ಆ್ಯಪ್ನಗರ

ತಾಯಿ, ಮಗುವಿನಲ್ಲಿ ಕೊರೊನಾ ಪಾಸಿಟಿವ್‌, ಬೆಂಗಳೂರಿನ ರಾಗಿಗುಡ್ಡದಲ್ಲಿ ಆತಂಕ

ದೆಹಲಿಯಿಂದ ಬಂದಿದ್ದ ಜೆಪಿನಗರದ ರಾಡಿಗುಡ್ಡೆ ಸ್ಲಂ ನಿವಾಸಿ ತಾಯಿ ಮಗುವಿನಲ್ಲಿ ಕೊರೊನಾ ಸೋಂಕು ಪಾಸಿಟಿವ್‌ ಕಂಡು ಬಂದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇದರ ವಿವರ ಇಲ್ಲಿದೆ.

Vijaya Karnataka Web 4 Jun 2020, 4:26 pm
ಬೆಂಗಳೂರು: ನಗರದ ಜೆ.ಪಿ ನಗರ, ರಾಗಿಗುಡ್ಡ ಸ್ಲಂ ಒಂದರಲ್ಲಿ ತಾಯಿ ಹಾಗೂ ಮಗುವಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ. ದೆಹಲಿಯಿಂದ ಬಂದಿದ್ದ ಇವರಿಬ್ಬರ ಕೋವಿಡ್‌-19 ತಪಾಸಣೆಯ ವರದಿ ಬರುವ ಮೊದಲೇ ಕ್ವಾರಂಟೈನ್‌ನಿಂದ ಮನೆಗೆ ಕಳಿಸಲಾಗಿತ್ತು. ಇದೀಗ ಇವರಿಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು ಆಶ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web coronavirus


ರಾಗಿಗುಡ್ಡೆ ಸ್ಲಂ ನಿವಾಸಿಗಳಾದ ಇವರು ದೆಹಲಿಗೆ ತೆರಳಿದ್ದರು. ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಇಬ್ಬರನ್ನು ಕೋವಿಡ್‌-19 ತಪಾಸಣೆಗೆ ಒಳಪಡಿಸಿ ಬಳಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ ಕ್ವಾರಂಟೈನ್ ಅವಧಿ ಮುಗಿಯುವ ಮೊದಲೇ ಇವರನ್ನು ಮನೆಗೆ ಕಳಿಸಲಾಗಿದೆ. ಇದೀಗ ವರದಿ ಪಾಸಿಟಿವ್‌ ಬಂದಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಕೊರೊನಾ ಉಲ್ಬಣ: ಉಡುಪಿಯಲ್ಲಿ ಜೂ.6 ರವರೆಗೆ ಕೋರ್ಟ್ ಕಲಾಪ ರದ್ದು!

ಮನೆಗೆ ಬಂದಿದ್ದ ಇವರು ಹಲವರನ್ನು ಭೇಟಿಯಾಗಿದ್ದಾರೆ. ಇದೀಗ ಇವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಇಡೀ ಸ್ಲಂಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆತಂಕ ಮೂಡಿದೆ.

ಸದ್ಯ ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಸ್ಲಂನಿಂದ ಯಾರಿಗೂ ಹೊರಗಡೆ ಹೋಗದಂತೆ ಸೂಚನೆಯನ್ನು ನೀಡಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮತ್ತಷ್ಟು ಆರಂಕ ಶುರುವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ