ಆ್ಯಪ್ನಗರ

ಏಳು ಹೊಸ ಮಾರ್ಗಗಳಿಗೆ ಕೆಐಎನಿಂದ ವಿಮಾನ ಸಂಚಾರ

ಅ.28ರಿಂದ ಮಾ.30ರವರೆಗಿನ ಐದು ತಿಂಗಳ ಅವಧಿಯಲ್ಲಿ ಎರಡು ಹೊಸ ವಿಮಾನಯಾನ ಸಂಸ್ಥೆಗಳು ಕೆಐಎನಿಂದ ಕಾರ್ಯಾಚರಣೆ ಆರಂಭಿಸಲಿವೆ. ಅಲ್ಲದೇ ಏಳು ಹೊಸ ಸ್ಥಳಗಳಿಗೆ ವಿಮಾನ ಸಂಪರ್ಕ ಆರಂಭವಾಗಲಿದೆ. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 744ರಿಂದ 766 ವಿಮಾನಗಳ ಹಾರಾಟ ನಿರೀಕ್ಷೆ ಇದೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 27 Oct 2018, 5:00 am
ಬೆಂಗಳೂರು: ಅ.28ರಿಂದ ಮಾ.30ರವರೆಗಿನ ಐದು ತಿಂಗಳ ಅವಧಿಯಲ್ಲಿ ಎರಡು ಹೊಸ ವಿಮಾನಯಾನ ಸಂಸ್ಥೆಗಳು ಕೆಐಎನಿಂದ ಕಾರ್ಯಾಚರಣೆ ಆರಂಭಿಸಲಿವೆ. ಅಲ್ಲದೇ ಏಳು ಹೊಸ ಸ್ಥಳಗಳಿಗೆ ವಿಮಾನ ಸಂಪರ್ಕ ಆರಂಭವಾಗಲಿದೆ. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 744ರಿಂದ 766 ವಿಮಾನಗಳ ಹಾರಾಟ ನಿರೀಕ್ಷೆ ಇದೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web flights service to 7 new places from kia
ಏಳು ಹೊಸ ಮಾರ್ಗಗಳಿಗೆ ಕೆಐಎನಿಂದ ವಿಮಾನ ಸಂಚಾರ


ಗೋ ಏರ್‌ ಸಂಸ್ಥೆಯು ಥೈಲ್ಯಾಂಡ್‌ನ ಫುಕೆಟ್‌ಗೆ ನೇರ ವಿಮಾನ ಆರಂಭಿಸುತ್ತಿದೆ. ಉಳಿದಂತೆ ಇಂಡಿಗೋ ಸಂಸ್ಥೆಯು ಈಗಾಗಲೇ ವಿಮಾನ ಸಂಪರ್ಕ ಇರುವ ಮಾಲೆ, ಬ್ಯಾಂಕಾಕ್‌, ಕೌಲಾಲಂಪುರ, ಹಾಂಕಾಂಗ್‌ ಮತ್ತು ಕಠ್ಮಂಡುವಿಗೆ ನಿತ್ಯ ಹಾರಾಟ ಆರಂಭಿಸುತ್ತಿದೆ. ಏರ್‌ ಇಂಡಿಯಾವೂ ಬ್ಯಾಂಕಾಕ್‌ ಮತ್ತು ಲಂಡನ್‌ಗೆ ಹಾಗೆಯೇ ಗೋಏರ್‌ ಮಾಲೆಗೆ ಹಾರಾಟ ನಡೆಸಲಿದೆ. ಇದೇ ವೇಳೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಾರಕ್ಕೆ ನಾಲ್ಕು ದಿನಗಳಂತೆ ಅ.29ರಿಂದ ಸಿಂಗಾಪುರಕ್ಕೆ ವಿಮಾನಯಾನ ಆರಂಭಿಸುತ್ತದೆ. ಇದರೊಂದಿಗೆ ಬೆಂಗಳೂರು ನಗರವೂ 53 ದೇಶೀಯ ಮತ್ತು 29 ಅಂತಾರಾಷ್ಟ್ರೀಯ ಮಾರ್ಗ ಸೇರಿ ಒಟ್ಟು 82 ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದಂತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರ್ಗದ ವಿಮಾನಗಳ ಹಾರಾಟ ಪ್ರಮಾಣವೂ ಶೇ.17ರಷ್ಟು ಬೆಳವಣಿಗೆ ಕಾಣಲಿದೆ ಎಂದು ನಿರೀಕ್ಷೆ ಹೊಂದಲಾಗಿದೆ.

''ನೂತನ ಸೇವೆಗಳು, ವಿಸ್ತರಣೆಯಿಂದಾಗಿ ನಗರದ ಆರ್ಥಿಕ ಬೆಳವಣಿಗೆ ಮತ್ತಷ್ಟು ವೇಗ ಪಡೆದುಕೊಳ್ಳಲು ಪುಷ್ಟಿನೀಡಲಿದೆ'' ಎಂದು ಕೆಐಎ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೇದ್‌ ಮಲೀಕ್‌ ಹೇಳಿದ್ದಾರೆ.
ಹೊಸ ಮಾರ್ಗಗಳು : ಫುಕೆಟ್‌ (ಥೈಲ್ಯಾಂಡ್‌) ಹಾಗೂ ದೇಶಿಯ ಮಾರ್ಗದಲ್ಲಿ ಕಾನ್ಪುರ, ಗೋರಖ್‌ಪುರ, ಉದಯ್‌ಪುರ, ಪ್ರಯಾಗ್‌ರಾಜ್‌, ಐಜ್ವಾಲ್‌ ಮತ್ತು ಕೊಲ್ಲಾಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ