ಆ್ಯಪ್ನಗರ

ಉಗ್ರದಾಳಿ ಸಮರ್ಥನೆ: ಬೆಂಗಳೂರಲ್ಲೂ ದೂರು ದಾಖಲು

ಅಬೀದ್‌ ಮಲೀಕ್‌ ಎಂಬಾತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಸಮುದಾಯಗಳ ನಡುವೆ ದ್ವೇಷಭಾವನೆ ಸೃಷ್ಟಿಸುವ ಪೋಸ್ಟ್‌ ಮಾಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka Web 16 Feb 2019, 5:23 pm
ಬೆಂಗಳೂರು: ಉಗ್ರರ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಸಮರ್ಥಿಸಿಕೊಂಡ ಬೆಂಗಳೂರಿನ ಕಂಪನಿಯಲ್ಲಿಕೆಲಸ ಮಾಡಿದ್ದ ಕಾಶ್ಮೀರ ಮೂಲದ ಯುವಕನ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web Abid Byari


ಹಿಂದೂಪರ ಸಂಘಟನೆಯ ಗಿರೀಶ್‌ ಭಾರದ್ವಾಜ್‌ ಎಂಬುವರು ನೀಡಿದ ದೂರು ಆಧರಿಸಿ ಅಬೀದ್‌ ಮಲೀಕ್‌ ಎಂಬಾತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಸಮುದಾಯಗಳ ನಡುವೆ ದ್ವೇಷಭಾವನೆ ಸೃಷ್ಟಿಸುವ ಪೋಸ್ಟ್‌ ಮಾಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ದಾಳಿ ಸ್ಥಳದ ಫೋಟೋಗಳನ್ನು ಜಾಲತಾಣದಲ್ಲಿಅಪ್‌ಲೋಡ್‌ ಮಾಡಿರುವ ಮಲೀಕ್‌, ದಿ ರಿಯಲ್‌ ಸರ್ಜಿಕಲ್‌ ಅಟ್ಯಾಕ್‌ ಎಂದು ಪೋಸ್ಟ್‌ ಮಾಡಿದ್ದಲ್ಲದೇ, ಆತ್ಮಹುತಿ ದಾಳಿ ನಡೆಸಿದ ಉಗ್ರನ ಪರವಾಗಿ ಶ್ರದ್ಧಾಂಜಲಿ ಕೋರಿದ್ದಾನೆ.


ಯೋಧರ ಮೇಲಿನ ಉಗ್ರರ ದಾಳಿ ಕುರಿತು ಅವಹೇಳನಕಾರಿಯಾಗಿ, ದೇಶ ವಿರೋಧಿ ಪೋಸ್ಟ್‌ ಮಾಡಿರುವ ವ್ಯಕ್ತಿಯ ಬಂಧನಕ್ಕೆ ಕೇಂದ್ರದ ಏಜೆನ್ಸಿಗಳೊಂದಿಗೆ ಮಾಹಿತಿ ಹಂಚಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ