ಆ್ಯಪ್ನಗರ

ಪ್ರವಾಹ ಪೀಡಿತ ಕೇರಳಕ್ಕೆ ನೆರವಿನ ಹಸ್ತ ಚಾಚಿದ ಬೆಂಗಳೂರು

ಮಹಾ ಮಳೆ, ಪ್ರವಾಹದಿಂದ ಕಂಗೆಟ್ಟಿರುವ ನೆರೆಯ ಕೇರಳಕ್ಕೆ ನೆರವಾಗಲು ಬೆಂಗಳೂರಿಗರು ಮುಂದಾಗಿದ್ದಾರೆ. ಹಲವು ಎನ್‌ಜಿಓಗಳು ಮತ್ತು ವೈಯಕ್ತಿಕ ದಾನಿಗಳು ಪರಿಹಾರ ಸಾಮಗ್ರಿಗಳನ್ನು ಕಲೆಹಾಕಿ ಕೇರಳದ ವಯನಾಡು, ಕಣ್ಣೂರು ಮತ್ತು ಕೋಯಿಕ್ಕೋಡ್‌ನಂತಹ ಸಮೀಪದ ಜಿಲ್ಲೆಗಳಿಗೆ ಕಳುಹಿಸುತ್ತಿದ್ದಾರೆ.

Vijaya Karnataka Web 17 Aug 2018, 5:45 pm
ಬೆಂಗಳೂರು: ಮಹಾ ಮಳೆ, ಪ್ರವಾಹದಿಂದ ಕಂಗೆಟ್ಟಿರುವ ನೆರೆಯ ಕೇರಳಕ್ಕೆ ನೆರವಾಗಲು ಬೆಂಗಳೂರಿಗರು ಮುಂದಾಗಿದ್ದಾರೆ. ಹಲವು ಎನ್‌ಜಿಓಗಳು ಮತ್ತು ವೈಯಕ್ತಿಕ ದಾನಿಗಳು ಪರಿಹಾರ ಸಾಮಗ್ರಿಗಳನ್ನು ಕಲೆಹಾಕಿ ಕೇರಳದ ವಯನಾಡು, ಕಣ್ಣೂರು ಮತ್ತು ಕೋಯಿಕ್ಕೋಡ್‌ನಂತಹ ಸಮೀಪದ ಜಿಲ್ಲೆಗಳಿಗೆ ಕಳುಹಿಸುತ್ತಿದ್ದಾರೆ.
Vijaya Karnataka Web Kerala Floods new


ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಹಣಕಾಸಿನ ನೆರವು ಕಳುಹಿಸಲಾಗುತ್ತಿದ್ದರೆ, ನಗರದ ಹಲವು ಸ್ವಯಂಸೇವಕರು ಔಷಧ, ಮಕ್ಕಳ ಆಹಾರ, ಸ್ಯಾನಿಟರಿ ವಸ್ತುಗಳು, ನೀರಿನ ಬಾಟಲ್‌ಗಳು ಮತ್ತು ಸಿದ್ಧ ಆಹಾರದ ಪೊಟ್ಟಣಗಳನ್ನು ರವಾನಿಸುತ್ತಿದ್ದಾರೆ.


ಇದುವರೆಗೆ ಸುಮಾರು 164 ಮಂದಿ ಮಳೆ ಅನಾಹುತದಿಂದ ಮೃತಪಟ್ಟಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಶಂಕರ ಐ ಹಾಸ್ಪಿಟಲ್‌ ಮತ್ತು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟದಂತಹ ಸಂಘಟನೆಗಳು ಕೊಚ್ಚಿ ಮೂಲದ ಸಂಘಟನೆ ಸಹಯೋಗದೊಂದಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸುತ್ತಿವೆ.


ನಗರದ ಐದು ಕಡೆಗಳಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹ ಕೇಂದ್ರ ಆರಂಭಿಸಲಾಗಿದೆ ಎಂದು ಶಂಕರ ಐ ಹಾಸ್ಪಿಟಲ್‌ನ ಡಾ. ಕೌಶಿಕ್ ಮುರಳಿ ತಿಳಿಸಿದರು. 'ಜನರಿಂದ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ. ಹಲವು ದಿನಸಿ ವ್ಯಾಪಾರಿಗಳು, ಮೆಡಿಕಲ್‌ ಶಾಪ್‌ ಮಾಲೀಕರು ಅತ್ಯಂತ ಕಡಿಮೆ ಬೆಲೆಗೆ ಅಗತ್ಯ ವಸ್ತು, ಔಷಧಗಳನ್ನು ಒದಗಿಸುತ್ತಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಟ್ರಕ್‌ ಗುರುವಾರ ಸಂಜೆ ನಗರದಿಂದ ಹೊರಟಿದೆ' ಎಂದು ತಿಳಿಸಿದರು.


'ಡು ಫಾರ್ ಕೇರಳ' ಸಂಘಟನೆ ಕಾರ್ಯಕರ್ತೆ ಪ್ರಿಯಾ ಸುಂದರೇಶನ್‌, '1000 ಪ್ಯಾಕೆಟ್‌ ಹಾಲಿನ ಪುಡಿ, 1,000 ಡೈಪರ್‌, 1,000 ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಸಾಬೂನು, ಟೂತ್‌ಪೇಸ್ಟ್‌, ಟೂತ್ ಬ್ರಶ್‌ಗಳಂತಹ ಅಗತ್ಯ ವಸ್ತುಗಳಿರುವ 500 ಸೆಲ್ಫ್‌ ಕೇರ್‌ ಕಿಟ್‌ಗಳನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ