ಆ್ಯಪ್ನಗರ

ಆಪ್ಟಿಕಲ್‌ ಫೈಬರ್‌ ತೆರವು ಕಾರ್ಯಾಚರಣೆಯನ್ನು ಖಂಡಿಸಿದ ಸಿಒಎಐ

ಮೇಲಿಂದ ಹಾದುಹೋಗುವ ಆಪ‍್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು ತೆರವುಗೊಳಿಸುವ ಅಭಿಯಾನವನ್ನು ಹಮ್ಮಿಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಯನ್ನು ಸಿಒಎಐ ಖಂಡಿಸಿದೆ.

Vijaya Karnataka Web 6 Jan 2022, 3:58 pm
ಬೆಂಗಳೂರು: ಮೇಲಿಂದ ಹಾದುಹೋಗುವ ಆಪ‍್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು ತೆರವುಗೊಳಿಸುವ ಅಭಿಯಾನವನ್ನು ಹಮ್ಮಿಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಯನ್ನು ಖಂಡಿಸಿರುವ ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಸಿಒಎಐ) ಖಂಡಿಸಿದ್ದಾರೆ. ಈ ಅಭಿಯಾನದಿಂದ ಬೆಂಗಳೂರಿನ ದೂರಸಂಪರ್ಕ ಸೇವೆಗೆ ಅಡ್ಡಿ ಉಂಟಾಗಲಿದೆ’ ಎಂದು ಹೇಳಿದೆ.
Vijaya Karnataka Web optical fiber


ಕೇವಲ ಟೆಲಿಕಾಂ ಸೇವೆ ಪೂರೈಕೆದಾರರು ಮಾತ್ರವಲ್ಲದೇ, ಸಾರ್ವಜನಿಕರಲ್ಲೂ ಭೀತಿಯನ್ನು ಸೃಷ್ಟಿ ಮಾಡಬಹುದು. ಈ ಕ್ರಮವು ಇಂಟರ್‌ನೆಟ್‌ ಸೇವೆಯ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಐಟಿ ಸಂಸ್ಥೆಗಳು ತೊಂದರೆಗೊಳಗಾಗಲಿವೆ. ಕೋವಿಡ್‌ ಪರಿಸ್ಥಿತಿಯಲ್ಲಿ ಬಹುತೇಕ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನೆಲದಡಿಯಿಂದ ಫೈಬರ್‌ ಸೇವೆಯನ್ನು ಕಲ್ಪಿಸಲು ಸಂಸ್ಥೆಗಳು ಶ್ರಮಿಸುತ್ತಿವೆ. ಹಾಗಾಗಿ ಕೇಬಲ್‌ ತೆರವಿಗೆ ಸಂಬಂಧಿಸಿದಂತೆ ಯಾವುದೇ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು’ ಎಂದು ಸಿಒಎಐನ ವ್ಯವಸ್ಥಾಪಕ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ಎಸ್‌.ಪಿ ಕೊಚ್ಚಾರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಬರೋಬ್ಬರಿ 3,605 ಕೊರೊನಾ ಕೇಸ್..! 24 ಗಂಟೆಗಳಲ್ಲೇ ಡಬಲ್..!

‘ಈ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಮುಂಚಿತವಾಗಿ ತಿಳಿಸದೆಯೇ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕಗ್ಗದಾಸಪುರ, ಯಲಹಂಕ ವಲಯ ಮತ್ತು ಮಹದೇವಪುರ ವಲಯ ಸೇರಿದಂತೆ ನಗರದ ಹಲವೆಡೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಫೈಬರ್‌ ಸಂಪರ್ಕವನ್ನು ಕಡಿತಗೊಳಿಸುವುದರಿಂದ ಡಿಜಿಟಲ್‌ ಬೆಂಗಳೂರು ಯೋಜನೆಗೆ ಬಹಳ ತೊಂದರೆಯಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನೆಲದಡಿಯಿಂದ ಫೈಬರ್‌ ಸೇವೆಯನ್ನು ಕಲ್ಪಿಸಲು 6 ತಿಂಗಳ ಸಮಯ ಅವಕಾಶ ನೀಡಬೇಕು. ಅಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಈ ಹಿಂದೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಆದರೆ, ಬಿಬಿಎಂ‍ಪಿ ಅಧಿಕಾರಿಗಳು ಈ ಅಭಿಯಾನವನ್ನು ಮತ್ತೆ ಪ್ರಾರಂಭಿಸಿದ್ದಾರೆ ಎಂದು ಸಿಒಎಐ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ