ಆ್ಯಪ್ನಗರ

ಬೆಂಗಳೂರಿನಲ್ಲಿ ಮಾಸ್ಕ್‌ ಧರಿಸದಿದ್ದರೆ ಬೀಳುತ್ತೆ 1 ಸಾವಿರ ದಂಡ!

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮುಖಗವಸು ಧರಿಸದೆ ಬೆಂಗಳೂರಿನಲ್ಲಿ ಓಡಾಡುವವರಿಗೆ ಒಂದು ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ತೀರ್ಮಾನಿಸಿದೆ.

Vijaya Karnataka Web 1 May 2020, 9:30 am
ಬೆಂಗಳೂರು: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಮುಖಗವಸು (ಮಾಸ್ಕ್‌) ಧರಿಸದೆ ನಗರದಲ್ಲಿ ಓಡಾಡುವವರಿಗೆ ಒಂದು ಸಾವಿರ ರೂ. ದಂಡ ಮತ್ತು ಪ್ರಕರಣ ದಾಖಲಿಸಲು ಬಿಬಿಎಂಪಿ ಮುಂದಾಗಿದೆ. ಈ ನಿಯಮವು ಶುಕ್ರವಾರದಿಂದಲೇ ಜಾರಿಗೆ ಬರುವ ಸಾಧ್ಯತೆಗಳಿವೆ.
Vijaya Karnataka Web Bengaluru


ಪಾಲಿಕೆಯ ಆರೋಗ್ಯಾಧಿಕಾರಿಗಳು, ವಾರ್ಡ್‌ವಾರು ನೇಮಿಸಲ್ಪಟ್ಟ ಮಾರ್ಷಲ್‌ಗಳು ಮತ್ತು ಪೊಲೀಸರು ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಿದ್ದಾರೆ. ಮೊದಲ ಸಲ ಒಂದು ಸಾವಿರ ರೂ., ಎರಡನೇ ಸಲ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ ಹಾಕಲಾಗುತ್ತದೆ.

ಅಷ್ಟೇ ಅಲ್ಲ, ಎಲ್ಲೆಂದರಲ್ಲಿ ಉಗುಳುವ, ಮಲ, ಮೂತ್ರ ವಿಸರ್ಜಿಸುವವರಿಗೂ ತಲಾ ಒಂದು ಸಾವಿರ ರೂ., ಎರಡನೇ ಸಲವೂ ತಪ್ಪು ಮಾಡಿದರೆ 2 ಸಾವಿರ ರೂ. ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುತ್ತದೆ. ಹಾಗೆಯೇ, ಮಾಸ್ಕ್‌ಗಳನ್ನು ಕಸದೊಂದಿಗೆ ಮಿಶ್ರ ಮಾಡಿ ನೀಡುವವರಿಗೂ ಒಂದು ಸಾವಿರ ರೂ. ದಂಡ ಹಾಕಲಾಗುತ್ತದೆ.

ಕೊರೊನಾ ಲೈವ್ ಅಪ್‌ಡೇಟ್ಸ್; ದೇಶದಲ್ಲಿ 34,863ಕ್ಕೇರಿದ ಸೋಂಕಿತ ಪ್ರಕರಣಗಳು!


''ಸಾರ್ವಜನಿಕರು ಬಳಸಿದ ಮಾಸ್ಕ್‌ಗಳನ್ನು ಕಸದೊಂದಿಗೆ ಮಿಶ್ರ ಮಾಡಿ ಕೊಡುವಂತಿಲ್ಲ. ಪ್ರತ್ಯೇಕ ಬ್ಯಾಗ್‌ಗಳಲ್ಲಿ ಮಾಸ್ಕ್‌ಗಳನ್ನು ಹಾಕಿ ಪೌರ ಕಾರ್ಮಿಕರಿಗೆ ನೀಡಬೇಕು. ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ಕೊಟ್ಟವರಿಗೆ ಒಂದು ಸಾವಿರ ರೂ. ದಂಡ ಹಾಕಲಾಗುವುದು,'' ಎಂದು ಪಾಲಿಕೆಯ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ