ಆ್ಯಪ್ನಗರ

ಬೆಂಗಳೂರು ಲಾಕ್‌ಡೌನ್‌ Live: ನಗರದಲ್ಲಿ ಐವರಿಗೆ ಕೊರೊನಾ; ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆ

ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರು ರಾಜ್ಯ ರಾಜಧಾನಿಯಲ್ಲೇ ಇದ್ದಾರೆ. ಆದರೆ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಕಂಟೈನ್‌ಮೆಂಟ್‌ ಝೋನ್‌ಗಳನ್ನು ಹೊರತುಪಡಿಸಿ ಉಳಿದೆಡೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಬಸ್‌ಗಳ ಸಂಚಾರವೂ ಪುನಾರಂಭಗೊಂಡಿದೆ.

Vijaya Karnataka Web 22 May 2020, 4:10 pm
ಕೊರೊನಾ ವೈರಸ್ ಅಬ್ಬರ‌ ವಿಶ್ವದೆಲ್ಲೆಡೆ ಹೆಚ್ಚಾಗಿದ್ದು, ದೇಶದಲ್ಲೇ‌ ಒಂದು ಲಕ್ಷ ದಾಟಿದೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 261 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆ ರೆಡ್‌ ಝೋನ್‌ ವ್ಯಾಪ್ತಿಯಲ್ಲಿ ಇದೆ. ಆದರೆ, ನಗರ ಸೇರಿ ದೇಶಾದ್ಯಂತ ಲಾಕ್‌ಡೌನ್‌ ಸಡಿಲಗೊಂಡಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.
Vijaya Karnataka Web ಊರಿಗೆ ಹೋಗಲು ಸಿದ್ಧರಾದ ಉತ್ತರಾಖಂಡ ವಲಸಿಗರು
ಊರಿಗೆ ಹೋಗಲು ಸಿದ್ಧರಾದ ಉತ್ತರಾಖಂಡ ವಲಸಿಗರು


- ಕರ್ನಾಟಕ ರಾಜ್ಯದಲ್ಲಿ ಒಂದೇ ದಿನ 11 ಸಾವಿರಕ್ಕೂ ಅಧಿಕ ಕೋವಿಡ್ 19 ಪರೀಕ್ಷೆಯನ್ನು ನಡೆಸಲಾಗಿದೆ.

- ಜುಲೈ 1 ರಿಂದ 14ರವರೆಗೆ ಸಿಐಸಿಎಸ್‌ಇ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಯಾನಿಟೈಸರ್‌ ತರಬೇಕೆಂದು ಪರೀಕ್ಷಾ ಮಂಡಳಿ ಸೂಚನೆ ನೀಡಿದೆ. ಅಲ್ಲದೆ, ಕೈ ಗವಸು ಧರಿಸಿ ಪರೀಕ್ಷೆ ಬರೆಯಬಹುದು. ಇದು ಕಡ್ಡಾಯವಲ್ಲ ಎಂದೂ ತಿಳಿಸಿದೆ.

- ಮೇ 31ರವರೆಗೆ ಶ್ರಮಿಕ್‌ ರೈಲಿನಲ್ಲಿ ತಮ್ಮ ಊರಿಗೆ ಹೋಗುವ ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸೋದಾಗಿ ಸಿಎಂ ಕಚೇರಿ ಮಾಹಿತಿ ನಿಡಿದೆ.

- ಬೆಂಗಳೂರು ನಗರದಲ್ಲಿ ಹೊಸದಾಗಿ ಐವರಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ.

- ಲಾಕ್‌ಡೌನ್‌ ವೇಳೆ ಕೋಟಿ ಕೋಟಿ ಡೀಲ್‌ ನಡೆಸಿದ್ದ ಎಸಿಪಿ ಪ್ರಭುಶಂಕರ್‌ ಸೇರಿ ಅನೇಕ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೇಡ್‌ಗೂ ಮುನ್ನವೇ ಪ್ರಭುಶಂಕರ್‌ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಎಸಿಪಿ ಪ್ರಭುಶಂಕರ್‌ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ.

- ಬೆಂಗಳೂರು - ಮೈಸೂರು ರೈಲು ಇಂದು ನಗರದಿಂದ ತೆರಳಿದ್ದು, ಎರಡು ತಿಂಗಳಿಂದ ನಿಂತಿದ್ದ ಪ್ರಯಾಣಿಕ ರೈಲು ಸೇವೆ ಪುನಾರಂಭಗೊಂಡಿದೆ. ಬೆಂಗಳೂರು - ಬೆಳಗಾವಿ ರೈಲು ಸೇವೆ ಸಹ ಇಂದಿನಿಂದ ಪುನಾರಂಭವಾಗಿದೆ.

ಬೆಂಗಳೂರು: ಭ್ರಷ್ಟರ ಮನೆ ಮೇಲೆ ಎಸಿಬಿ ದಾಳಿ; ಕೋಟಿ ಕೋಟಿ ಡೀಲ್‌ ನಡೆಸಿದ್ದ ಪ್ರಭುಶಂಕರ್‌ ಎಸ್ಕೇಪ್‌!


- ಬೆಂಗಳೂರಿನಲ್ಲಿ ಎಚ್‌ಐವಿ ಪಾಸಿಟಿವ್‌ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಇವರು ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ವೈದ್ಯರು ಇವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಇಂದಿನ ಪೆಟ್ರೋಲ್‌, ಡೀಸೆಲ್‌ ದರದ ಬೆಲೆ ವಿವರ ಇಲ್ಲಿದೆ..

- ಬೆಂಗಳೂರಿನಿಂದ ದಿಲ್ಲಿಗೆ ಹೋಗಲು ವಿಮಾನ ದರ 4,500 ರೂ. ನಿಂದ 13 ಸಾವಿರದವರೆಗೆ ಇದೆ ಎಂದು ಡಿಜಿಸಿಎ ಮಾಹಿತಿ ನೀಡಿದೆ. ಮೇ 25 ರಿಂದ ದೇಶೀಯ ವಿಮಾನಯಾನ ಸಂಪರ್ಕಕ್ಕೆ ಅವಕಾಶ ಮಾಡಿಕೊಡಲಾಗಿದೆ.

ರೈಲು ಸೇವೆ ಮರು ಆರಂಭ: ಮೊದಲ ರೈಲು ಎಸ್‌ಬಿಸಿ ನಿಲ್ದಾಣದಿಂದ ಬೆಳಗಾವಿಯತ್ತ

- ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸುವವರಿಗೆ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ಮಾಡುವುದಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಬಸ್‌, ರೈಲುಗಳಲ್ಲಿ ಪ್ರಯಾಣಿಸುವವರಿಗೆ ತಮ್ಮ ಪ್ರಯಾಣದ ಆರಂಭದಲ್ಲಿ ತಪಾಸಣೆ ಮಾಡಲಾಗುತ್ತದೆ. ಕೋವಿಡ್‌ 19 ಸೋಂಕಿನ ಲಕ್ಷಣ ಇಲ್ಲದಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸರಕಾರ ಮಾಹಿತಿ ನೀಡಿದೆ.

- ಬೆಂಗಳೂರಿನಲ್ಲಿ ಈವರೆಗೆ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 256 ಆಗಿದೆ. ಈ ಪೈಕಿ ಸಕ್ರಿಯ ಪ್ರಕರಣಗಳು 122 ಆಗಿದ್ದರೆ ಒಟ್ಟು 124 ಜನ ಬಿಡುಗಡೆಯಾಗಿದ್ದಾರೆ. ಇನ್ನು, ಮಹಾಮಾರಿ ಸೋಂಕಿಗೆ 9 ಜನ ಬಲಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ