ಆ್ಯಪ್ನಗರ

₹50 ಸಾವಿರ ದಂಡ ಕಟ್ಟಲು ವಿಫಲ; ವಾಟಾಳ್‌ ನಾಗರಾಜ್‌ ವಿರುದ್ಧ ಎಫ್‌ಐಆರ್‌..!

ವಾಟಾಳ್ ನಾಗರಾಜ್ ಅವರಿಗೆ ಠಾಣೆಯಿಂದ ನೋಟಿಸ್‌ ನೀಡಿ ಜನವರಿ 20ರ ಮಧ್ಯಾಹ್ನದ ಒಳಗೆ ದಂಡ ಕಟ್ಟಲು ಸೂಚಿಸಲಾಗಿತ್ತು. ದಂಡ ಕಟ್ಟಲು ವಿಫಲರಾದ ಕಾರಣ ವಾಟಾಳ್‌ ನಾಗರಾಜ್‌ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ ಕೇಸ್‌ ದಾಖಲಿಸಲಾಗಿದೆ.

Vijaya Karnataka Web 23 Jan 2021, 7:13 am
ಬೆಂಗಳೂರು: ಕೊರೊನಾ ನಿಯಮ ಉಲ್ಲಂಘನೆಗೆ ನ್ಯಾಯಾಲಯ ವಿಧಿಸಿದ್ದ 50 ಸಾವಿರ ರೂಪಾಯಿ ದಂಡ ಕಟ್ಟಲು ವಿಫಲರಾದ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ವಿರುದ್ಧ ಎಸ್‌.ಜೆ. ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web Bengaluru: Police personnel detain pro-Kannada activists Vatal Nagaraj during a ...


ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಯಮ ಜಾರಿಯಲ್ಲಿದ್ದರೂ 2020ರ ಡಿಸೆಂಬರ್‌ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಈ ವೇಳೆ ಜನ ಗುಂಪು ಸೇರಿ ಸೋಂಕು ಹರಡುವ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾದ ಆರೋಪದ ಮೇರೆಗೆ ಕೇಸ್‌ ದಾಖಲಿಸಲಾಗಿತ್ತು. ವಾಟಾಳ್‌ ನಾಗರಾಜ್‌ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು.
ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ ಮಾಡಿದ ಧಾರವಾಡ ಹೈಕೋರ್ಟ್..!
ಈ ಹಿನ್ನೆಲೆ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಠಾಣೆಯಿಂದ ನೋಟಿಸ್‌ ನೀಡಿ ಜನವರಿ 20ರ ಮಧ್ಯಾಹ್ನದ ಒಳಗೆ ದಂಡ ಕಟ್ಟಲು ಸೂಚಿಸಲಾಗಿತ್ತು. ದಂಡ ಕಟ್ಟಲು ವಿಫಲರಾದ ಕಾರಣ ವಾಟಾಳ್‌ ನಾಗರಾಜ್‌ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ ಕೇಸ್‌ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ