ಆ್ಯಪ್ನಗರ

ಲಾಕ್‌ಡೌನ್‌ ಸಂಕಷ್ಟದ ವೇಳೆ ಆನ್‌ಲೈನ್‌ ವಂಚಕರಿಂದ ಬ್ಯಾಂಕ್‌ ಖಾತೆ ರಕ್ಷಣೆ ಹೇಗೆ? ಇಲ್ಲಿದೆ ವಿವರ

ಕೊರೊನಾ ವೈರಸ್‌ಅನ್ನು ಹತೋಟಿಗೆ ತರಲು ರಾಷ್ಟ್ರಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಇಂತಹ ಸಂಕಷ್ಟ ಕಾಲದಲ್ಲೇ ಜನರಿಗೆ ಪರಿಹಾರದ ನೆಪದಲ್ಲಿ ಮೋಸ ಮಾಡುವ ಜಾಲ ಸಕ್ರಿಯವಾಗಿದೆ. ಸೈಬರ್‌ ವಂಚನೆ ತಪ್ಪಿಸಲು ನೀವು ಅನುಸರಿಸಲೇ ಬೇಕಾದ ಕ್ರಮಗಳು ಇಲ್ಲಿವೆ.

Vijaya Karnataka Web 17 Apr 2020, 7:42 am
ಬೆಂಗಳೂರು: ಮದ್ಯ ವಿತರಿಸುತ್ತೇವೆ ಎಂದು ಮುಂಚಿತವಾಗಿ ಹಣ ಪಡೆದು ವಂಚಿಸಿದ ಹಲವು ಘಟನೆಗಳು ಕಣ್ಮುಂದೆ ಇರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಖಾತೆಗೆ 10 ಸಾವಿರ ರೂ. ಲಾಕ್‌ಡೌನ್‌ ಪರಿಹಾರ ಮೊತ್ತವನ್ನು ಜಮೆ ಮಾಡುತ್ತಿದ್ದಾರೆ ಎಂದು ನಂಬಿಸಿ ಬೆಂಗಳೂರಿನ ಪಟ್ಟೆಗಾರಪಾಳ್ಯದ ನಿವಾಸಿಯೊಬ್ಬರಿಂದ 1 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web Cyber Security


ನಿಮ್ಮ ಮೊಬೈಲ್‌ಗೆ ಬಂದ ಸಂದೇಶದ ವಿವರ ನೀಡಬೇಕು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್‌ ಖಾತೆಯನ್ನು ಅನುಪಯುಕ್ತ ಎಂದು ಪರಿಗಣಿಸಿ ಬ್ಲಾಕ್‌ ಮಾಡಲಾಗುತ್ತದೆ ಎಂದು ನಂಬಿಸಿ ದುಡ್ಡು ಕಿತ್ತುಕೊಂಡಿದ್ದಾರೆ. ಗಾರೆ ಕೆಲಸ ಮಾಡಿ ಕೂಡಿದ್ದ 1 ಲಕ್ಷ ರೂ. ಎರಡು ಮೆಸೇಜ್‌ಗಳಿಂದ ಎಗರಿ ಹೋಗಿದೆ.

ಸೈಬರ್‌ ವಂಚನೆ ತಪ್ಪಿಸಲು ಏನು ಮಾಡಬೇಕು?
  • ಸಾಲ, ಎಟಿಎಂ, ಬ್ಯಾಂಕ್‌ ಖಾತೆ ಬಗ್ಗೆ ಮಾಹಿತಿ, ಒಟಿಪಿ ಶೇರ್‌ ಮಾಡಬೇಡಿ
  • ಇಎಂಐ ಬಗ್ಗೆ ಅನುಮಾನ ಇದ್ದರೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿ
  • ಕೇಂದ್ರ ಹಾಗೂ ರಾಜ್ಯ ಸರಕಾರದ ಹಣ ಜಮೆ ಹೆಸರಲ್ಲಿ ಬರುವ ಕರೆಗೆ ಸ್ಪಂದಿಸಬೇಡಿ
  • ಆನ್‌ಲೈನ್‌ ಖರೀದಿ, ಗೂಗಲ್‌ನಲ್ಲಿ ವಿವಿಧ ಸೇವೆಗಳ ಕುರಿತು ಸರ್ಚ್ ಮಾಡುವ ವೇಳೆ ಎಚ್ಚರವಹಿಸಿ
  • ಅಪರಿಚಿತರು ಲಿಂಕ್‌, ಎಸ್‌ಎಂಎಸ್‌ ಕಳುಹಿಸಿ ಮಾಹಿತಿ ಕೇಳಿದರೆ ನೀಡಬೇಡಿ
  • ಯಾವುದೇ ಕಾರಣಕ್ಕೂ ನಿಮ್ಮ ಇಮೇಲ್‌ ಅಥವಾ ಮೊಬೈಲ್‌ಗೆ ಬರುವ ಲಿಂಕ್‌ ಕ್ಲಿಕ್‌ ಮಾಡಬೇಡಿ.
  • ಮದ್ಯ ಮಾರಾಟ ಸಂಪೂರ್ಣ ಬಂದ್‌ ಆಗಿರುವ ಕಾರಣ ಆನ್‌ಲೈನ್‌ ಮದ್ಯ ಖರೀದಿ ಪ್ರಯತ್ನ ಬೇಡ
  • ಗೂಗಲ್‌ನಲ್ಲಿ ಸರ್ಚ್ ಮಾಡಿ ಸಿಕ್ಕ ಸಿಕ್ಕ ನಂಬರ್‌ಗಳಿಗೆ ಕರೆ ಮಾಡಿ ಮೋಸ ಹೋಗಬೇಡಿ
'ಪಿಎಂ ಮೋದಿಯಿಂದ 10 ಸಾವಿರ ರೂ. ಜಮೆ' ಎಂದು ನಂಬಿಸಿ 1 ಲಕ್ಷ ರೂ. ಎಗರಿಸಿದ ಖದೀಮರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ