ಆ್ಯಪ್ನಗರ

ಚಿತ್ರರಂಗದಲ್ಲಿದ್ದ ಮುನಿರತ್ನಗೆ ನಟನೆ ಹೊಸದಲ್ಲ; ಮುನಿರತ್ನ ಕಣ್ಣೀರಿಗೆ ದಿನೇಶ್ ಗುಂಡೂರಾವ್ ಟಾಂಗ್

ದಿನದಿಂದ ದಿನಕ್ಕೆ ಜೋರು ಕಾವು ಪಡೆಯುತ್ತಿರುವ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.ಮುನಿರತ್ನಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಚುನಾವಣೆ ಮುನಿರತ್ನರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಅಂತಾನೂ ಹೇಳಲಾಗ್ತಿದೆ. ಈ ಮಧ್ಯೆ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದ ಮುನಿರತ್ನ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು. ಇದೀಗ ಮುನಿರತ್ನ ಕಣ್ಣೀರಿಗೆ ದಿನೇಶ್ ಗುಂಡೂರಾವ್ ಟಾಂಗ್ ನೀಡಿದ್ದಾರೆ.

Vijaya Karnataka Web 28 Oct 2020, 2:49 pm
ಬೆಂಗಳೂರು: ಮಾತೃಪಕ್ಷ ಕಾಂಗ್ರೆಸ್‌ನಿಂದ ಬಿಜೆಪಿ ಪಕ್ಷಕ್ಕೆ ಹೋಗಿ ಸ್ಪರ್ಧಿಸುತ್ತಿರುವ ಮುನಿರತ್ನ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್‌ ಪಕ್ಷ ಟೊಂಕ ಕಟ್ಟಿ ನಿಂತು ಆರ್‌ಆರ್‌ ನಗರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಮಾತೃ ಪಕ್ಷವನ್ನು ಬಿಟ್ಟು ಬಿಜೆಪಿ ಹಣಕ್ಕಾಗಿ ಮಾರಾಟ ಆದ ಮುನಿರತ್ನ ತನ್ನ ತಾಯಿಯನ್ನು ಮಾರಿದಂತೆ ಎಂದು ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದರು.
Vijaya Karnataka Web dinesh gundu
Dinesh Gundu Rao


ದಯವಿಟ್ಟು ನನ್ನ ತಾಯಿ ಬಗ್ಗೆ ಮಾತನಾಡಬೇಡಿ ಎಂದು ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಮುನಿರತ್ನ..!

ಇದೇ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದರು. ನನ್ನ ತಾಯಿ ಬಗ್ಗೆ ನೀವು ಮಾತನಾಡಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಧರಣಿ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿಲ್ಲ. ತಾಯಿನ ಮಾರಾಟ ಮಾಡಿದ್ದೇನೆ ಅಂದಿದ್ದೀರಲ್ಲ, ಇದು ತಪ್ಪು ಅಂತಾ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಶಾಂತಿಕದಡುವ ಯತ್ನ ಮಾಡಿಲ್ಲ ಎಂದು ಹೇಳಿದ್ದರು.

ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಅಡ್ಡಿ, ಪಾಲಿಕೆ ಮಾಜಿ ಸದಸ್ಯ ಬಂಧನ!

ಈ ವೇಳೆ ಭಾವುಕರಾಗಿ ಮಾತನಾಡಿದ ಮುನಿರತ್ನ, ಕಾಂಗ್ರೆಸ್‌ನವರೇ ನೀವು ನನ್ನ ಬಗ್ಗೆ ಎಷ್ಟು ಬೇಕಾದರೂ ದೂಷಿಸಿ, ಮಾತನಾಡಿ. ಅದಕ್ಕೆ ನಿಮಗೆ ಸ್ವಾತಂತ್ರ್ಯ ಇದೆ. ಆದರೆ 25 ವರ್ಷದ ಹಿಂದೆ ತೀರಿಹೋಗಿರೋ ನನ್ನ ತಾಯಿ ಬಗ್ಗೆ ಮಾತ್ರ ಮಾತನಾಡಬೇಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹಾಕಿದ್ದರು. ಇದೀಗ ಮುನಿರತ್ನ ನಾಯ್ಡು ಕಣ್ಣೀರಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು! ಸಿದ್ದರಾಮಯ್ಯಗೆ ಎಚ್‌ಡಿಕೆ ಟಾಂಗ್

ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ 'ಕರುಣಾ' ರಸವನ್ನು ಹೊರ ಹಾಕಿ ನಟಿಸಿದ್ದಾರೆ. ಈಗಾಗಲೇ ಮುನಿರತ್ನರ 'ಭೀಭತ್ಸ', 'ರೌದ್ರ' ಮತ್ತು 'ಭಯಾನಕ' ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ 'ಶಾಂತ' ರಸ ಹೊರಬರಲಿದೆ ಎಂದು ಗುಂಡೂರಾವ್ ಠಕ್ಕರ್ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ