ಆ್ಯಪ್ನಗರ

ಪಿಎಂ ಕೇರ್ ಫಂಡ್‌ಗೆ ಒಂದು ತಿಂಗಳ ಸಂಬಳ ದಾನ ಮಾಡಿದ ಬೆಂಗಳೂರಿನ ಹೆಡ್‌ಕಾನ್‌ಸ್ಟೆಬಲ್‌

ಬೆಂಗಳೂರಿನ ಸಂಪಂಗಿರಾಮ ನಗರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಎಸ್‌.ಎಚ್‌. ಹನುಮಂತರಾಯ ಅವರು ತಮ್ಮ ಒಂದು ತಿಂಗಳ ಪೂರ್ಣ ಸಂಬಳವನ್ನು ಪಿಎಂ ಕೇರ್‌ ಫಂಡ್‌ಗೆ ದೇಣಿಗೆ ನೀಡಿದ್ದು, ಪೊಲೀಸ್‌ ಆಯುಕ್ತರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Vijaya Karnataka Web 20 Jun 2020, 11:05 am
ಬೆಂಗಳೂರು: ನಗರದ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಒಂದು ತಿಂಗಳ ಪೂರ್ಣ ಸಂಬಳವನ್ನು ಪಿಎಂ ಕೇರ್‌ ಫಂಡ್‌ಗೆ ದೇಣಿಗೆ ನೀಡಿದ್ದಾರೆ.
Vijaya Karnataka Web Headconstable bengaluru


ಬೆಂಗಳೂರಿನ ಸಂಪಂಗಿರಾಮ ನಗರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಎಸ್‌.ಎಚ್‌. ಹನುಮಂತರಾಯ ಎಂಬುವವರು ತಮ್ಮ ಒಂದು ತಿಂಗಳ ಪೂರ್ಣ ಸಂಬಳವನ್ನು ಪ್ರಧಾನಿ ನಿಧಿಗೆ ನೀಡಿದ್ದಾರೆ. ಈ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ್ದಾರೆ.


ಆದರೆ ಬಾಸ್ಕರ್‌ ರಾವ್‌ ಅವರ ಈ ಟ್ವೀಟ್‌ಗೆ ಹಲವಾರು ಪ್ರತಿಕ್ರಿಯೆಗಳು ಕೂಡ ಬಂದಿದ್ದು, ಕೆಲವರು ಪಿಎಂ ಕೇರ್‌ ಫಂಡ್‌ಗೆ ದೇಣಿಗೆ ನೀಡಿರುವುದನ್ನು ಟೀಕಿಸಿದ್ದಾರೆ.

ವಿಶ್ವದ ಟಾಪ್‌ 10 ಶ್ರೀಮಂತರಲ್ಲಿ ಮುಕೇಶ್‌ ಅಂಬಾನಿ: ಫೋರ್ಬ್ಸ್‌ ಪಟ್ಟಿ!

ಗೌರವಯುತ ಸ್ಥಾನದಲ್ಲಿರುವ ನೀವು ಎಲ್ಲಿ ದಾನ ಮಾಡಬೇಕು ಎಂದು ಮಾರ್ಗದರ್ಶನ ಮಾಡಬೇಕಲ್ಲವೇ. ಪಿಎಂ ಕೇರ್‌ ನಿಧಿ ಒಂದು ವಿವಾದಿತ ನಿಧಿಯಾಗಿದೆ. ಇದಕ್ಕಿಂತಲೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದೇ ಹೆಚ್ಚು ಪ್ರಯೋಜನಕಾರಿಯಲ್ಲವೇ ಎಂದು ಸಂಗ್ರಾಮ್‌ ಸತ್ಪತಿ ಎಂಬುವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.



ಅಲ್ಲದೆ ಕಾನ್‌ಸ್ಟೆಬಲ್ ನೀಡುವ ದೇಣಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಪಿಎಂ ಕೇರ್‌ಗೆ ತಮ್ಮ ಒಂದು ತಿಂಗಳ ಪೂರ್ಣ ಸಂಬಳ ನೀಡಿರುವ ಹನುಮಂತರಾಯ ಅವರು ಪೊಲೀಸ್‌ ಇಲಾಖೆಯ ಮಾಣಿಕ್ಯವಿದ್ದಂತೆ ಎಂದು ವೇಣುಗೋಪಾಲ್‌ ಅವರು ಪ್ರತಿಕ್ರಿಯಿಸಿದ್ದಾರೆ.

5000 ಮೇಲ್ಪಟ್ಟ ಎಟಿಎಂ ವಿತ್‌ಡ್ರಾಗೆ ಶುಲ್ಕ: ಆರ್‌ಬಿಐಗೆ ಶಿಫಾರಸು

ಕೊರೊನಾ ಸಂಕಷ್ಟದಲ್ಲಿ ಇರುವವರಿಗಾಗಿ ನೆರವು ನೀಡುವ ಉದ್ದೇಶದೊಂದಿಗೆ ಪಿಎಂ ಕೇರ್‌ ನಿಧಿ ಸ್ಥಾಪಿಸಲಾಗಿದೆ. ಕೊರೊನಾ ವೈರಸ್‌ ಪರಿಣಾಮ ದೇಶಾದ್ಯಂತ ಲಾಕ್ಡೌನ್‌ ಜಾರಿಯಾದಾಗ, ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡಲೆಂದು ಕೇಂದ್ರ ಸರಕಾರವು' ಪಿಎಂ ಕೇರ್ಸ್‌ ಫಂಡ್‌' ಸ್ಥಾಪಿಸಿದೆ. ಈಗಾಗಲೇ ಹಲವಾರು ಉದ್ಯಮಿಗಳು, ನಟರು, ಸಂಸ್ಥೆಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ