ಆ್ಯಪ್ನಗರ

ಬೆಂಗಳೂರಿನ ಕಲಾವಿದರು ಟೈಪ್‌ರೈಟರ್‌ನಲ್ಲಿ ಅಭಿನಂದನ್‌ಗೆ ಗೌರವ ಸಲ್ಲಿಸಿದ್ದು ಹೀಗೆ!

ಎ.ಸಿ.ಗುರುಮೂರ್ತಿ ಎಂಬ ಬೆಂಗಳೂರಿನ ಕಲಾವಿದರು ತಮ್ಮ ಹಸ್ತಚಾಲಿತ ಬೆರಳಚ್ಚು ಯಂತ್ರದ ಮೂಲಕ ಅಭಿನಂದನ್‌ರ ಭಾವಚಿತ್ರ ರಚಿಸುವ ಮೂಲಕ ವಿನೂತನವಾಗಿ ಗೌರವ ನೀಡಿದ್ದಾರೆ. ಹಲವು ವರ್ಷಗಳಿಂದ ಈ ಅಭ್ಯಾಸ ಇಟ್ಟುಕೊಂಡಿರುವ ಗುರುಮೂರ್ತಿ, ಬೆರಳಚ್ಚು ಯಂತ್ರದಲ್ಲೇ ಹಲವರ ಭಾವಚಿತ್ರ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

Vijaya Karnataka Web 21 Mar 2019, 7:25 pm
ಬೆಂಗಳೂರು: ಹಳೆಯ ಮಿಗ್‌ - 21 ವಿಮಾನದಿಂದ ಪಾಕಿಸ್ತಾನದ ಎಫ್‌ - 16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ವರ್ಧಮಾನ್ ದೇಶದ ಹೊಸ ಹೀರೋ ಆಗಿದ್ದಾರೆ. ಪಾಕಿಸ್ತಾನ ಸೇನೆ ಅಭಿನಂದನ್‌ರನ್ನು ಬಂಧಿಸಿ ಅವರು ಬಿಡುಗಡೆಯಾಗಿ ದೇಶಕ್ಕೆ ಮರಳಿದಾಗ ತಮ್ಮ ಕುಟುಂಬದವರೇ, ಹತ್ತಿರದವರೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಾರೆ ಎಂಬಷ್ಟು ಸಂಭ್ರಮದ ವಾತಾವರಣ ಇತ್ತು.
Vijaya Karnataka Web abhinandan portrait


ಇನ್ನು, ವಿಂಗ್ ಕಮಾಂಡರ್ ಅಭಿನಂದನ್‌ಗೆ ಹಲವರು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ರು. ಅಭಿನಂದನ್‌ ಮೀಸೆ ದೊಡ್ಡ ಟ್ರೆಂಡ್ ಆಗಿದ್ದು, ಹಲವರು ಅವರದೇ ರೀತಿಯಲ್ಲಿ ಮೀಸೆಯನ್ನು ಬೆಳೆಸಿಕೊಂಡು ಅಭಿನಂದನ್‌ಗೆ ಗೌರವ ನಮನ ಸಲ್ಲಿಸಿದ್ರು. ಖ್ಯಾತ ಬಾಣಸಿಗರೊಬ್ಬರು ಕಲ್ಲಂಗಡಿ ಹಣ್ಣಿನಲ್ಲಿ ಅಭಿನಂದನ್‌ರನ್ನು ಕೆತ್ತನೆ ಮಾಡಿದ್ದೂ ಸುದ್ದಿಯಾಗಿತ್ತು.

ಇದೇ ರೀತಿ, ಬೆಂಗಳೂರಿನಲ್ಲಿ ಬೆರಳಚ್ಚು ಯಂತ್ರದ ಮೂಲಕ ಅಭಿನಂದನ್ ವರ್ಧಮಾನ್‌ ಹೊರಹೊಮ್ಮಿದ್ದಾರೆ. ಎ.ಸಿ.ಗುರುಮೂರ್ತಿ ಎಂಬ ಕಲಾವಿದರು ತಮ್ಮ ಹಸ್ತಚಾಲಿತ ಬೆರಳಚ್ಚು ಯಂತ್ರದ ಮೂಲಕ ಅಭಿನಂದನ್‌ರ ಭಾವಚಿತ್ರ ರಚಿಸುವ ಮೂಲಕ ವಿನೂತನವಾಗಿ ಗೌರವ ನೀಡಿದ್ದಾರೆ.

ಕೀ ಬೋರ್ಡ್‌ನಲ್ಲಿ ಅಕ್ಷರಗಳು, ಚಿಹ್ನೆಗಳು, ಅಂಕಿ - ಸಂಖ್ಯೆಗಳು, ವಿಶೇಷ ಚಿಹ್ನೆಗಳ ಸಹಾಯದಿಂದ ವಿಂಗ್ ಕಮಾಂಡರ್‌ ಅಭಿನಂದನ್‌ರ ಭಾವಚಿತ್ರವನ್ನು ರಚಿಸಿದ್ದಾರೆ ಬೆಂಗಳೂರಿನ ಕಲಾವಿದ ಗುರುಮೂರ್ತಿ.

ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ ಗುರುಮೂರ್ತಿ, ''ಅವರು ನಿಜವಾದ ಹೀರೋ. ನಮ್ಮ ದೇಶಕ್ಕೆ ನಿಜವಾದ ಕೀರ್ತಿ ತಂದುಕೊಟ್ಟಿದ್ದಾರೆ. ಇದು ನನಗೆ ಸ್ಫೂರ್ತಿ ತಂದುಕೊಟ್ಟಿದೆ ಎಂದು ಕಲಾವಿದ ಎ.ಸಿ.ಗುರುಮೂರ್ತಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಈ ಅಭ್ಯಾಸ ಇಟ್ಟುಕೊಂಡಿರುವ ಗುರುಮೂರ್ತಿ, ಬೆರಳಚ್ಚು ಯಂತ್ರದಲ್ಲೇ ಹಲವರ ಭಾವಚಿತ್ರ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ