ಆ್ಯಪ್ನಗರ

ಬೆಂಗಳೂರಲ್ಲಿ 10 ಸಾವಿರ ದಾಟಿದ ಸೋಂಕಿತರ ಸಂಖ್ಯೆ: ಒಂದೇ ದಿನ 981 ಪ್ರಕರಣ!

ರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕು ಸಮುದಾಯಕ್ಕೆ ಹರಡಿದ್ದು, ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಸೋಮವಾರ ಒಂದೇ ದಿನ 981 ಪ್ರಕರಣಗಳು ವರದಿಯಾಗಿದ್ದು, 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Vijaya Karnataka Web 6 Jul 2020, 10:50 pm
ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕು ಸಮುದಾಯಕ್ಕೆ ಹರಡಿದ್ದು, ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಸೋಮವಾರ ಒಂದೇ ದಿನ 981 ಪ್ರಕರಣಗಳು ವರದಿಯಾಗಿದ್ದು, 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
Vijaya Karnataka Web Coronavirus test tube


ಸಿಲಿಕಾನ್‌ ಸಿಟಿಯಲ್ಲಿ ಈವರೆಗೆ 10,561 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1545 ಮಂದಿ ಮಾತ್ರ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ಒಟ್ಟು 8,860 ಮಂದಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ಸೋಂಕು 155 ಮಂದಿಯ ಜೀವ ತೆಗೆದಿದೆ. ನಿತ್ಯ 10ಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗುತ್ತಿರುವುದು ಜನರಲ್ಲಿ ದಿಗಿಲು ಹುಟ್ಟಿಸಿದೆ. ಒಟ್ಟು 10 ಮಂದಿ ಸಾವಿಗೀಡಾದವರಲ್ಲಿ 44 ವರ್ಷದ ವ್ಯಕ್ತಿಯೊಬ್ಬರನ್ನು ಹೊರತುಪಡಿಸಿ, ಉಳಿದವರೆಲ್ಲರೂ 50 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ.

ಕಿದ್ವಾಯಿಯಲ್ಲಿ10 ಸಿಬ್ಬಂದಿ, 20 ರೋಗಿಗಳಿಗೆ ಕೊರೊನಾ: ಜು. 9ರವರೆಗೆ ಶಸ್ತ್ರ ಚಿಕಿತ್ಸೆ, ಒಪಿಡಿ ಸ್ಥಗಿತ!

ಬಿಎಂಟಿಸಿಯಲ್ಲಿಸೋಂಕಿತರ ಸಂಖ್ಯೆ 65ಕ್ಕೆ ಏರಿಕೆ
ಕಳೆದೆರಡು ದಿನಗಳಲ್ಲಿ ಬಿಎಂಟಿಸಿಯ 6 ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 65ಕ್ಕೆ ಏರಿದೆ. 65 ಪ್ರಕರಣಗಳ ಪೈಕಿ 31 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 34 ಸಿಬ್ಬಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೊಬ್ಬರಿ ಎಣ್ಣೆ ಸಹಾಯಕವೇ? ವೈದ್ಯಕೀಯ ಮ್ಯಾಗಜಿನ್‌ ವರದಿ ಇದು!

ಸೋಂಕಿತರಿಗಾಗಿ 250 ಆಂಬ್ಯುಲೆನ್ಸ್‌:
ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ 71 ಆಂಬ್ಯುಲೆನ್ಸ್‌ ಮತ್ತು 179 ಟೆಂಪೊ ಟ್ರಾವೆಲರ್‌ಗಳನ್ನು ಎಂಟೂ ವಲಯಗಳಿಗೆ ಹಂಚಿಕೆ ಮಾಡಲಾಗಿದೆ.
  • * 1545 ಗುಣಮುಖ
  • * ಸಕ್ರಿಯ 8860
  • *ಸಾವು 155

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ