ಆ್ಯಪ್ನಗರ

ಹೊರ ರಾಜ್ಯಕ್ಕೆ ಯಾತ್ರೆ ಹೋಗುವವರಿಗೆ ಸರಕಾರದಿಂದಲೇ ವಸತಿ ಸೌಲಭ್ಯ

ಲಾಕ್‌ಡೌನ್‌ ಬಳಿಕ ಭಕ್ತರ ದರ್ಶನಕ್ಕಾಗಿ ದೇವಸ್ಥಾನಗಳನ್ನು ಮುಕ್ತಗೊಳಿಸಲಾಗಿದೆ. ಪ್ರಮುಖ ದೇವಾಲಯಗಳಲ್ಲಿ ಆದ್ಯತೆ ಮೇರೆಗೆ ಪೂಜೆ ಮತ್ತು ಪ್ರತ್ಯೇಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಕಲ್ಲಿ ವೃದ್ಧರು, ವಿಶೇಷಚೇತನರಿಗೂ ಈ ಅವಕಾಶ ನೀಡಲಾಗುವುದು

Vijaya Karnataka Web 7 Jan 2021, 9:02 pm
ಬೆಂಗಳೂರು: ತಿರುಪತಿ, ಮಂತ್ರಾಲಯ, ಶ್ರೀಶೈಲ, ವಾರಾಣಸಿಗೆ ತೆರಳುವ ಯಾತ್ರಾರ್ಥಿಗಳಿಗೆ ರಾಜ್ಯ ಸರಕಾರವೇ ಇನ್ನು ಮುಂದೆ ವಸತಿ ಸೌಕರ್ಯ ಕಲ್ಪಿಸಲಿದೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಗುಡಿ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ''ರಾಜ್ಯದಿಂದ ತೆರಳುವ ಭಕ್ತಾದಿಗಳಿಗೆ ಸೂಕ್ತ ವಸತಿ ಸೌಕರ್ಯ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಈ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದರು.

''ಲಾಕ್‌ಡೌನ್‌ ಬಳಿಕ ಭಕ್ತರ ದರ್ಶನಕ್ಕಾಗಿ ದೇವಸ್ಥಾನಗಳನ್ನು ಮುಕ್ತಗೊಳಿಸಲಾಗಿದೆ. ಪ್ರಮುಖ ದೇವಾಲಯಗಳಲ್ಲಿ ಆದ್ಯತೆ ಮೇರೆಗೆ ಪೂಜೆ ಮತ್ತು ಪ್ರತ್ಯೇಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಕಲ್ಲಿ ವೃದ್ಧರು, ವಿಶೇಷಚೇತನರಿಗೂ ಈ ಅವಕಾಶ ನೀಡಲಾಗುವುದು'' ಎಂದು ಹೇಳಿದರು.

ಇ-ಆಫೀಸ್‌

ಧಾರ್ಮಿಕ ದತ್ತಿ ಇಲಾಖೆ ಆಡಳಿತದಲ್ಲಿ ಪಾರದರ್ಶಕತೆ ತರಲು ಇ-ಆಫೀಸ್‌ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ತ್ವರಿತವಾಗಿ ಕಡತ ವಿಲೇವಾರಿ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ''ಮುಖ್ಯಮಂತ್ರಿಯವರು ರಾಜ್ಯದ ಜನರ ಭಾವನೆಗೆ ಸ್ಪಂದಿಸಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಿದ್ದಾರೆ. ಇದರ ಶ್ರೇಯಸ್ಸು ನಮ್ಮ ಸಿಎಂ ಹಾಗೂ ನಮ್ಮ ಪಕ್ಷಕ್ಕೆ ಸಲ್ಲುತ್ತದೆ'' ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಭಾಗಿಯಾಗಿದ್ದರು.

ಪರಿಸರ ಹಾಗೂ ದೇವಸ್ಥಾನ ಶುದ್ಧವಾಗಿರಬೇಕು. ಹಾಗೆಯೇ ಅಂತರಂಗ-ಬಹಿರಂಗವೂ ಶುದ್ಧವಾಗಿರಬೇಕು. ಅಂತರಂಗ ಶುದ್ಧಿಗೆ ತಪಸ್ಸು, ಧ್ಯಾನ ಅಗತ್ಯ.
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ಕೊರೊನಾ ಬಂದ ಬಳಿಕ ಮಾನಸಿಕ ರೋಗಗಳು ಹೆಚ್ಚಾಗಿವೆ. ದೇವಾಲಯಗಳು ಮಾನಸಿಕ ರೋಗ ತಡೆಯುವ ಕೆಲಸ ಮಾಡುತ್ತಿವೆ. ಇದಕ್ಕೆ ಯೋಗ, ಧ್ಯಾನ ಬೇಕು. ರಾಜಾಶ್ರಯವಿದ್ದರೆ ಧರ್ಮ ಉಳಿಯಲಿದೆ.
-ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ