ಆ್ಯಪ್ನಗರ

ನಳನಳಿಸುತ್ತಿದೆ ಹೂವು‌, ರೈತರಿಗೆ ಬಂಪರ್ ಲಾಭ ಕೊಟ್ಟ ಮಾವು

ಮರದ ತುಂಬ ಹೂ ನಳನಳಿಸುತ್ತಿದೆ. ಅಲ್ಲದೇ, ಇಬ್ಬನಿ ಬೀಳುತ್ತಿರುವ ಪ್ರಮಾಣವೂ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಕಳೆದ ಅವಧಿಗೆ ಹೋಲಿಕೆ ಮಾಡಿದಲ್ಲಿ ಶೇ.50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾವು ಉತ್ಪಾದನೆಯಾಗಲಿದೆ. ಸಮೀಕ್ಷೆ ಪ್ರಕಾರ 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ.

Vijaya Karnataka Web 18 Jan 2021, 4:33 pm
ಎಚ್‌.ಪಿ.ಪುಣ್ಯವತಿ, ಬೆಂಗಳೂರು
Vijaya Karnataka Web ಮಾವು ಬೆಳೆ
ಮಾವು ಬೆಳೆ


ರಾಜ್ಯಾದ್ಯಂತ ಈ ಬಾರಿ ಮಾವಿನ ಮರಗಳ ತುಂಬ ಹೂವೇ ಹೂವು. ಹಾಗಾಗಿ ಬಂಪರ್‌ ಫಸಲು ಬರುವ ನಿರೀಕ್ಷೆ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿಮಳೆ ಕೊರತೆ ಮತ್ತು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಫಸಲು ನೀಡಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಅತಿ ಹೆಚ್ಚು ಮಳೆ ಬಿದ್ದಿದೆ. ಭೂಮಿಯಲ್ಲಿ ತೇವಾಂಶವಿದೆ.

ಹೀಗಾಗಿ ಮರದ ತುಂಬ ಹೂ ನಳನಳಿಸುತ್ತಿದೆ. ಅಲ್ಲದೇ, ಇಬ್ಬನಿ ಬೀಳುತ್ತಿರುವ ಪ್ರಮಾಣವೂ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಕಳೆದ ಅವಧಿಗೆ ಹೋಲಿಕೆ ಮಾಡಿದಲ್ಲಿ ಶೇ.50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾವು ಉತ್ಪಾದನೆಯಾಗಲಿದೆ. ಸಮೀಕ್ಷೆ ಪ್ರಕಾರ 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ.

ಸಮೀಕ್ಷೆಯಾಗದ ಬೆಳೆ ಬಹಳಷ್ಟಿದೆ. ಈ ವರ್ಷ 14-15 ಲಕ್ಷ ಟನ್‌ ಮಾವು ಉತ್ಪಾದನೆಯಾಗಲಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ. ನಾಗರಾಜ್‌ ತಿಳಿಸಿದ್ದಾರೆ.

ಮಾವು ಏರು ಮತ್ತು ಇಳಿ ಹಂಗಾಮಿನಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಏರು ಹಂಗಾಮಿನಲ್ಲಿ ಕಡಿಮೆ ಮಾವು ಬಿಟ್ಟರೆ, ಇಳಿ ಹಂಗಾಮಿನಲ್ಲಿಹೆಚ್ಚು ಮಾವು ಉತ್ಪಾದನೆಯಾಗುತ್ತಿದೆ. ಆದರೆ ಈ ವರ್ಷ ಏರು ಹಂಗಾಮು ಇದೆ. ಕಳೆದ ವಾರ ಸುರಿದ ಜಡಿ ಮಳೆಯಿಂದಾಗಿ ಮಾವಿನ ಫಸಲಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ