ಆ್ಯಪ್ನಗರ

ಫೇಸ್‌ಬುಕ್‌ನಲ್ಲಿ ಪರಿಚಯ, ಗಿಫ್ಟ್‌ ಕಳುಹಿಸುವುದಾಗಿ ವಂಚನೆ, 35 ಸಾವಿರ ರೂ. ಗುಳುಂ

​​ಕೆಲ ದಿನಗಳಲ್ಲೇ ಅಪರಿಚಿತ ನಂಬರ್‌ನಿಂದ ಮತ್ತೊಬ್ಬರು ಕರೆ ಮಾಡಿ ನಿಮ್ಮ ಹೆಸರಿಗೆ ಕೊರಿಯರ್‌ ಬಂದಿದೆ. 35 ಸಾವಿರ ರೂ. ವರ್ಗಾವಣೆ ಮಾಡಿ ಬಿಡಿಸಿಕೊಳ್ಳಿ ಎಂದಿದ್ದಾರೆ. ದುಬಾರಿ ಬೆಲೆಯ ಉಡುಗೊರೆ ಬಂದಿರಬಹುದು ಎಂದು ಭಾವಿಸಿದ ಮಹಿಳೆ, ಅಪರಿಚಿತರು ನೀಡಿದ್ದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ.

Vijaya Karnataka Web 26 Feb 2021, 11:27 pm

ಹೈಲೈಟ್ಸ್‌:

  • ಲ್ಯಾಪ್‌ಟ್ಯಾಪ್‌, ಐಫೋನ್‌ ಗಿಫ್ಟ್‌ ಕಳುಹಿಸುತ್ತೇನೆ ಎಂದು ವಂಚನೆ
  • ಅಪರಿಚಿತರು ನೀಡಿದ್ದ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ
  • ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ ಮಹಿಳೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಆನ್‌ಲೈನ್‌ ವಂಚನೆ
ಆನ್‌ಲೈನ್‌ ವಂಚನೆ
ಬೆಂಗಳೂರು: ಬಡವರೆಂದರೆ ಇಷ್ಟ. ಪ್ರೀತಿಯಿಂದ ಲ್ಯಾಪ್‌ಟ್ಯಾಪ್‌, ಐಫೋನ್‌ ಗಿಫ್ಟ್‌ ಕಳುಹಿಸುತ್ತೇನೆ ಎಂದು ನಗರದ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ ಆನ್‌ಲೈನ್‌ ಖದೀಮರು, 35 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.
ಕೆ.ಆರ್‌ ಪುರದಲ್ಲಿನೆಲೆಸಿರುವ ಮಹಿಳೆಗೆ ಜನವರಿ 15ರಂದು ಅಪರಿಚಿತ ವ್ಯಕ್ತಿ ಫೇಸ್‌ಬುಕ್‌ನಲ್ಲಿಪರಿಚಯವಾಗಿದ್ದರು. ನನಗೆ ಬಡವರೆಂದರೆ ತುಂಬಾ ಇಷ್ಟ. ನಿಮಗೆ ಸಹಾಯ ಮಾಡುತ್ತೇನೆ. ನಿಮಗಾಗಿ ಕೊರಿಯರ್‌ ಮೂಲಕ ಲ್ಯಾಪ್‌ಟಾಪ್‌, ಐ ಪೋನ್‌ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳುಹಿಸುತ್ತೇನೆ ಎಂದು ನಂಬಿಸಿದ್ದರು.

ಕೆಲ ದಿನಗಳಲ್ಲೇ ಅಪರಿಚಿತ ನಂಬರ್‌ನಿಂದ ಮತ್ತೊಬ್ಬರು ಕರೆ ಮಾಡಿ ನಿಮ್ಮ ಹೆಸರಿಗೆ ಕೊರಿಯರ್‌ ಬಂದಿದೆ. 35 ಸಾವಿರ ರೂ. ವರ್ಗಾವಣೆ ಮಾಡಿ ಬಿಡಿಸಿಕೊಳ್ಳಿ ಎಂದಿದ್ದಾರೆ. ದುಬಾರಿ ಬೆಲೆಯ ಉಡುಗೊರೆ ಬಂದಿರಬಹುದು ಎಂದು ಭಾವಿಸಿದ ಮಹಿಳೆ, ಅಪರಿಚಿತರು ನೀಡಿದ್ದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಅದಾದ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಪಾರ್ಸಲ್‌ನಲ್ಲಿ 70 ಲಕ್ಷ ರೂ. ಇದೆ. ಅದಕ್ಕೆ 90 ಸಾವಿರ ರೂ. ಕಟ್ಟಬೇಕು ಎಂದಿದ್ದಾರೆ. ಆದರೆ, ಮತ್ತೊಮ್ಮೆ ಹಣ ಕಟ್ಟದೇ ಈ ಕುರಿತು ವಿಚಾರಿಸಿದಾಗ ಮೋಸ ಎಂದು ಗೊತ್ತಾಗಿದೆ. ಪತಿಗೆ ತಿಳಿಸಿದ ಮಹಿಳೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ