ಆ್ಯಪ್ನಗರ

ನಾಗವಾರದ ಕಾಲೇಜಿಗೆ ಬಂದ ನಾಲ್ಕು ಅಡಿ 'ನಾಗರಾಜ'

ಮಳೆಗಾಲ ಬಂತೆಂದರೆ ಹಾವುಗಳ ಕಾಟ ತಪ್ಪಿದ್ದಲ್ಲ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಹಾವುಗಳು ಕೊಡುವ ಹಾವಳಿಗೆ ಜನ ತತ್ತರಿಸುತ್ತಿದ್ದಾರೆ. ಮನೆ, ಬೈಕ್, ಕಾರು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಬೆಚ್ಚಿಬೀಳಿಸುತ್ತವೆ ಹಾವುಗಳು. ಇತ್ತೀಚೆಗೆ ನಾಗವಾರದ ಕಾಲೇಜೊಂದಲ್ಲಿ ನಾಗರಹಾವೊಂದು ಕಾಣಿಸಿಕೊಂಡು ವಿದ್ಯಾರ್ಥಿಗಳನ್ನು ಗಲಿಬಿಲಿಗೊಳಿಸಿದೆ.

ಟೈಮ್ಸ್ ಆಫ್ ಇಂಡಿಯಾ 2 Jun 2017, 7:44 pm
ಬೆಂಗಳೂರು: ಮಳೆಗಾಲ ಬಂತೆಂದರೆ ಹಾವುಗಳ ಕಾಟ ತಪ್ಪಿದ್ದಲ್ಲ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಹಾವುಗಳು ಕೊಡುವ ಹಾವಳಿಗೆ ಜನ ತತ್ತರಿಸುತ್ತಿದ್ದಾರೆ. ಮನೆ, ಬೈಕ್, ಕಾರು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಬೆಚ್ಚಿಬೀಳಿಸುತ್ತವೆ ಹಾವುಗಳು. ಇತ್ತೀಚೆಗೆ ನಾಗವಾರದ ಕಾಲೇಜೊಂದಲ್ಲಿ ನಾಗರಹಾವೊಂದು ಕಾಣಿಸಿಕೊಂಡು ವಿದ್ಯಾರ್ಥಿಗಳನ್ನು ಗಲಿಬಿಲಿಗೊಳಿಸಿದೆ.
Vijaya Karnataka Web cobra comes to college at nagawara
ನಾಗವಾರದ ಕಾಲೇಜಿಗೆ ಬಂದ ನಾಲ್ಕು ಅಡಿ 'ನಾಗರಾಜ'


ಈ ನಾಗರಾಜನ್ನು ನೋಡಿದ ಚಿರಾಗ್ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳು ಹಾಗೂ ಸೆಕ್ಯುರಿಟಿಗೆ ತಿಳಿಸಿದ್ದಾನೆ. ಇವರೆಲ್ಲರ ಗದ್ದಲ ಕೇಳಿದ ನಾಗರಾಜ ಸೀದಾ ಹೋಗಿ ಬೈಕ್ ಒಂದರ ಸೀಟ್ ಕೆಳಗೆ ನುಸುಳಿದ್ದಾನೆ. ಕಾಲೇಜಿನ ಪಾರ್ಕಿಂಗ್ ಲಾಟ್‌ನಲ್ಲಿ ಗದ್ದಲವೋ ಗದ್ದಲ ಶುರುವಾಗಿ ಸ್ವಲ್ಪ ಸಮಯ ಯಾರೂ ಬೈಕ್ ಮುಟ್ಟಕ್ಕೆ ಹೋಗಿಲ್ಲ.

ಎಲ್ಲರೂ ಹಾವಿನ ವಿಡಿಯೋ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದರು. ಯಾರೋ ಒಬ್ಬರು ಕೋಲು ಎಸೆದು ಹಾವು ಹೊರಬರುವಂತೆ ಮಾಡಿದ. ಆದರೂ ನಾಗಪ್ಪ ಡೋಂಟ್ ಕೇರ್ ಅಂತು. ಕಡೆಗೆ ಹಾವು ಹಿಡಿಯುವ ವ್ಯಕ್ತಿಗೆ ಕರೆ ಮಾಡಿ ಕಾಲೇಜಿಗೆ ಕರೆಸಿದ್ದಾರೆ.

ಜಪ್ಪಯ್ಯ ಎಂದರೂ ಕದಲದ ಹಾವನ್ನು ಹೇಗೋ ಹರಸಾಹಸ ಪಟ್ಟು ಹೊರಗೆ ತೆಗೆದು ಎಲ್ಲರೂ ನಿಟ್ಟುಸಿರುವ ಬಿಟ್ಟಿದ್ದಾರೆ. ಅಲ್ಲಿಗೆ ನಾಗರಾಜನನ್ನು ಬಂಧಿಸುವ ವೇಳೆಗೆ ಸಾಕುಬೇಕಾಗಿತ್ತು. ನಾಗರಾಜ ಎಲ್ಲರೂ ಹೈರಾಣಾಸಿದ್ದ.

Panic spread at the parking lot of the City College near Nagawara after students saw a four-ft-long cobra crawling all around, which later ended up on a student’s bike. Chirag Lokhare, a student, was the first to see the snake. He called other students and they along with a security guard chased the snake, which went under the rider’s seat of a two-wheeler.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ