ಆ್ಯಪ್ನಗರ

ಜಮೀನು ಹಿಂದಿರುಗಿಸಲು ಕೋರ್ಟ್‌ ನಕಾರ

ಜಾಲಹಳ್ಳಿ ಏರ್‌ಪೋರ್ಸ್‌ ಕೇಂದ್ರಕ್ಕೆ ಭೂಸ್ವಾಧೀನ ಮಾಡಿದ್ದ ಜಮೀನನ್ನು ಮೂರು ದಶಕದ ಬಳಿಕ ವಾಪಸ್‌ ನೀಡುವಂತೆ ಭೂಮಾಲೀಕ ಮಾಡಿದ್ದ ಮನವಿಯನ್ನು ...

Mirror Now 27 Mar 2018, 5:00 am
ಬೆಂಗಳೂರು: ಜಾಲಹಳ್ಳಿ ಏರ್‌ಪೋರ್ಸ್‌ ಕೇಂದ್ರಕ್ಕೆ ಭೂಸ್ವಾಧೀನ ಮಾಡಿದ್ದ ಜಮೀನನ್ನು ಮೂರು ದಶಕದ ಬಳಿಕ ವಾಪಸ್‌ ನೀಡುವಂತೆ ಭೂಮಾಲೀಕ ಮಾಡಿದ್ದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Vijaya Karnataka Web court rejects courts return
ಜಮೀನು ಹಿಂದಿರುಗಿಸಲು ಕೋರ್ಟ್‌ ನಕಾರ


ಪೀಣ್ಯ ಗ್ರಾಮಕ್ಕೆ ಸೇರಿದ್ದ 5.20 ಎಕರೆಯು ಜಾಲಹಳ್ಳಿ ವಾಯುಪಡೆಗೆ 1986ರಲ್ಲಿ ಭೂಸ್ವಾಧೀನವಾಗಿತ್ತು. ಇದಕ್ಕಾಗಿ ಭೂಮಾಲೀಕ ರಾಧಕೃಷ್ಣಮೂರ್ತಿಗೆ ಅಂದೇ ಪರಿಹಾರವನ್ನು ನೀಡಲಾಗಿತ್ತು. ಆದರೆ, ಆ ಭೂಮಿಯನ್ನು ಬಳಕೆ ಮಾಡಿಕೊಳ್ಳದ ಕಾರಣ ಜಮೀನು ವಾಪಸ್‌ ನೀಡುವಂತೆ ಭೂಮಾಲೀಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಕೋರ್ಟ್‌, ವಾಯುಪಡೆ ಹಾಗೂ ಬಿಡಿಎಗೆ ನೋಟಿಸ್‌ ನೀಡಿ ಸಮಜಾಯಿಷಿ ಕೇಳಿತ್ತು. ಇದಕ್ಕೆ ಎರಡೂ ಕಡೆಯಿಂದ ಲಿಖಿತವಾಗಿ ಹೇಳಿಕೆ ನೀಡಲಾಗಿದೆ. ಬಿಡಿಎ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಸ್ವಾಧೀನ ಮಾಡಿಕೊಂಡಿದ್ದ ಜಮೀನಿಗೆ ಈ ಮೊದಲು ಪರಿಹಾರ ವಿತರಿಸಲಾಗಿದೆ. ಹೀಗಾಗಿ ತಾನು ವಶಕ್ಕೆ ಪಡೆಯಲಿರುವ ಜಮೀನಿನ ವ್ಯಾಜ್ಯ ವಾಯುಪಡೆಯೊಂದಿಗೆ ಇರಲಿದೆ ಎಂದು ಹೇಳಿತ್ತು.

ಇದನ್ನು ಪುರಸ್ಕರಿಸಿದ ಕೋರ್ಟ್‌ ಭೂಮಾಲೀಕರ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅರ್ಜಿ ವಿಲೇವಾರಿ ವೇಳೆ ಕೋರ್ಟ್‌ ''ಭೂಮಾಲೀಕನಿಂದ ಜಮೀನು ಸ್ವಾಧೀನ ಪಡಿಸಿಕೊಂಡ ಬಳಿಕ ಪರಿಹಾರ ನೀಡಬೇಕು. ಇದನ್ನು ಪಡೆದಿದ್ದರೆ ಭೂಮಿಯನ್ನು ವಾಪಸ್‌ ನೀಡಲಾಗದು. ಆದರೆ, ಆ ಭೂಮಿ ಬಳಕೆ ಮಾಡಿಕೊಳ್ಳದಿದ್ದರೆ, ಕೆಲವೊಮ್ಮೆ ಹಿಂದಿರಿಗಿಸುವ ಸಾಧ್ಯತೆ ಇದೆ. ಸದರಿ ಪ್ರಕರಣದಲ್ಲಿ ವಾಯುಪಡೆಯ ಅಧಿಕಾರಿಗಳ ವಸತಿಗೆ ಜಾಗ ಬಳಸಿಕೊಂಡು ಇನ್ನೂ ಸ್ವಲ್ಪ ಭಾಗವನ್ನು ಉಳಿಸಿಕೊಂಡಿದ್ದರೂ, ಅದನ್ನು ಭೂಮಾಲಿಕನಿಗೆ ನೀಡಲಾಗದು,'' ಎಂದು ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ