ಆ್ಯಪ್ನಗರ

ಬಿಜೆಪಿಯ ರಾಹುಕಾಲ ಕಳೆದು ಕಾಂಗ್ರೆಸ್‌ನ 'ರಾಹುಲ್ ಕಾಲ'ದ ನಿರೀಕ್ಷೆಯಲ್ಲಿ ಬಿ.ಕೆ ಹರಿಪ್ರಸಾದ್!

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು (ಏ.11-ಸೋಮವಾರ) ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬಡವರು ಹಾಗೂ ದುರ್ಬಲ ವರ್ಗದವರ ಪರವಾಗಿ ನಿಲ್ಲಬೇಕಾಗಿರುದು ಕಾಂಗ್ರೆಸ್ ಜವಾಬ್ದಾರಿ. ಹೀಗಾಗಿ ಬೆಲೆ ಏರಿಕೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದು ಘೋಷಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರುವ ತನಕ ದೇಶಕ್ಕೆ ರಾಹುಕಾಲ ತಪ್ಪಿದ್ದಲ್ಲ ಎಂದು ಇದೇ ವೇಳೆ ಬಿ.ಕೆ ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.

Authored byಇರ್ಷಾದ್ ಉಪ್ಪಿನಂಗಡಿ | Edited byನಿಖಿಲ್\u200c ಕುಲಕರ್ಣಿ | Vijaya Karnataka Web 12 Apr 2022, 10:44 am

ಹೈಲೈಟ್ಸ್‌:

  • 'ಬಿಜೆಪಿ ಅಧಿಕಾರದಲ್ಲಿದ್ದರೆ ಅಮೃತಕಾಲ ಅಲ್ಲ ರಾಹುಕಾಲ ಇರುತ್ತದೆ'.
  • ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ.
  • ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.
  • ಕಾಂಗ್ರೆಸ್ ಬಡವರು ಹಾಗು ದುರ್ಬಲ ವರ್ಗದ ಪರ ಇದೆ ಎಂದ ಬಿ.ಕೆ ಹರಿಪ್ರಸಾದ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BK Hariprasad
ಬಿ.ಕೆ ಹರಿಪ್ರಸಾದ್ (ಸಂಗ್ರಹ ಚಿತ್ರ)
ಬೆಂಗಳೂರು: ಎಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಅಮೃತಕಾಲ ಅಲ್ಲ, ರಾಹುಕಾಲ ಇರಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು (ಏ.11-ಸೋಮವಾರ) ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಡವರು ಹಾಗೂ ದುರ್ಬಲ ವರ್ಗದವರ ಪರವಾಗಿ ನಿಲ್ಲಬೇಕಾಗಿರುದು ಕಾಂಗ್ರೆಸ್ ಜವಾಬ್ದಾರಿ. ಹೀಗಾಗಿ ಬೆಲೆ ಏರಿಕೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಎಲ್ಲರೂ ಹಿಂದಿ ಮಾತನಾಡಬೇಕು ಎಂದು ಫರ್ಮಾನು ಹೊರಡಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪನ್ನಾದರೂ ಈ ನಾಯಕರು ಒಮ್ಮೆ ಓದಬೇಕು ಎಂದು ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರಿಗೆ ತೊಂದರೆ ಕೊಟ್ಟ ಘಟನೆ, ರಾಜ್ಯದ ಜನರು ತಲೆತಗ್ಗಿಸುವಂತೆ ಮಾಡಿದೆ. ಕಲ್ಲಂಗಡಿ ವ್ಯಾಪಾರ ಮಾಡುವ ವ್ಯಕ್ತಿಗೆ ಕಿರುಕುಳ ಮಾಡುವ ಇವರನ್ನು ಶೂರರು ಎನ್ನಲು ಸಾಧ್ಯವೆ? ಸರ್ಕಾರಕ್ಕೆ ಈ ಪುಂಡರನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಬಿ.ಕೆ ಹರಿಪ್ರಸಾದ್ ಹರಿಹಾಯ್ದರು.

ಬಿಜೆಪಿ ಹಾಗೂ ಆರೆಸ್ಸೆಸ್‌ನವರಿಂದಾಗಿ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಹೆಂಡ ಕುಡಿಯುವ ಅಭ್ಯಾಸ ಇಲ್ಲ ಆದರೆ ಗಾಂಜಾ ಸೇದುವ ಅಭ್ಯಾಸ ಇರಬಹುದು. ಹೀಗಾಗಿಯೇ ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇಂತಹವರು ಗೃಹ ಸಚಿವ ಆಗಿರುವುದು ನಮ್ಮ ದುರಾದೃಷ್ಟ ಎಂದು ಬಿ.ಕೆ ಹರಿಪ್ರಸಾದ್ ತೀವ್ರ ತರಾಟೆಗೆ ತೆಗೆದುಕೊಂಡರು.

ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಏಜೆಂಟ್ ಆಗಿ ಕೆಲಸ ಮಾಡಿತ್ತು. ಆದರೆ ಈ ದೇಶದ ಎಲ್ಲ ಧರ್ಮದ, ಎಲ್ಲ ವರ್ಗದ ಸಾಮಾನ್ಯ ಜನರು, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಂನವನ್ನು ಬಲಿದಾನ ಮಾಡಿದ್ದಾರೆ. ಆರ್‌ಎಸ್‌ಎಸ್‌ನವರು ಬಾಯಿ ಮಾತಿಗೆ ಅಂಬೇಡ್ಕರ್ ಹೆಸರು ಹೇಳುತ್ತಾರೆ, ಆದರೆ ಗೋಡ್ಸೆ, ಸಾವರ್ಕರ್ ಅವರ ಕೆಲಸ ಮಾಡುತ್ತಾರೆ. ಹಿಂದೂ ಧರ್ಮಕ್ಕೂ ಇವರು ಹೇಳುವ ಹಿಂದುತ್ವಕ್ಕೂ ಸಂಬಂಧವೇ ಇಲ್ಲ ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು.

"ಆರ್‌ಎಸ್‌ಎಸ್‌ ನವರು 'ದ್ವೇಷ' ಭಕ್ತರು" : ಕೊಪ್ಪಳದಲ್ಲಿ ಬಿಕೆ ಹರಿಪ್ರಸಾದ್ ಆಕ್ರೋಶ
ಹಿಂದೂ ಧರ್ಮದಲ್ಲಿ ಸಹಿಷ್ಣುತೆ, ಸತ್ಯ , ಅಹಿಂಸೆಯ ತತ್ವಗಳಿವೆ. ಆದರೆ ಆರ್‌ಎಸ್‌ಎಸ್‌ನವರ ಹಿಂದುತ್ವ ಅಂದರೆ ಹಿಂಸೆ, ದೌರ್ಜನ್ಯ, ಕೋಮು ದಳ್ಳುರಿ ಎಂದು ಬಿ.ಕೆ ಹರಿಪ್ರಸಾದ್ ಹರಿಹಾಯ್ದರು. ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದ್ದು, ನಾವು ಪ್ರಾಣ ಕೊಟ್ಟಾದರೂ ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಬಿ.ಕೆ ಹರಿಪ್ರಸಾದ್ ಈ ವೇಳೆ ಭರವಸೆ ನೀಡಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ