ಆ್ಯಪ್ನಗರ

ಬಿಜೆಪಿ ನಾಯಕರ ಹಗರಣ ಬಗೆಯಲು ಸಮಿತಿ ರಚನೆ

ಇಂಧನ ಸಚಿವ ಡಿಕೆ ಶಿವಕುಮಾರ್‌ ವಿರುದ್ಧ ಹೋರಾಡಲು ನಿರ್ಧರಿಸಿದ ಬಿಜೆಪಿ ನಾಯಕರ ವಿರುದ್ಧದ ಹಗರಣ ಕೆದಕಿ ತಿರುಗೇಟು ನೀಡಲು ಕಾಂಗ್ರೆಸ್‌ ಮುಂದಾಗಿದೆ...

ವಿಕ ಸುದ್ದಿಲೋಕ 18 Aug 2017, 7:58 am

ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್‌ ಪ್ರತಿ ತಂತ್ರ:

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಹೋರಾಡಲು ನಿರ್ಧರಿಸಿದ ಬಿಜೆಪಿ ನಾಯಕರ ವಿರುದ್ಧದ ಹಗರಣ ಕೆದಕಿ ತಿರುಗೇಟು ನೀಡಲು ಕಾಂಗ್ರೆಸ್‌ ಮುಂದಾಗಿದೆ.

Vijaya Karnataka Web congress formed committee to probe the bjp leader scam
ಬಿಜೆಪಿ ನಾಯಕರ ಹಗರಣ ಬಗೆಯಲು ಸಮಿತಿ ರಚನೆ


ಹೈಕಮಾಂಡ್‌ ಇಶಾರೆಯಂತೆ ಈ ಪ್ರತಿತಂತ್ರ ಹೂಡಲು ಪ್ರದೇಶ ಕಾಂಗ್ರೆಸ್‌ ತೀರ್ಮಾನಿಸಿದೆ. ಜತೆಗೆ ಈ ಹೊರಾಟದ ಉಸ್ತುವಾರಿಯನ್ನು ಸಚಿವ ಶಿವಕುಮಾರ್‌ ಅವರೇ ವಹಿಸಿಕೊಳ್ಳಲಿದ್ದಾರೆ. ಈ ಉದ್ದೇಶಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿಗಳು, ಸಾಮಾಜಿಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಒಳಗೊಂಡ ಸಮಿತಿಯನ್ನು ಶಿವಕುಮಾರ್‌ ರಚಿಸುತ್ತಾರೆ. ದಾಖಲೆ ಸಂಗ್ರಹದ ಬಳಿಕ ಡಿಕೆಶಿ ಮತ್ತು ಕಾಂಗ್ರೆಸ್‌ ನಾಯಕರು ಫೀಲ್ಡಿಗೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರಕಾರದ ಅವಧಿಯ ಅಕ್ರಮಗಳನ್ನು ಮತ್ತೆ ಅಗೆದು ತೆಗೆಯುವುದು ಕಾಂಗ್ರೆಸ್‌ನ ಕಾರ್ಯತಂತ್ರವಾಗಲಿದೆ.

ಯಾರ್ಯಾರ ದಾಖಲೆ ಸಂಗ್ರಹ?:

ಅನಂತ್‌ ಕುಮಾರ್‌, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್‌. ಅಶೋಕ್‌, ಕೆ.ಎಸ್‌. ಈಶ್ವರಪ್ಪ ಸಹಿತ ಬಿಜೆಪಿ ಪ್ರಮುಖರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ