ಆ್ಯಪ್ನಗರ

ಸಿಲಿಂಡರ್‌ ಬದಲಾಯಿಸುವಾಗ ಅವಘಡ: ಮಹಿಳೆ ಸ್ಥಿತಿ ಗಂಭೀರ

ಸಿಲಿಂಡರ್‌ ಬದಲಾಯಿಸುವಾಗ ಸ್ಫೋಟ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Vijaya Karnataka 17 Apr 2018, 5:00 am
ಬೆಂಗಳೂರು: ಸಿಲಿಂಡರ್‌ ಬದಲಾಯಿಸುವಾಗ ಸ್ಫೋಟ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web cylinder blast women injured
ಸಿಲಿಂಡರ್‌ ಬದಲಾಯಿಸುವಾಗ ಅವಘಡ: ಮಹಿಳೆ ಸ್ಥಿತಿ ಗಂಭೀರ


ಲಗ್ಗರೆಯ ಮುನೇಶ್ವರಬ್ಲಾಕ್‌ನ ನಿವಾಸಿ ಮಹಾಲಕ್ಷ್ಮಿ ಗಾಯಗೊಂಡವರು. ಇವರ ಮಕ್ಕಳಾದ ಗಿರೀಶ್‌ ಮತ್ತು ಲೋಕೇಶ್‌ ಸ್ಥಳದಿಂದ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಲಿಂಡರ್‌ ಬದಲಿಸುವ ವೇಳೆ ಒಳಗಿದ್ದ ಸ್ವಲ್ಪ ಪ್ರಮಾಣದ ಅನಿಲ ಹೊರಗೆ ಬಂದ ಕಾರಣ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಗ್ಯಾಸ್‌ ಸಿಲಿಂಡರ್‌ ಖಾಲಿಯಾಗಿತ್ತು. ಈ ವೇಳೆ ಅವರು ಹೊಸ ಸಿಲಿಂಡರ್‌ಗೆ ರೆಗ್ಯುಲೇಟರ್‌ ಅಳವಡಿಸಿದ್ದಾರೆ. ಈ ವೇಳೆ ಹಳೆ ಸಿಲಿಂಡರ್‌ನಲ್ಲಿ ಉಳಿದಿದ್ದ ಗ್ಯಾಸ್‌ ಹೊರಗೆ ಬಂದಿದೆ. ಅದನ್ನು ಅರಿಯದ ಮಹಾಲಕ್ಷ್ಮಿ ಅವರು ಒಲೆ ಹಚ್ಚಲು ಹೋಗಿದ್ದು, ಈ ವೇಳೆ ವಾತಾವರಣದಲ್ಲಿದ್ದ ಅನಿಲವು ಹೊತ್ತಿ ಉರಿದು ಅಡುಗೆ ಮನೆಯಿಡೀ ವ್ಯಾಪಿಸಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಾಲಕ್ಷ್ಮೇ ಅವರು ಬಚ್ಚಲು ಮನೆಗೆ ಓಡಿ ಹೋಗಿದ್ದಾರೆ. ಆದರೆ, ಅನಿಲ ಅಲ್ಲಿಗೂ ವ್ಯಾಪಿಸಿದೆ. ಇದೇ ವೇಳೆ ಪಕ್ಕದ ಕೋಣೆಯಲ್ಲಿದ್ದ ಮಕ್ಕಳು ಹೊರಗೆ ಓಡಿ ಹೋಗಿ ಬಚಾವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಂಕಿ ಜ್ವಾಲೆ ಮನೆಯ ಹೊರಗೂ ವಿಸ್ತರಿಸುತ್ತಿದ್ದಂತೆ ಅಕ್ಕ ಪಕ್ಕದವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದರು. ನಾಲ್ಕು ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿ ಶಾಮಕ ತಂಡ ಬೆಂಕಿ ನಂದಿಸಿ ಗಾಯಾಳು ಮಹಾಲಕ್ಷ್ಮಿ ಅವರನ್ನು ಆಸ್ಪತ್ರೆಗೆ ರವಾನಿಸಿದೆ. ಶೇ. 0 ಕ್ಕೂ ಹೆಚ್ಚು ಪ್ರಮಾಣದ ಸುಟ್ಟ ಗಾಯಗಳಿಂದ ಮಹಾಲಕ್ಷ್ಮಿ ಸಾವಿನ ಜತೆಗೆ ಸೆಣೆಸಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ನಂದಿನಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ