ಆ್ಯಪ್ನಗರ

ಪುಟಾಣಿ ರೈಲು ಪುನರಾರಂಭ

ದುರಸ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಬಾಲಭವನದ ಪುಟಾಣಿ ರೈಲು ಹೊಸ ಆಕರ್ಷಣೆಯೊಂದಿಗೆ ಬುಧವಾರ ಮತ್ತೆ ಸಂಚಾರ ಆರಂಭಿಸಿದೆ.

Vijaya Karnataka 4 Apr 2019, 5:00 am
ಬೆಂಗಳೂರು : ದುರಸ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಬಾಲಭವನದ ಪುಟಾಣಿ ರೈಲು ಹೊಸ ಆಕರ್ಷಣೆಯೊಂದಿಗೆ ಬುಧವಾರ ಮತ್ತೆ ಸಂಚಾರ ಆರಂಭಿಸಿದೆ.
Vijaya Karnataka Web childrens train service started at balabhavana
ಪುಟಾಣಿ ರೈಲು ಪುನರಾರಂಭ


ಬಣ್ಣದ ಬಲೂನುಗಳು, ಬಾಳೆಕಂಬ, ಹೂವುಗಳಿಂದ ಸಿಂಗಾರಗೊಂಡಿದ್ದ ಪುಟಾಣಿ ರೈಲು ಆಕರ್ಷಕವಾಗಿ ಕಂಗೊಳಿಸುತ್ತಿತ್ತು. ರೈಲು ಹಳಿಯನ್ನು ದುರಸ್ತಿಪಡಿಸುವ ಸಲುವಾಗಿ ರೈಲು ಸಂಚಾರ ಜನವರಿ ಕೊನೆ ವಾರದಿಂದ ಸ್ಥಗಿತಗೊಳಿಸಲಾಗಿತ್ತು. ಜತೆಗೆ ರೈಲಿನ ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿದ ಬಳಿಕ ರೈಲಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ.

ಬುಧವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ರೈಲು ಸಂಚಾರಕ್ಕೆ ಬಾಲಭವನದ ಕಾರ್ಯದರ್ಶಿ ರತ್ನ ಕಲಮದಾನಿಯವರು ಚಾಲನೆ ನೀಡಿದರು. ಬಳಿಕ ಬಾಲಭವನದ ಸಿಬ್ಬಂದಿ ಒಂದು ಸುತ್ತು ರೈಲಿನಲ್ಲಿ ಸಂಚರಿಸಿದರು. ರೈಲು ಸಂಚಾರ ಸುಗಮವಾಗಿದೆ ಎಂದು ಮತ್ತೊಮ್ಮೆ ಖಾತರಿಪಡಿಸಿಕೊಂಡು ಮಕ್ಕಳಿಗೆ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಬುಧವಾರ ಸುಮಾರು 14 ಸುತ್ತು ರೈಲು ಸಂಚರಿಸಿತು. ವಾರದ ದಿನವಾದ್ದರಿಂದ ಹೆಚ್ಚು ಜನ ಆಗಮಿಸಿರಲಿಲ್ಲ. ಇನ್ನು ಮುಂದೆ ಹಾಗೂ ವಾರಾಂತ್ಯದಲ್ಲಿ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿದೆ ಎಂದು ರತ್ನ ಕಲಮದಾನಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ