ಆ್ಯಪ್ನಗರ

ಆರೆಸ್ಸೆಸ್‌ ನಾಯಕನೆಂದು ಬಿಂಬಿಸಿ ಕೋಟಿ ಕೋಟಿ ವಂಚಿಸಿದ ಯುವರಾಜ್‌ ಐದು ದಿನಗಳ ಕಾಲ ಸಿಸಿಬಿ ಬಲೆಗೆ

ತಾನು ಆರ್‌ಎಸ್‌ಎಸ್‌ನಲ್ಲಿ ಟಾಪ್‌ ಲೀಡರ್‌ ಎಂದು ಬಿಂಬಿಸಿಕೊಳ್ಳುತಿದ್ದ ಯುವರಾಜ್‌ ಮೂಲತಃ ಶಿವಮೊಗ್ಗದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಇದಕ್ಕಾಗಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹಿರಿಯ ನಾಯಕರ ರೀತಿಯಲ್ಲೇ ವೇಷಭೂಷಣ ಮಾಡಿಕೊಳ್ಳುತಿದ್ದ. ಎಲ್ಲರೂ ತನಗೆ ಪರಿಚಯವಿದ್ದು, ಅವರ ಬಳಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿಕೊಳ್ಳುತಿದ್ದ.

Vijaya Karnataka Web 18 Dec 2020, 7:55 am
ಬೆಂಗಳೂರು: ಕೋಟ್ಯಂತರ ರೂ. ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಮೋಸದ ಜಾಲ ಬಗೆದಷ್ಟು ಬಯಲಾಗುತ್ತಿದ್ದು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಹಾಗೂ ನಿವೃತ್ತ ನ್ಯಾಯಾಧೀಶರೂ ಸೇರಿದಂತೆ ವಿವಿಧ ವರ್ಗದ ಜನರನ್ನು ವಂಚಿಸುತ್ತಿದ್ದ ವಂಚಕನನ್ನು 5 ದಿನಗಳ ಕಾಲ ಸಿಸಿಬಿ ತನ್ನ ವಶಕ್ಕೆ ಪಡೆದುಕೊಂಡಿದೆ.
Vijaya Karnataka Web ccb
ಸಂಗ್ರಹ ಚಿತ್ರ


ಯುವರಾಜ್‌ ಮೂಲತಃ ಶಿವಮೊಗ್ಗದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ತಾನು ಆರ್‌ಎಸ್‌ಎಸ್‌ನಲ್ಲಿ ಟಾಪ್‌ ಲೀಡರ್‌ ಎಂದು ಬಿಂಬಿಸಿಕೊಳ್ಳುತಿದ್ದ. ಇದಕ್ಕಾಗಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹಿರಿಯ ನಾಯಕರ ರೀತಿಯಲ್ಲೇ ವೇಷಭೂಷಣ ಮಾಡಿಕೊಳ್ಳುತಿದ್ದ. ಎಲ್ಲರೂ ತನಗೆ ಪರಿಚಯವಿದ್ದು, ಅವರ ಬಳಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿಕೊಳ್ಳುತಿದ್ದ.

ಸಿಗಂದೂರು ದೇವಾಲಯದಿಂದ ಅರಣ್ಯಭೂಮಿ ಒತ್ತುವರಿ ಆರೋಪ; ವರದಿ ಸಲ್ಲಿಸಲು ಹೈಕೋರ್ಟ್‌ ಮೂರು ವಾರದ ಗಡುವು

ವಿಮಾನ ಮಾರ್ಗವಾಗಿ ಅತಿ ಹೆಚ್ಚು ಬೆಂಗಳೂರು-ದೆಹಲಿ ನಡುವೆ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಪರಿಚಯಿಸಿಕೊಳ್ಳುವ ಮೂಲಕ ತಾನು ಪ್ರಭಾವಿ ಎಂದು ನಂಬಿಸುತ್ತಿದ್ದ. ನಂಬಿಕೆ ಗಳಿಸಿದ ಬಳಿಕ ಸರಕಾರದ ಮಟ್ಟದಲ್ಲಿ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದು ವಂಚಿಸುತಿದ್ದ. ಅದೇ ರೀತಿ ಐಎಎಸ್‌, ಐಪಿಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳಿಗೆ ಹೇಳುವ ಜಾಗಕ್ಕೆ ಪೋಸ್ಟಿಂಗ್‌ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. ವರ್ಗಾವಣೆ ಮಾಡಿಸದೇ ಹಣವೂ ನೀಡದೆ ಸತಾಯಿಸುತ್ತಿದ್ದ. ಕೆಲ ರಾಜಕಾರಣಿಗಳಿಗೆ ನಿಗಮ ಮಂಡಳಿ ಸ್ಥಾನ ಕೊಡಿಸುತ್ತೇನೆ ಎಂದು ನಂಬಿಸಿ ಹಣ ವಂಚಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

₹10 ಕೋಟಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಗೆ ವಂಚನೆ..! ಆರೋಪಿ ಬಂಧ

ಅಲ್ಲದೆ, ನಿವೃತ್ತ ಮಹಿಳಾ ನ್ಯಾಯಾಧೀಶೆಯನ್ನು ಕಳೆದ ಎಂಟು ತಿಂಗಳ ಹಿಂದೆ ಸಂಪರ್ಕ ಮಾಡಿ ರಾಜ್ಯವೊಂದರ ರಾಜ್ಯಪಾಲೆಯಾಗಿ ಮಾಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಅವರ ಬಳಿಯಿಂದ ಕೋಟ್ಯಂತರ ರೂ. ಹಣ ಪಡೆದಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಯುವರಾಜ್‌ನನ್ನು ವಸಂತನಗರದಲ್ಲಿರುವ ವರ್ಚುಯಲ್‌ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಲಯದ ಸೂಚನೆ ಮೇರೆಗೆ ಐದು ದಿನಗಳ ಕಾಲ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ