ಆ್ಯಪ್ನಗರ

ಒಂದೇ ದಿನದಲ್ಲಿ ಬೆಂಗಳೂರು ಸುತ್ತಬೇಕೆ? ಬಿಎಂಟಿಸಿಯ ಬೆಂಗಳೂರು ದರ್ಶಿನಿ ಬಸ್‌ನಲ್ಲಿ ಪ್ರಯಾಣಿಸಿ

ಬೆಂಗಳೂರಲ್ಲಿ ವಾರವಿಡೀ ದುಡಿಯುವ ಎಷ್ಟೋ ಜನ ನಗರವನ್ನೇ ಸರಿಯಾಗಿ ನೋಡಿರುವುದಿಲ್ಲ. ಬಿಎಂಟಿಸಿಯ ಬೆಂಗಳೂರು ದರ್ಶಿನಿ ಬಸ್‌ಗಳಲ್ಲಿ ಪ್ರಯಾಣಿಸಿದರೆ ಒಂದೇ ದಿನದಲ್ಲಿ ಒಂದೇ ಟಿಕೆಟ್‌ನಲ್ಲಿ ನಗರ ಪ್ರದಕ್ಷಿಣೆ ಹಾಕಬಹುದು.

ಅಶ್ವಿನ್\u200c ಬಾಣೂರು | Vijaya Karnataka Web 24 Jan 2020, 12:46 pm
ಬೆಂಗಳೂರು: ಬಿಎಂಟಿಸಿಯಲ್ಲಿ ಸಂಪೂರ್ಣ ಬೆಂಗಳೂರಿನ ಪ್ರಸಿದ್ಧ ತಾಣಗಳನ್ನು ನೋಡುವ ಅವಕಾಶ ಇದೆ. ಇದಕ್ಕೆ ಜಸ್ಟ್ ಬೆಂಗಳೂರು ದರ್ಶಿನಿ ಬಸ್‌ಗಳಲ್ಲಿ ಪ್ರಯಾಣಿಸಿದರೆ ಸಾಕು!
Vijaya Karnataka Web bangalore darshini bus


ಬೆಂಗಳೂರು ದರ್ಶಿನಿ ಎಂಬ ಹೆಸರಿನಲ್ಲಿ ಬಿಎಂಟಿಸಿ ಬಸ್‌ಗಳ ಸೇವೆ ಇದ್ದು, ಈ ಬಸ್‌ಗಳಲ್ಲಿ ಪ್ರಯಾಣಿಸಿದರೆ ಒಂದೇ ಟಿಕೆಟ್‌ನಲ್ಲಿ ರಾಜಧಾನಿಯ ಪಾರಂಪರಿಕ ಹಾಗೂ ವಾಣಿಜ್ಯ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬೆಂಗಳೂರು ರೌಂಡ್ಸ್ ಸೇವೆಯ ಸಂಚಾರ 2014 ಮೇ 30ರಲ್ಲೇ ಆರಂಭಗೊಂಡಿದೆ.

ದುಬಾರಿ ಹಣ ನೀಡಿ ಕ್ಯಾಬ್‌, ಆಟೋಗಳಲ್ಲಿ ಸಿಲಿಕಾನ್‌ ಸಿಟಿ ಸುತ್ತಲು ಸಾಧ್ಯವಾಗದವರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ದರ್ಶಿನಿ ಬಸ್‌ಗಳಿವೆ. ಹವಾನಿಯಂತ್ರಿತ ಬಸ್‌ಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ನಗರದ ಪ್ರಮುಖ ಸ್ಥಳಗಳನ್ನು ಸುತ್ತುವರಿಯಬಹುದು.

ಇಳಿಕೆಯಾಗದ ಬಿಎಂಟಿಸಿ ಬಸ್‌ ದರ: ಈಡೇರದ ಯಡಿಯೂರಪ್ಪ ಭರವಸೆ

ಬಸ್‌ ಸೇವೆ ಎಲ್ಲಿ ಲಭ್ಯ?
ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯವರೆಗೆ ಮೆಜೆಸ್ಟಿಕ್‌ನಿಂದ ಹೊರಡುವ ದರ್ಶಿನಿ ಬಸ್‌ಗಳಲ್ಲಿ ಬೆಂಗಳೂರಿನ ವಿಧಾನಸೌಧ, ಟಿಪ್ಪು ಸುಲ್ತಾನ್‌ ಅರಮನೆ, ಕರ್ನಾಟಕ ಸಿಲ್ಕ್‌ ಎಂಪೋರಿಯಂ, ಕಬ್ಬನ್‌ ಪಾರ್ಕ್, ಸರಕಾರಿ ಮ್ಯೂಸಿಯಂ, ಇಸ್ಕಾನ್‌, ಗವಿ ಗಂಗಾಧರೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ಜವಾಹರಲಾಲ್‌ ನೆಹರೂ ತಾರಾಲಯ ಸೇರಿ ಅನೇಕ ಪ್ರಮುಖ ಸ್ಥಳಗಳನ್ನು ಪ್ರವಾಸಿಗರು ಒಂದೇ ದಿನ ಎಂಜಾಯ್‌ ಮಾಡಬಹುದಾಗಿದೆ.

ಕೊಟ್ಟಿಗೆಪಾಳ್ಯ: BMTC ಬಸ್‌ ಬ್ರೇಕ್‌ ಫೈಲ್ಯೂರ್‌, ಹಲವು ವಾಹನಗಳಿಗೆ ಡಿಕ್ಕಿ, ಓರ್ವ ಸಾವು, ಐವರು ಗಂಭೀರ

ದರ ಎಷ್ಟು?
ಬೆಂಗಳೂರು ದರ್ಶಿನಿ ಎಸಿ ಬಸ್‌ಗಳಲ್ಲಿ ಮಕ್ಕಳಿಗೆ 300 ರೂ. ಹಾಗೂ ದೊಡ್ಡವರಿಗೆ 400 ರೂ. ಆಕರ್ಷಕ ದರದಲ್ಲಿ ಟ್ರಿಪ್‌ ಮಾಡಬಹುದು.

‘ರೇಣುಕಾ’ಯಣ ಮುಗೀತು ಅನ್ನುವಷ್ಟರಲ್ಲೇ ‘ಶಿಖಾ’ಯಣ ಶುರು..! ಸ್ಟೇರಿಂಗ್ ಹಿಡಿದ ಅಧಿಕಾರಿಗೆ ಲೈಸೆನ್ಸ್ ಇದ್ಯಾ..?

2014ರಲ್ಲಿ ಹಾಪ್‌ ಆನ್‌ ಹಾಪ್‌ ಆಫ್‌ ಬಸ್‌ಗಳಲ್ಲಿ ಈ ಸೇವೆಯನ್ನು ಆರಂಭಿಸಿಲಾಗಿತ್ತಾದರೂ ಬಿಎಂಟಿಸಿಗೆ ನಷ್ಟ ಹೆಚ್ಚಾದ ಕಾರಣ ಈ ಸೇವೆ ಸ್ಥಗಿತಗೊಳಿಸಿ ಬೆಂಗಳೂರು ರೌಂಡ್ಸ್‌ ಹೆಸರಿನಲ್ಲಿ ಸೇವೆ ಆರಂಭಿಸಲಾಗಿತ್ತು. ಬಳಿಕ ಇದಕ್ಕೆ ಬೆಂಗಳೂರು ದರ್ಶಿನಿ ಎಂದು ಮರು ನಾಮಕಾರಣಗೊಳಿಸಲಾಗಿದೆ.

ಹೊಸ ವರ್ಷ, ಬೇಸಿಗೆ ರಜೆ, ದಸರಾ, ಕ್ರಿಸ್‌ಮಸ್‌ ರಜೆ ಸಮಯದಲ್ಲಿ ಈ ಬಸ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್‌ ಇರುತ್ತದೆ. ಒಟ್ಟಾರೆ, ಬೆಂಗಳೂರು ದರ್ಶಿನಿ ಬಸ್‌ಗಳ ಮೂಲಕ ರಾಜ್ಯದ ರಾಜಧಾನಿಯ ಸೌಂದರ್ಯವನ್ನು ಎಂದಿಗಿಂತಲೂ ಆರಾಮಾಗಿ ಅನುಭವಿಸಬಹುದು.
ಲೇಖಕರ ಬಗ್ಗೆ
ಅಶ್ವಿನ್\u200c ಬಾಣೂರು
ವಿಜಯ ಕರ್ನಾಟಕ ಡಿಜಿಟಲ್ ಪತ್ರಕರ್ತ. ರಾಜಕೀಯ, ಪ್ರಸಕ್ತ ವಿದ್ಯಮಾನ ಆಸಕ್ತಿಕರ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ