Please enable javascript.ಹಬ್ಬದ ಹಿನ್ನೆಲೆ: ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌ - Festival mood: Traffic Jam in Majestic Staions - Vijay Karnataka

ಹಬ್ಬದ ಹಿನ್ನೆಲೆ: ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌

ವಿಕ ಸುದ್ದಿಲೋಕ 9 Apr 2016, 6:54 pm
Subscribe

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದ್ದರೂ ಗುರುವಾರ ರಾತ್ರಿ ಜನರಿಗೆ ಸೀಟ್‌ ಸಿಗದೆ ಪರದಾಡಿದರು.

festival mood traffic jam in majestic staions
ಹಬ್ಬದ ಹಿನ್ನೆಲೆ: ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದ್ದರೂ ಗುರುವಾರ ರಾತ್ರಿ ಜನರಿಗೆ ಸೀಟ್‌ ಸಿಗದೆ ಪರದಾಡಿದರು. ಯುಗಾದಿ ಸೇರಿ ಮೂರು ದಿನ ಸರಕಾರಿ ರಜೆ ಇರುವ ಹಿನ್ನೆಲೆಯಲ್ಲಿನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿಜನರು ಊರಿಗೆ ಹೊರಟಿದ್ದರಿಂದ ಮೆಜೆಸ್ಟಿಕ್‌ ಸುತ್ತಮುತ್ತ ಸಂಚಾರ ದಟ್ಟಣೆ ಕಂಡುಬಂತು.

ಮೆಜೆಸ್ಟಿಕ್‌, ಪೀಣ್ಯ ಹಾಗೂ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿಜನ ಜಾತ್ರೆಯೇ ನೆರೆದಿತ್ತು. ತಮ್ಮ ಊರುಗಳಿಗೆ ಹೋಗಲು ಸಾವಿರಾರು ಜನ ಬಸ್‌ಗಾಗಿ ಕಾದು ನಿಂತಿದ್ದರು. ಆದರೆ, ಬಸ್‌ಗಳ ಅಭಾವದಿಂದ ಜನ ಗಂಟೆಗಟ್ಟಲೆ ಕಾಯಬೇಕಾಯಿತು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಮಸ್ಯೆ ನಿವಾರಿಸಲು ಪ್ರಯತ್ನಿಸಿದರೂ ನಿವಾರಣೆ ಸಾಧ್ಯವಾಗಲಿಲ್ಲ. ಇರುವ ಬಸ್‌ಗಳ್ನು ಸರಿದೂಗಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಾಗಾಗಿ ಜನರು ತಡರಾತ್ರಿವರೆಗೂ ಪರದಾಡಿ, ಸಿಕ್ಕ ಬಸ್‌ಗಳಲ್ಲಿತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.ಹಬ್ಬದ ಹಿನ್ನೆಲೆಯಲ್ಲಿಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಕೆಎಸ್‌ಆರ್‌ಟಿಸಿ ರಾಯಚೂರು, ಮಡಿಕೇರಿ, ಗುಲ್ಬರ್ಗಾ, ಬಳ್ಳಾರಿ, ಯಾದಗಿರಿ, ಬೀದರ್‌, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಗೆ 350ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿತ್ತು.

ದೂರದ ಊರಿಗೆ ಹೋಗುವ ಖಾಸಗಿ ಬಸ್‌ಗಳು ಕೂಡ ಭರ್ತಿಯಾಗಿದ್ದವು. ಹಬ್ಬದ ಅಂಗವಾಗಿ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ದುಪ್ಪಟ್ಟು ಏರಿಕೆ ಮಾಡಿವೆ. ಹೆಚ್ಚಿನ ಹಣ ಕೊಟ್ಟರೂ ಟಿಕೆಟ್‌ ಸಿಗದೆ ಹಲವು ಮಂದಿ ಬಾಡಿಗೆ ಕಾರು ಮಾಡಿಕೊಂಡು ಊರಿಗೆ ತೆರಳಿದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ