷ್ಟು ಮತಗಳನ್ನು ಜಮೀರ್ ಅಹ್ಮದ್ ಪಡೆದುಕೊಂಡಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ