ಆ್ಯಪ್ನಗರ

ಮೆಟ್ರೋ ಸ್ಟೇಷನ್‌ನಲ್ಲಿ ಇನ್ನು ಪ್ರೀ ಪೇಯ್ಡ್ ಆಟೋ ಕೌಂಟರ್

ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಷನ್‌ ಬಳಿ ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭವಾಗಲಿದ್ದು, ಇದರಿಂದ ಪ್ರಯಾಣಿಕರು ಹಾಗೂ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ.

Vijaya Karnataka Web 29 Nov 2017, 10:40 am
ಬೆಂಗಳೂರು: ಹತ್ತಾರು ಕಿ.ಮೀ. ದೂರವನ್ನು ನಮ್ಮ ಮೆಟ್ರೊನಲ್ಲಿ ಪ್ರಯಾಣಿಸುತ್ತೇವೆ. ಆದರೆ, ಮನೆಗೆ ತಲುಪುವ ಮೂರ್ನಾಲ್ಕು ಕಿ.ಮೀ. ಪ್ರಯಾಣಕ್ಕೆ ಮಾತ್ರ ಸಿಕ್ಕಾಪಟ್ಟೆ ಒದ್ದಾಡುತ್ತೇವೆ. ಕ್ಯಾಬ್‌ಗಳ ಮಧ್ಯೆ ಈ ಆಟೋ ರಿಕ್ಷಾ ಚಾಲಕರೂ ಪರದಾಡಬೇಕಾಗಿದೆ. ಒಟ್ಟಿನಲ್ಲಿ ಪ್ರಯಾಣ ತ್ರಾಸವೆನಿಸುತ್ತದೆ.
Vijaya Karnataka Web have prepaid counters at all metro stations
ಮೆಟ್ರೋ ಸ್ಟೇಷನ್‌ನಲ್ಲಿ ಇನ್ನು ಪ್ರೀ ಪೇಯ್ಡ್ ಆಟೋ ಕೌಂಟರ್


ಬೆಂಗಳೂರಿಗರ ಈ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಂಚಾರಿ ಪೊಲೀಸರು ನಮ್ಮ ಮೆಟ್ರೋ ನಿಲ್ದಾಣದ ಸಮೀಪ ಪ್ರೀ ಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದ್ದಾರೆ.

ಈಗಾಗಲೇ ಬಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ ಪ್ರೀ ಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಿದ್ದು, ಮೈಸೂರು ರೋಡ್ ನಿಲ್ದಾಣದ ಸಮೀಪವೂ ಶೀಘ್ರದಲ್ಲಿಯೇ ಈ ಸೇವೆಯನ್ನು ಆರಂಭಿಸಲಾಗುತ್ತದೆ. ಆಟೋ ಚಾಲಕರೂ ಈ ಸೇವೆ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದು, ಕೌಂಟರ್ ನಿರ್ಮಿಸಲು ಆಟೋ ರಿಕ್ಷಾ ಸಂಘಟನೆಗಳು ಆಸಕ್ತಿ ತೋರಿವೆ, ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿಂತೇಂದ್ರ ಹೇಳಿದ್ದಾರೆ. ಇದಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ಗೆ ಸ್ಥಳ ಒದಗಿಸುವಂತೆ ಕೋರಲಾಗಿದೆ.

ಓಲಾ, ಊಬರ್‌ನ ಶೇರಿಂಗ್ ಸೇವೆಯಿಂದ ಆಟೋ ರಿಕ್ಷಾ ಚಾಲಕರು ಪರದಾಡುವಂತಾಗಿದೆ. ಈಗಾಗಲೇ ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಸಲು ಆಗ್ರಹಿಸಲಾಗಿದ್ದು, ಇದು ಜಾರಿಗೆ ಬಂದರೆ ಅವರಿಗೇ ಹೊಡೆತ ಎಂಬ ಆತಂಕವಾವೂ ರಿಕ್ಷಾಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ