ಆ್ಯಪ್ನಗರ

ಮಂಗಳೂರಿನಲ್ಲಿ ಮೇಕೆ ಮಾಂಸದ ಜೊತೆ ದನದ ಮಾಂಸ ಸೇರಿಸಿ ಕೊಡಲಾಗುತ್ತಿದೆ: ಶಾಸಕ ಭರತ್‌ ಶೆಟ್ಟಿ

ಶಾಸಕ ಭರತ್‌ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌, ರಾಜ್ಯದಲ್ಲಿ ಶೇ 50 ರಷ್ಟು ಪಶುವೈದ್ಯರ ಹುದ್ದೆ ಖಾಲಿ ಇದೆ.ಕೋವಿಡ್ ಕಾರಣಕ್ಕಾಗಿ ನೇಮಕಾತಿ ವಿಳಂಬ ಆಗಿದೆ. ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಸಚಿವರು ಭರವಸೆ ನೀಡಿದರು.

Vijaya Karnataka Web 3 Feb 2021, 12:53 pm
ಬೆಂಗಳೂರು: ಮಂಗಳೂರಿನಲ್ಲಿ ಮೇಕೆ ಮಾಂಸದ ಜೊತೆಗೆ ದನದ ಮಾಂಸ ಸೇರಿಸಿ ಕೊಡಲಾಗುತ್ತಿದೆ ಎಂದು ಮಂಗಳೂರು ಉತ್ತರ ಬಿಜೆಪಿ ಶಾಸಕ ಭರತ್ ಶೆಟ್ಟಿ ಹೇಳಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಭರತ್ ಶೆಟ್ಟಿ, ಮಂಗಳೂರಿನಲ್ಲಿ ಮೇಕೆ ಮಾಂಸದ ಜೊತೆಗೆ ದನದ ಮಾಂಸ ಸೇರಿಸಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
Vijaya Karnataka Web mla bharath shetty


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇದೆ. ಗೋಹತ್ಯೆ ಕಾಯ್ದೆ ಜಾರಿಗೆ ಬಂದ ಬಳಿಕ ಪಶು ವೈದ್ಯರ ಅಗತ್ಯ ಹೆಚ್ಚಾಗಿದೆ. ಮಟನ್ ಮಾಂಸದ ಜೊತೆಗೆ ದನದ ಮಾಂಸ ಮಿಕ್ಸ್ ಮಾಡಲಾಗುತ್ತದೆ ಎಂಬ ಆರೋಪ ಇದೆ. ಅಲ್ಲದೆ ಕೇರಳ ಭಾಗದಿಂದ ದನದ ಮಾಂಸ ಜಿಲ್ಲೆಗೆ ಸಾಗಾಟ ಆಗುತ್ತಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಲು ಪಶು ವೈದ್ಯರ ಅಗತ್ಯ ಇದೆ ಎಂದು ಸಭೆಯನ್ನು ಶಾಸಕ ಒತ್ತಾಯಿಸಿದರು.

ಇನ್ನು ಶಾಸಕ ಭರತ್‌ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌, ರಾಜ್ಯದಲ್ಲಿ ಶೇ 50 ರಷ್ಟು ಪಶುವೈದ್ಯರ ಹುದ್ದೆ ಖಾಲಿ ಇದೆ.ಕೋವಿಡ್ ಕಾರಣಕ್ಕಾಗಿ ನೇಮಕಾತಿ ವಿಳಂಬ ಆಗಿದೆ. ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಸಚಿವರು ಭರವಸೆ ನೀಡಿದರು.

ಬಿಜೆಪಿಯಲ್ಲಿ ಮುಗಿಯದ ಅತೃಪ್ತಿ; ಸಿಎಂ ಕರೆದಿದ್ದ ಔತಣಕೂಟಕ್ಕೆ 28ಕ್ಕೂ ಅಧಿಕ ಶಾಸಕರು ಗೈರು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ