ಆ್ಯಪ್ನಗರ

ಚುನಾವಣೆ ಹಿನ್ನಡೆಗೆ ಪ್ರಧಾನಿ ಮೋದಿ ಕಾರಣ

ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಹಿನ್ನಡೆ ಕಾಣಲು ಪ್ರಧಾನಿ ...

Vijaya Karnataka 20 Dec 2018, 5:00 am
ಕೃಷ್ಣರಾಜಪುರ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಹಿನ್ನಡೆ ಕಾಣಲು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯೇ ಪ್ರಮುಖ ಕಾರಣ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ ಪ್ರವೀಣ್‌ಬಾಯ್‌ ತೊಗಾಡಿಯಾ ದೂರಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ದೇಶದೆಲ್ಲೆಡೆ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Vijaya Karnataka Web BNG-1912-2-2-19KRP3 THOGADIYA


ಮಾರತ್‌ಹಳ್ಳಿ ಸಮೀಪ ಎಚ್‌.ಟಿ.ಆರ್‌ ಟ್ರಸ್ಟ್‌ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 28 ಅಡಿ ಎತ್ತರದ ಆಂಜನೇಯ ಸ್ವಾಮಿ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ''ಮೋದಿಯವರು ಚುನಾವಣೆಗೆ ಮುನ್ನ ಇದ್ದಂತೆ ಈಗ ಇಲ್ಲ. ಅಧಿಕಾರಕ್ಕೆ ಬಂದ ಮೇಲೆ ಎಲ್ಲ ರಾಜಕೀಯ ಪಕ್ಷ ದಂತೆ ಬಿಜೆಪಿ ಕೂಡ ನಡೆದುಕೊಳ್ಳುತ್ತಿದೆ,'' ಎಂದು ದೂರಿದರು.

''ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಬಿಲ್‌ ಪಾಸ್‌ ಮಾಡಲು ಆಸಕ್ತಿ ವಹಿಸುವ ಬದಲಿಗೆ ಬಿಜೆಪಿ, ಅನಗತ್ಯವಾದ ತ್ರಿವಳಿ ತಲಾಖ್‌ ಬಿಲ್‌ ಹಿಂದೆ ಬಿತ್ತು. ಆಡಳಿತ ಪಕ್ಷ ಗಳಿಗೆ ರೈತರ ಸಾವು ನೋವುಗಳ ಅರಿವಿರಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಸರಕಾರಗಳು ಎಚ್ಚರವಹಿಸಬೇಕು. ಆದರೆ, ಇಂತಹ ಸೂಕ್ಷ ್ಮತೆಯನ್ನು ಅರಿಯದ ಕಾರಣ ಬಿಜೆಪಿಗೆ ಹಿನ್ನಡೆ ಆಗಿದೆ, ಮುಸ್ಲಿಂ ಮಹಿಳೆಯರ ತ್ರಿವಳಿ ತಲಾಖ್‌ ಬಗ್ಗೆ ಇರುವ ಕಾಳಜಿಯನ್ನು ರಾಮಮಂದಿರ ನಿರ್ಮಾಣಕ್ಕೆ ಮತ್ತು ಹಿಂದುತ್ವಕ್ಕೆ ಏಕೆ ತೋರಲಿಲ್ಲ,'' ಎಂದು ತೊಗಾಡಿಯಾ ಪ್ರಶ್ನಿಸಿದರು.

ಶ್ರೀ ಸಾಯಿ ಆಂಜನೇಯಸ್ವಾಮಿ ಟ್ರಸ್ಟ್‌ ಅಧ್ಯಕ್ಷ ವಿಜಯ್‌ಕುಮಾರ್‌, ಕಾರ್ಯದರ್ಶಿ ಮುರಳೀಧರ್‌, ಖಜಾಂಚಿ ಉಮಾಶಂಕರ್‌, ನಂದೀಶ್‌ ರೆಡ್ಡಿ, ವೆಂಕಟಸ್ವಾಮಿರೆಡ್ಡಿ, ರಾಜಾರೆಡ್ಡಿ ಮುಂತಾದವರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ