ಆ್ಯಪ್ನಗರ

ಮಳೆ: ಕೊಚ್ಚಿ ಹೋದ ಅರ್ಚಕರ ಪತ್ನಿಗೆ ಸಿಎಂ ಉದ್ಯೋಗ ಭರವಸೆ

ಮಳೆ ಅನಾಹುತದಲ್ಲಿ ಮೃತರಾದ ಕುರುಬರಹಳ್ಳಿಯ ಅರ್ಚಕ ವಾಸುದೇವ ಭಟ್ ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಸಿಎಂ ಹೇಳಿದರು.

Vijaya Karnataka Web 14 Oct 2017, 1:16 pm
ಬೆಂಗಳೂರು: ಮಳೆ ಅನಾಹುತದಲ್ಲಿ ಮೃತರಾದ ಕುರುಬರಹಳ್ಳಿಯ ಅರ್ಚಕ ವಾಸುದೇವ ಭಟ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರು. 'ಇಂಥ ಅನಾಹುತ ಆಗಬಾರದಿತ್ತು. ವಾಸುದೇವ ಭಟ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರಕಾರ ಭರಿಸಲಿದೆ. ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು,' ಎಂದು ಸಿಎಂ ಹೇಳಿದರು.
Vijaya Karnataka Web cm siddaramaiah meet rain victims family
ಮಳೆ: ಕೊಚ್ಚಿ ಹೋದ ಅರ್ಚಕರ ಪತ್ನಿಗೆ ಸಿಎಂ ಉದ್ಯೋಗ ಭರವಸೆ


ಸಾವಿನ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇವಲ ರಾಜಕೀಯ ಕಾರಣಕ್ಕೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚು ಮಳೆ ಬಂದಿರುವುದು ಈ ಅನಾಹುತಗಳಿಗೆ ಕಾರಣ. ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ.

ರಾಜಕಾಲುವೆ ಹೂಳು ತೆಗೆಯಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಗೆ ಜೀವ ತೆತ್ತವರ ಬಗ್ಗೆ ಬಹಳ ದುಃಖವಾಗಿದೆ. ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಮಳೆ ಅನಾಹುತ ಸಂಭವಿಸಿದ ಕುರುಬರಹಳ್ಳಿಯ ನಾನಾ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ