ಆ್ಯಪ್ನಗರ

ಬಿಎಂಟಿಸಿ ಬಸ್‌ನಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡರು. ೂ

Vijaya Karnataka Web 8 Sep 2019, 12:38 pm
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾನುವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದು, ಗೃಹ ಕಚೇರಿ ಕೃಷ್ಣಾದಿಂದ ಆರಂಭಿಸಿ ಸಿಲ್ಕ್ ಬೋರ್ಡ್ ಕಡೆ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.
Vijaya Karnataka Web bsy2


ಸಚಿವರಾದ ಆರ್‌ ಅಶೋಕ್, ಡಾ ಅಶ್ವಥ್ ನಾರಾಯಣ, ಸಂಸದ ಪಿ ಸಿ ಮೋಹನ್, ಮೇಯರ್ ಗಂಗಾಂಬಿಕಾ, ಉಪಮೇಯರ್ ಭದ್ರೆಗೌಡ ಸೇರಿದಂತೆ ಪಾಲಿಕೆಯ ಆಡಳಿತ ಪಕ್ಷದ ನಾಯಕರು ಉಪಸ್ಥಿತರಾಗಿದ್ದಾರೆ.

ಮುಖ್ಯಮಂತ್ರಿ ಅವರು ಮೊದಲು ಬೊಮ್ಮನಹಳ್ಳಿ ಭಾಗದ ಕಾಮಗಾರಿ ಪರಿಶೀಲನೆ ಮಾಡಲಿದ್ದಾರೆಂದು ಅವರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ರಸ್ತೆ ಟಿಡಿಆರ್ ಸಮಸ್ಯೆಗೆ ಪರಿಹಾರ ದೊರಕಲಿದ್ದು, ಬಿಎಂಆರ್‌ಸಿಎಲ್‌ನಿಂದ ಪರಿಹಾರ ನೀಡವುದಾಗಿ ಸಿಎಂ ಭರವಸೆ ನೀಡಿದರು.

ಸಿಎಂ ನಗರ ಪ್ರದಕ್ಷಿಣೆ ವೇಳೆ ಮಾಜಿ ಡಿಸಿಎಂ ಹಾಗೂ ಹಾಲಿ ಡಿಸಿಎಂ ಮುಖಾಮುಖಿಯಾದರೂ ಒಬ್ಬರ ಮುಖ ಒಬ್ಬರು ನೋಡದೆ, ಇಬ್ಬರೂ ಅಂತರ ಕಾಯ್ದುಕೊಂಡಂತಿದೆ. ಇದೇ ರೀತಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ನಿಕಟಪೂರ್ವ ಆಯುಕ್ತ ಅಲೋಕ್ ಕುಮಾರ್ ಕೂಡ ಒಬ್ಬರ ಮುಖವನ್ನು ಒಬ್ಬರು ನೀಡಲಿಲ್ಲ. ಸಿಲ್ಕ್ ಬೋರ್ಡ್ ಬಳಿಯ ಪೊಲೀಸ್ ಕಲ್ಯಾಣಮಂಟಪದಲ್ಲಿ ಪಕ್ಕದಲ್ಲಿ ಕುಳಿತುಕೊಳ್ಳದೆ ಬೇರೆ ಆಸನದಲ್ಲಿ ಕೂತರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ