ಆ್ಯಪ್ನಗರ

ವಾಯು ಮಾಲಿನ್ಯ: ಮಕ್ಕಳಲ್ಲಿ ಹೆಚ್ಚುತ್ತಿದೆ ಕೆಮ್ಮು

ಬೆಂಗಳೂರು ವಾಯುಮಾಲಿನ್ಯ ಪ್ರಮಾಣವು ಹೆಚ್ಚುತ್ತಿದ್ದು, ಮಕ್ಕಳಲ್ಲಿ ದೀರ್ಘಕಾಲೀನ ಕೆಮ್ಮು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ಹಿರಿಯ ಶ್ವಾಸಕೋಶ ತಜ್ಞರು ಹೇಳುತ್ತಾರೆ.

TIMESOFINDIA.COM 1 Aug 2018, 3:47 pm
ಬೆಂಗಳೂರು: ನಗರದಲ್ಲಿ ವಾಯುಮಾಲಿನ್ಯ ಪ್ರಮಾಣವು ಹೆಚ್ಚುತ್ತಿದ್ದು, ಮಕ್ಕಳಲ್ಲಿ ದೀರ್ಘಕಾಲೀನ ಕೆಮ್ಮು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ಹಿರಿಯ ಶ್ವಾಸಕೋಶ ತಜ್ಞರು ಹೇಳುತ್ತಾರೆ.
Vijaya Karnataka Web pollution


ಡಾ. ಪರಮೇಶ್‌ ಅವರು ಹೇಳುವ ಪ್ರಕಾರ ಹದಿನೆಂಟು ವರ್ಷದೊಳಗಿನವರಲ್ಲಿ ಕೆಮ್ಮು ಕಾಣಿಸಿಕೊಂಡಿರುವುದು ಮಾಲಿನ್ಯದ ಕಾರಣಕ್ಕೆ.1999ರಲ್ಲಿ ಮಕ್ಕಳಲ್ಲಿ ಕೆಮ್ಮಿನ ಪ್ರಮಾಣ 8% ಇತ್ತು, ಎರಡು ದಶಕಗಳಲ್ಲಿ ಆ ಪ್ರಮಾಣ 160% ಕ್ಕೆ ಏರಿಕೆಯಾಗಿದೆ.ಶಾಲೆಗೆ ಹೋಗುವಾಗ ಬಹಳಷ್ಟು ಹೊತ್ತು ಟ್ರಾಫಿಕ್‌ ಕಾರಣದಿಂದ ರಸ್ತೆಯಲ್ಲೇ ಉಳಿಯುವುದರಿಂದ ವಾಯು ಮಾಲಿನ್ಯದ ಬಲಿಪಶುಗಳಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ.

ಮಕ್ಕಳಲ್ಲಿ ಕೆಮ್ಮು ಸಮಸ್ಯೆ ಕಾಣಿಸಿಕೊಂಡು ನಿದ್ರಾಹೀನತೆಯುಂಟಾಗುತ್ತದೆ. ಹೀಗಾಗಿ ಅವರಿಗೆ ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ, ಆದರೆ ಹಲವು ವೈದ್ಯರನ್ನು ಸಂಪರ್ಕಿಸಿದರೂ ಪೋಷಕರು ನಿಜವಾದ ಸಮಸ್ಯೆ ಎಲ್ಲಿಂದ ಎಂಬುದನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ವಾಯು ಮಾಲಿನ್ಯದಿಂದ ಕೆಮ್ಮು, ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿದ್ದು, ಈಗ ಹೃದಯದ ಕಾಯಿಲೆಗಳು, ಬುದ್ಧಿಮಾಂದ್ಯತೆ, ಮಧುಮೇಹಗಳಿಗೂ ಇದು ಕಾರಣವಾಗುತ್ತಿದೆ ಎಂಬುದು ಅಧ್ಯಯನದಲ್ಲಿ ಕಂಡು ಬರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ