ಆ್ಯಪ್ನಗರ

ಮುನಿರತ್ನ ಪರ ಕೆಲಸ ಮಾಡಿದ್ರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ! ಖಾಕಿಗೆ ಸಿದ್ದರಾಮಯ್ಯ ಎಚ್ಚರಿಕೆ

ಮುನಿರತ್ನ ಪರ ಕೆಲಸ ಮಾಡಿದ್ರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ! ಎಂದು ಪೊಲೀಸ್ ಇಲಾಖೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಅವರು ಪೊಲೀಸ್ ಇಲಾಖೆಯ ಮೇಲೆ ಗರಂ ಆಗಲು ಕಾರಣ ಏನು?

Vijaya Karnataka Web 30 Oct 2020, 1:20 pm
ಬೆಂಗಳೂರು: ಪೊಲೀಸರೇ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ! ಹೀಗಂತ ಖಾಕಿಗೆ ಎಚ್ಚರಿಕೆ ಕೊಟ್ಟಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ರಾಜರಾಜೇಶ್ವರಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ನಮ್ಮ ಪರವಾಗಿ ಕೆಲಸ ಮಾಡಿ ಎಂದು ಕೇಳಲು ನಾನು ಹೋಗುವುದಿಲ್ಲ. ಕಾನೂನು ಪ್ರಕಾರ ಕೆಲಸ ಮಾಡಿ. ಕಾನೂನು ಬಿಟ್ಟು ಬೇರೆ ರೀತಿ ಹೋದರೆ ನಿಮಗೆ ಕೆಟ್ಟ ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
Vijaya Karnataka Web siddaramaiah r r nagara


ಪೊಲೀಸ್ ಇಲಾಖೆ ಮುನಿರತ್ನ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುನಿರತ್ನ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಶಾಸಕರಾಗಿದ್ದುಕೊಂಡು ಏನು ಕಷ್ಟ ಇತ್ತು, ಏಕೆ ಪಕ್ಷವನ್ನು ಬಿಟ್ಟು ಹೋದೆ? ಎಂದು ಪ್ರಶ್ನಿಸಿದರು.

ನಿಶ್ಚಿತಾರ್ಥಕ್ಕೆ ವಧು ಹುಡುಕಿಲ್ಲ, ಆಗಲೇ ಮಗುವಿನ ನಾಮಕರಣಕ್ಕೆ ತಯಾರಿ! ಕಾಂಗ್ರೆಸ್ 'ಸಿಎಂ' ಚರ್ಚೆಗೆ ನಳಿನ್ ವ್ಯಂಗ್ಯ

ಆರ್‌ ಆರ್‌ ನಗರದಲ್ಲಿ ಜನರು ಮುನಿರತ್ನ ಅಂತ ಓಟ್ ಹಾಕಿಲ್ಲ, ಬದಲಾಗಿ ಕಾಂಗ್ರೆಸ್ ಅಭ್ಯರ್ಥಿ ಎಂದು ಓಟ್ ಹಾಕಿದ್ದು ಇದನ್ನು ಮರಿಯಬೇಡ ಎಂದರು. ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದ್ದೇನೆ ಎಂದು ಊರು ತುಂಬಾ ಹೇಳುತ್ತಿರುತ್ತಿಯಾ, ಆದರೆ ಅಭಿವೃದ್ದಿಗೆ ದುಡ್ಡು ಕೊಟ್ಟಿದ್ದು ಯಾರು? 2000 ಕೋಟಿ ಕೊಟ್ಟಿದ್ದು ನಾನು ಸಿಎಂ ಆಗಿದ್ದಾಗ ಎಂದ ಅವರು ಎಷ್ಟು ಹಣ ತೆಗೆದುಕೊಂಡಿದ್ಯಾ ಎಂದು ಗರಂ ಆದರು.

ಕಾಂಗ್ರೆಸ್ ಸರ್ಕಾರದ ದುಡ್ಡು ಪಡೆದುಕೊಂಡು ನಾನು ಅಭಿವೃದ್ದಿ ಮಾಡಿದೆ ಎಂದು ಹೇಳಲು ನಾಚಿಕೆಯಾಗಲ್ವಾ ಮುನಿರತ್ನ. ನಿಮ್ಮ ಮನೆಯ ದುಡ್ಡಾ ಎಂದು ಕೆಂಡಾಮಂಡಲಾದರು. ಆರ್‌ ಆರ್‌ ನಗರ ಕಾಂಗ್ರೆಸ್ ಭದ್ರ ಕೋಟೆ, ನೀನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಪ್ಪು ಮಾಡಿದ್ಯಾ, ಈ ಬಾರಿ ನಿನ್ನನ್ನು ಸೋಲಿಸಲೇ ಬೇಕು ಎಂದು ತೀರ್ಮಾನ ಜನ ಮಾಡಿದ್ದಾರೆ. ನಿನ್ನಂತವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದ ಅವರು ಎಷ್ಟೆಲ್ಲಾ ತಪ್ಪು ಮಾಡಿದ್ವಾ ಕಣ್ಣೀರು ಬೇರೆ ಹಾಕ್ತೀಯಾ ಎಂದು ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ