ಆ್ಯಪ್ನಗರ

ಬಿಯು ನಂಬರ್, ಪರೀಕ್ಷಾ ವರದಿ‌ ಇಲ್ಲದ ಕೊರೊನಾ ರೋಗಿಗಳು ಆಸ್ಪತ್ರೆಗೆ ಬಂದರೆ ತಕ್ಷಣ ದಾಖಲಿಸಿಕೊಳ್ಳಲು ಆದೇಶ!

ಬಿಯು ಸಂಖ್ಯೆ , ಕೋವಿಡ್ 19 ಪರೀಕ್ಷಾ ವರದಿ ಅಥವಾ ಬಿಬಿಎಂಪಿ ಪತ್ರ ಇಲ್ಲ ಎಂದು ಆಸ್ಪತ್ರೆಗಳು ಕೊರೊನಾ ಲಕ್ಷಣಗಳಿರುವ ರೋಗಿಗಳನ್ನ ದಾಖಲು ಮಾಡದೆ ಇರುವಂತಿಲ್ಲ. ಈ ಬಗ್ಗೆ ಸರಕಾರ ಅಧಿಕೃತ ಆದೇಶ ಹೊರಡಿಸಿದ್ದು ರೋಗ ಲಕ್ಷಣಗಳಿರುವ ರೋಗಿ ಬಂದರೆ ಕೂಡಲೇ ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದೇಶ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Vijaya Karnataka Web 14 Jul 2020, 2:28 pm
ಬೆಂಗಳೂರು: ಕೊರೊನಾ ಲಕ್ಷಣಗಳಿರುವ ರೋಗಿಗಳು ಆಸ್ಪತ್ರೆಗೆ ಬಂದರೆ ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಬಿಯು ಸಂಖ್ಯೆ , ಕೋವಿಡ್ 19 ಪರೀಕ್ಷಾ ವರದಿ ಅಥವಾ ಬಿಬಿಎಂಪಿ ಪತ್ರಕ್ಕಾಗಿ ಕಾಯಬೇಕಾಗಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Vijaya Karnataka Web _111602800_1andindexpicture (1)


ಕೊರೊನಾ ಲಕ್ಷಣಗಳನ್ನ ಹೊಂದಿರುವ, ಉದಾಹರಣೆಗೆ ಉಸಿರಾಟದ ತೊಂದರೆಯಿಂದ 108 ಅಂಬ್ಯಲೆನ್ಸ್‌ನಲ್ಲಿ ಬರುವ ರೋಗಿಗಳನ್ನ ಕೂಡಲೇ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನ ದಾಖಲಿಸಿಕೊಂಡು. ನಿಗಾ ಘಟಕದಲ್ಲಿ ಇಟ್ಟು ಕೊರೊನಾ ನಿಯಮಗಳನ್ನ ಪಾಲಿಸುವ ಮೂಲಕ ಅವರಿಗೆ ಚಿಕಿತ್ಸೆ ನೀಡಬೇಕು.

ಕೊರೊನಾ ಪರೀಕ್ಷಾ ರಿಪೋರ್ಟ್‌ ಬಂದಿಲ್ಲ, ಬಿಯು ಸಂಖ್ಯೆ ಇಲ್ಲ ಅಥವಾ ಬಿಬಿಎಂಪಿ ಪತ್ರ ಕೊಟ್ಟಿಲ್ಲ ಎಂದು ತಡ ಮಾಡುವಂತಹ ಕೆಲಸ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ ನಂತರ ಎಲ್ಲಾದರು ಪಾಸಿಟಿವ್‌ ಎಂದು ಬಂದರೆ ಅವರನ್ನ ಕೊರೊನಾ ಸೋಂಕು ಇರುವ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಬೇಕು ಅಥವಾ ಪಾಸಿಟಿವ್‌ ಬಂದಿಲ್ಲ ಅಂತಾದರೆ ಅವರನ್ನ ಸಾಮಾನ್ಯವಾಗಿರುವ ರೋಗಿಗಳ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ.

ಕೊರೊನಾ ಸೋಂಕಿಗೆ ಬೆಂಗಳೂರಿನ ಪಿಎಸ್‌ಐ ಸಾವು: ಇದುವರೆಗೆ 6 ಪೊಲೀಸರು ಬಲಿ!

ಅಲ್ಲದೇ, ಎಲ್ಲಾದರೂ ಈ ಆದೇಶವನ್ನ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಅದಿನಿಯಮ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಬಿಯು ಸಂಖ್ಯೆ , ಕೋವಿಡ್ 19 ಪರೀಕ್ಷಾ ವರದಿ ಅಥವಾ ಬಿಬಿಎಂಪಿ ಪತ್ರ ಇಲ್ಲ ಎನ್ನುವ ಕಾರಣಕ್ಕೆ ದಾಖಲಾತಿ ಮಾಡುತ್ತಿಲ್ಲ. ಇದರಿಂದಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ