ಆ್ಯಪ್ನಗರ

ಬೆಂಗಳೂರು: ಕೋವಿಡ್‌ ನೆಪದಲ್ಲಿ ಪತಿ ತೊರೆದ ಮಹಿಳೆ, ಆಂಬುಲೆನ್ಸ್‌ನಲ್ಲಿ ಎಸ್ಕೇಪ್‌!

ದಾಂಪತ್ಯ ವಿರಸದ ಹಿನ್ನೆಲೆ ಗಂಡನ ಮನೆ ತೊರೆಯಲು ನಿರ್ಧರಿಸಿದ ಇಂಜಿನಿಯರ್ ಪದವೀಧರೆಯೊಬ್ಬಳು ಆಂಬುಲೆನ್ಸ್‌ನಲ್ಲಿ ಎಸ್ಕೇಪ್‌ ಆಗಿ ದಿಲ್ಲಿಗೆ ತೆರಳಿರುವ ವಿಚಿತ್ರ ಘಟನೆ ನಡೆದಿದೆ.

Vijaya Karnataka Web 11 Sep 2020, 8:49 am
Vijaya Karnataka Web bengaluru
ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಗಂಡನ ಮನೆ ತೊರೆಯಲು ನಿರ್ಧರಿಸಿದ ಎಂಜಿನಿಯರಿಂಗ್‌ ಪದವೀಧರೆಯೊಬ್ಬರು ಕೋವಿಡ್‌ ನೆಪ ಹೇಳಿ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಡ್ರಾಪ್‌ ತೆಗೆದುಕೊಂಡ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.

ಈ ವಿಚಾರ ತಿಳಿಯದ ಪತಿ, ಕೋವಿಡ್‌ ದೃಢಪಟ್ಟ ಪತ್ನಿ ನಾಪತ್ತೆಯಾಗಿದ್ದಾರೆಂದು ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಂತಿಮವಾಗಿ ಪೊಲೀಸರು ತನಿಖೆ ಕೈಗೊಂಡಾಗ, ಕೌಟುಂಬಿಕ ಕಲಹ ವಿಚಾರವಾಗಿ ಮಹಿಳೆಯೇ ಸ್ವಯಂಪ್ರೇರಿತವಾಗಿ ದಿಲ್ಲಿಗೆ ತೆರಳಿರುವುದು ಗೊತ್ತಾಗಿದೆ.

ಉತ್ತರ ಭಾರತ ಮೂಲದ ವಿಕಾಸ್‌ ಕುಮಾರ್‌ ಮತ್ತು ರುಚಿ ಕುಮಾರಿ (28) ನಡುವೆ ಕೆಲ ತಿಂಗಳ ಹಿಂದೆ ವಿವಾಹವಾಗಿತ್ತು. ದಂಪತಿ ಬೆಂಗಳೂರಿಗೆ ಬಂದು ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದರು. ಪತಿ ಖಾಸಗಿ ಕೆಲಸ ಮಾಡುತ್ತಿದ್ದು, ರುಚಿಕುಮಾರಿ ಗೃಹಿಣಿಯಾಗಿದ್ದರು. ಇವರ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆ ತೊರೆಯಲು ರುಚಿಕುಮಾರಿ ಕೋವಿಡ್‌-19 ಮತ್ತು ಆಂಬ್ಯುಲೆನ್ಸ್‌ ತಂತ್ರ ಬಳಸಿದ್ದಾರೆ.

ಕಾರ್ಪೊರೇಟರ್‌ಗಳ ಅವಧಿ ಅಂತ್ಯ, ಬಿಬಿಎಂಪಿಯಲ್ಲಿನ್ನು ಅಧಿಕಾರಿಗಳದ್ದೇ ಆಟ

ಪತಿಯಿಂದ ದೂರು:
''ಸೆ.4ರ ಸಂಜೆ 5ರ ಸುಮಾರಿಗೆ ಖಾಸಗಿ ಆ್ಯಂಬುಲೆನ್ಸ್‌ ಚಾಲಕ ಬಂದು, ಪತ್ನಿಗೆ ಕೋವಿಡ್‌ ಪಾಸಿಟಿವ್‌ ಇದೆ. ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಹೇಳಿ ಕರೆದೊಯ್ದ. 5.50ರ ಸುಮಾರಿಗೆ ಆಸ್ಪತ್ರೆಗೆ ಹೋದಾಗ ಪತ್ನಿ ದಾಖಲಾಗಿರಲಿಲ್ಲ. ನಂತರ ಚಾಲಕನಿಗೆ ಕರೆ ಮಾಡಿದೆ. ಅದಕ್ಕೆ ಪ್ರತಿಕ್ರಿಯಿಸಿದ ಚಾಲಕ, ವ್ಯಕ್ತಿಯೊಬ್ಬರು ಕರೆ ಮಾಡಿ ಆಂಬ್ಯುಲೆನ್ಸ್‌ ಬೇಕೆಂದು ವಿಳಾಸ ಸಹಿತ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಹೋದಾಗ ಮನೆಯಲ್ಲಿದ್ದ ಮಹಿಳೆ ಆಂಬ್ಯುಲೆನ್ಸ್‌ ಹತ್ತಿದರು. ಆಂಬ್ಯುಲೆನ್ಸ್‌ನಲ್ಲಿ ಆ ವ್ಯಕ್ತಿಯೂ ಇದ್ದ. ಒಂದೇ ಸೀಟ್‌ನಲ್ಲಿ ಕುಳಿತು ಇಬ್ಬರು ಗುಸು ಗುಸು ಮಾತನಾಡುತ್ತಿದ್ದರು. ಖಾಸಗಿ ಆಸ್ಪತ್ರೆ ಬಳಿ ಇಬ್ಬರೂ ಇಳಿದು ಕೈ ಕೈ ಹಿಡಿದುಕೊಂಡು ಹೋದರು ಎಂದು ಮಾಹಿತಿ ನೀಡಿದ್ದಾನೆ'' ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ’: ಸಚಿವ ವಿ.ಸೋಮಣ್ಣ

''ನಾಪತ್ತೆ ಕೇಸ್‌ ದಾಖಲಿಸಿಕೊಂಡು ಮಹಿಳೆಯನ್ನು ಸಂಪರ್ಕಿಸಿದಾಗ ಆಕೆ ದಿಲ್ಲಿಯಲ್ಲಿ ಇರುವುದಾಗಿ ಮತ್ತು ಕೌಟುಂಬಿಕ ಸಮಸ್ಯೆಯಿಂದ ಮನೆಯಿಂದ ಸ್ವಯಂ ಪ್ರೇರಿತವಾಗಿ ದಿಲ್ಲಿಗೆ ಹೋಗಿರುವುದಾಗಿ ತಿಳಿಸಿದ್ದಾಳೆ'' ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಮಹದೇವ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ