ಆ್ಯಪ್ನಗರ

ಪ್ರೊಬೆಷನರಿ ಲೈನ್‌ಮನ್‌ಗಳಿಗೂ ಸೌಲಭ್ಯ: ಸಚಿವ ಡಿಕೆಶಿ

ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇತಿಹಾಸ ಪುಟಕ್ಕೆ ಸೇರುವ ತೀರ್ಮಾನಗಳನ್ನು ತೆಗೆದುಕೊಡಿದ್ದೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 5 Jul 2017, 11:35 am
ಬೆಂಗಳೂರು: ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇತಿಹಾಸ ಪುಟಕ್ಕೆ ಸೇರುವ ತೀರ್ಮಾನಗಳನ್ನು ತೆಗೆದುಕೊಡಿದ್ದೇವೆ. ಪ್ರೊಬೆಷನರಿ ಲೈನ್‌ಮನ್‌ಗಳಿಗೆ ಅಪಘಾತವಾದರೆ ಅಥವಾ ಏನೇ ಅನಾಹುತಗಳಾದರೂ ನೌಕರರಿಗೆ ಸಿಗುವ ಸೌಲಭ್ಯಗಳು ಅವರಿಗೂ ಸಿಗುತ್ತವೆ ಎಂದು ಇಂಧನ ಸಚಿವ ಡಿಕೆ. ಶಿವಕುಮಾರ್‌ ಹೇಳಿದ್ದಾರೆ.
Vijaya Karnataka Web electricity department in karnataka
ಪ್ರೊಬೆಷನರಿ ಲೈನ್‌ಮನ್‌ಗಳಿಗೂ ಸೌಲಭ್ಯ: ಸಚಿವ ಡಿಕೆಶಿ


ಬೆಂಗಳೂರಿನ ಕೆ.ಪಿ.ಟಿ.ಸಿ.ಎಲ್. ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರೊಬೆಷನರಿ ಲೈನ್‌ಮನ್‌ಗಳೂ ಇನ್ನು ಮುಂದೆ ಕಂಬ ಹತ್ತಿ ಕೆಲಸ ಮಾಡುತ್ತಾರೆ. ಇಲಾಖೆಯ ನೌಕರರು ವಿದ್ಯುತ್ ಅಪಘಾತದಲ್ಲಿ ಮರಣಹೊಂದಿದರೆ, ಗಾಯಗೊಂಡರೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಸರಕಾರ ನಿಗದಿಪಡಿಸಿರುವಂತೆ ನೌಕರರಿಗೆ ವೈದ್ಯಕೀಯ ವೆಚ್ಚ ಮರು ಪಾವತಿಸಲಾಗುವುದು ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ