ಆ್ಯಪ್ನಗರ

ಲವರ್ ಮಾತಿಗೆ ಮರುಳಾಗಿ ಗಾಂಜಾ ಪೆಡ್ಲರ್‌ ಆದ ಯುವತಿ..! ಕಂಬಿ ಎಣಿಸ್ತಿದ್ದಾಳೆ ಎಂಜಿನಿಯರ್..!

ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಗಾಂಜಾ ಸಿಗುತ್ತಲೇ ಇಲ್ಲ. ಅಲ್ಲಿಗೆ ಹೋಗಿ ಗಾಂಜಾ ಮಾರಾಟ ದಂಧೆ ಕೈಗೆತ್ತಿಕೊಂಡರೆ, ಒಳ್ಳೆಯ ಹಣ ಮಾಡಬಹುದು ಎಂದು ಪ್ರಿಯಕರ ಪುಸಲಾಯಿಸಿದ. ಆಸೆಗೆ ಬಿದ್ದ ಆರೋಪಿ ರೇಣುಕಾ ಕೂಡಾ ಒಪ್ಪಿದ್ದಳು.

Vijaya Karnataka Web 16 Jun 2021, 4:31 pm

ಹೈಲೈಟ್ಸ್‌:

  • ಚೆನ್ನೈನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವತಿ
  • ಇದ್ದ ಕೆಲಸ ಬಿಟ್ಟು ಗಾಂಜಾ ಮಾರಾಟ ಆರಂಭಿಸಿದ ರೇಣುಕಾ
  • ಪ್ರಿಯಕರನ ಮಾತು ಕೇಳಿ ಇದೀಗ ಜೈಲು ಪಾಲಾದ ವಿದ್ಯಾವಂತೆ..
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web arrest
ಲವರ್ ಮಾತಿಗೆ ಮರುಳಾಗಿ ಗಾಂಜಾ ಪೆಡ್ಲರ್‌ ಆದ ಯುವತಿ..! ಕಂಬಿ ಎಣಿಸ್ತಿದ್ದಾಳೆ ಎಂಜಿನಿಯರ್..!
ಬೆಂಗಳೂರು: ಎಂಜಿನಿಯರ್ ಒಬ್ಬಳು ಗಾಂಜಾ ಪೆಡ್ಲರ್‌ ಆದ ಕಥೆ ಇದು..! ಈಕೆ ಗಾಂಜಾ ಮಾರಾಟದ ಕರಾಳ ದಂಧೆಗೆ ಕಾಲಿಡಲು ಕಾರಣ ಆಕೆಯ ಬಾಯ್‌ಫ್ರೆಂಡ್..!
25 ವರ್ಷ ವಯಸ್ಸಿನ ರೇಣುಕಾ, ಮೂಲತಃ ಆಂಧ್ರ ಪ್ರದೇಶದ ಶ್ರೀಕಾಕುಳಂ ನಿವಾಸಿ. ಚೆನ್ನೈನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ಆಕೆಗೆ ಅಲ್ಲಿಯೇ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಆದ್ರೆ ಸಂಬಳ ತುಂಬಾ ಕಡಿಮೆ ಇತ್ತು.

ಕಾಲೇಜ್‌ನಲ್ಲಿ ರೇಣುಕಾಳ ಸಹಪಾಠಿಯಾಗಿದ್ದ ಸಿದ್ಧಾರ್ಥ್, ಶಿಕ್ಷಣ ಮುಗಿಸಿದ ಬಳಿಕ ತನ್ನದೇ ಹಾದಿ ಹಿಡಿದಿದ್ದ. ಗಾಂಜಾ ಮಾರಾಟದಲ್ಲಿ ಭಾರೀ ಹಣ ಗಳಿಸುತ್ತಿದ್ದ. ಹೀಗಾಗಿ, ದುಡಿಮೆ ಕಡಿಮೆಯಾಯ್ತು ಎಂಬ ಬೇಸರದಲ್ಲಿದ್ದ ರೇಣುಕಾಗೆ ಸಿದ್ಧಾರ್ಥ್‌ನ ಗಾಂಜಾ ಮಾರಾಟದ ದಂಧೆ ಚಿನ್ನದ ಮೊಟ್ಟೆ ಇಡು ಕೋಳಿಯಂತೆ ಕಂಡಿತ್ತು.

ತಾನೂ ಕೂಡಾ ಗಾಂಜಾ ಮಾರಾಟ ದಂಧೆಗೆ ಇಳಿಯುವೆ ಎಂದು ಸಿದ್ಧಾರ್ಥ್‌ನನ್ನು ಒಪ್ಪಿಸಿದ ರೇಣುಕಾಗೆ, ಸಿದ್ಧಾರ್ಥ್‌ ಬೆಂಗಳೂರಿನ ಹಾದಿ ತೋರಿಸಿದ್ದ. ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಗಾಂಜಾ ಸಿಗುತ್ತಲೇ ಇಲ್ಲ. ಅಲ್ಲಿಗೆ ಹೋಗಿ ಗಾಂಜಾ ಮಾರಾಟ ದಂಧೆ ಕೈಗೆತ್ತಿಕೊಂಡರೆ, ಒಳ್ಳೆಯ ಹಣ ಮಾಡಬಹುದು ಎಂದು ಪುಸಲಾಯಿಸಿದ. ತನ್ನ ಕುಟುಂಬಕ್ಕೆ ಹೆಚ್ಚಿನ ಹಣ ಕಳಿಸಬಹುದು ಎಂದು ಆಸೆಗೆ ಬಿದ್ದ ರೇಣುಕಾ ಕೂಡಾ ಒಪ್ಪಿದಳು.

ಬೆಂಗಳೂರಿನ ಮಾರತ್‌ ಹಳ್ಳಿಗೆ ಬಂದವಳೇ ಅಲ್ಲಿನ ಹೊಟೇಲ್‌ ಒಂದರಲ್ಲಿ ರೇಣುಕಾ ರೂಂ ಬುಕ್ ಮಾಡಿದಳು. ರೇಣುಕಾಗೆ ನೆರವಾಗಲು ಗೋಪಾಲ್‌ ಎಂಬಾತನ್ನು ಸಿದ್ಧಾರ್ಥ್‌ ಪರಿಚಯಿಸಿದ. ಆರೋಪಿ ಗೋಪಾಲ್‌ ಒಡಿಶಾದಿಂದ ವಿಶಾಖಪಟ್ಟಣಂ ಮಾರ್ಗವಾಗಿ ಬೆಂಗಳೂರಿಗೆ ಗಾಂಜಾ ತರಿಸಿಕೊಡುತ್ತಿದ್ದ. ಇಷ್ಟಾದ ಬಳಿಕ ಈ ಗ್ಯಾಂಗ್‌ಗೆ 21 ವರ್ಷ ವಯಸ್ಸಿನ ನಾಗವಾರ ನಿವಾಸಿ ಸುಧಾಂಶು ಸಿಂಗ್ ಕೂಡಾ ಸೇರ್ಪಡೆಯಾದ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್‌ ಮುಗಿಸಿ ಕೆಲಸವಿಲ್ಲದೆ ಕೂತಿದ್ದ ಸುಧಾಂಶುಗೆ ಗಾಂಜಾ ಮಾರಾಟವೇ ಫುಲ್ ಟೈಂ ಜಾಬ್ ಆಯ್ತು.

ಕೋಡ್‌ವರ್ಡ್‌ ಇಟ್ಟು ಗಾಂಜಾ ಮಾರುತ್ತಿದ್ದ ಆಟೋ ಚಾಲಕನ ಬಂಧನ; ಇಬ್ಬರಿಂದ 80 ಕೆಜಿ ಗಾಂಜಾ ವಶ!
ಇವರ ದಂಧೆಯ ಸುಳಿವು ಅದಾಗಲೇ ಪೊಲೀಸರಿಗೆ ಸಿಕ್ಕಿತ್ತು. ನ್ಯೂ ಬಿಇಎಲ್ ರಸ್ತೆಯ ಐಟಿಐ ಪಾರ್ಕ್‌ನಲ್ಲಿ ಮಹಿಳೆಯೊಬ್ಬಳು ಗಾಂಜಾ ಮಾರುತ್ತಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಜೂನ್ 6, ಮಧ್ಯಾಹ್ನ 3 ಗಂಟೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ರೇಣುಕಾ ಹಾಗೂ ಸುಧಾಂಶು ಸಿಂಗ್‌ನನ್ನು ವಶಕ್ಕೆ ತೆಗೆದುಕೊಂಡರು. ಆರೋಪಿಗಳ ಬಳಿ ಇದ್ದ ಬ್ಯಾಗ್‌ನಲ್ಲಿ ಎರಡೂವರೆ ಕೆಜಿ ತೂಕದ 10 ಪ್ಯಾಕ್ ಗಾಂಜಾ ಸಿಕ್ಕಿತು. ಅಷ್ಟೇ ಅಲ್ಲ, ಆರೂವರೆ ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದರು.

ಬೆಂಗಳೂರು: ತೆಂಗು ತುಂಬಿದ್ದ ಮೂಟೆಗಳ ನಡುವೆ 90 ಕೆ.ಜಿ ಗಾಂಜಾ ಪತ್ತೆ!
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸದಾಶಿವನಗರ ಠಾಣಾ ಪೊಲೀಸರು, ಇಬ್ಬರೂ ಆರೋಪಿಗಳ ವಿರುದ್ಧ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಿಸಿದ್ಧಾರೆ. ಸದ್ಯ ಆರೋಪಿಗಳಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಈ ಜಾಲದ ಪ್ರಮುಖ ಆರೋಪಿಗಳಾದ ಸಿದ್ಧಾರ್ಥ್‌ ಹಾಗೂ ಗೋಪಾಲ್‌ಗಾಗಿ ಹುಡುಕಾಟ ಆರಂಭವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ