ಆ್ಯಪ್ನಗರ

ಹುಳಿಮಾವು ಕೆರೆ ಅನಾಹುತ: ಬಿಬಿಎಂಪಿ, ಬಿಡಿಎಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಹುಳಿಮಾವು ಕೆರೆ ಅನಾಹುತ ಪ್ರಕರಣ ಹೈಕೋರ್ಟ್‌ನಲ್ಲೂ ಸದ್ದು ಮಾಡಿದೆ. ಈ ವೇಳೆ ಬಿಬಿಎಂಪಿ, ಬಿಡಿಎಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಿ ಎಂದು ರಾಜ್ಯ ಸರಕಾರಕ್ಕೆ ಇಂದು ಸೂಚನೆ ನೀಡಿದೆ.

Vijaya Karnataka Web 27 Nov 2019, 2:39 pm
ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಬಿಬಿಎಂಪಿ, ಬಿಡಿಎಯನ್ನು ಉಚ್ಛ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web high court


ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣದ ವಿಚಾರಣೆ ವೇಳೆ ಇತರೆ ಕೆರೆಗಳ ವಿಚಾರದ ಬಗ್ಗೆಯೂ ಹೈಕೋರ್ಟ್‌ನಲ್ಲಿ ಪ್ರಸ್ತಾಪ ನಡೆದಿದೆ. ಈ ವೇಳೆ ಹುಳಿಮಾವು ಕೆರೆ ಕೋಡಿ ಒಡೆದಿದ್ದು ಬಿಬಿಎಂಪಿ ಅಜಾಗರೂಕತೆಯಿಂದ ಎಂದು ಬಿಡಿಎ‌ ಹೇಳುತ್ತಿದೆ, ಬಿಡಿಎ ಅಜಾಗರೂಕತೆಯಿಂದ ಎಂದು ಬಿಬಿಎಂಪಿ ಹೇಳುತ್ತಿದೆ ಎಂದು ಹೈಕೋರ್ಟ್‌ ಬಿಬಿಎಂಪಿ, ಬಿಡಿಎಗೆ ಚಾಟಿ ಬೀಸಿದೆ.

ಅಲ್ಲದೆ, ಇಬ್ಬರೂ ಪರಸ್ಪರ ಒಬ್ಬರ ಮೇಲೋಬ್ಬರು ಆರೋಪ ಮಾಡಿದರೆ ಸಾಲದು, ಕೋಡಿ ಒಡೆದಿದ್ದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಅವರಿಗೆ ಪುನರ್ವಸತಿಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಹೈಕೋರ್ಟ್ ಸೂಚನೆ ನೀಡಿತು.

ಈ ಸುದ್ದಿ ಓದಿ: ಹುಳಿಮಾವು ಕೆರೆ ಅನಾಹುತ: ಲೋಕಾಯುಕ್ತರಿಂದ ಸ್ಥಳ ಪರಿಶೀಲನೆ; ಬಿಬಿಎಂಪಿಗೆ 2 ವಾರ ಗಡುವು

ಇನ್ನು, ರಾಜ್ಯ ಸರಕಾರ ಬಿಬಿಎಂಪಿ ಹಾಗು‌ ಬಿಡಿಎ ನಡುವೆ ಮಧ್ಯಸ್ಥಿಕೆ ವಹಿಸಬೇಕು. ಘಟನೆಗೆ ನಿಖರವಾದ ಕಾರಣ ಏನು ಅಂತ ಪತ್ತೆ ಹಚ್ಚಬೇಕು, ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದೂ ಬಿಜೆಪಿ ಸರಕಾರಕ್ಕೆ ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ: ಇದೂ ಬೆಂಗಳೂರಾ? ರಾಜಧಾನಿಯ ಪ್ರವಾಹದ ಅಬ್ಬರ ನೋಡಿದ್ರೆ ಆಶ್ಚರ್ಯವಾಗುತ್ತೆ!

ಅಲ್ಲದೆ, ಅಗತ್ಯವಿದ್ದಲ್ಲಿ ನೀರಿಯಂತಹ ಪರಿಣಿತ ಸಂಸ್ಥೆಯ ಸಹಾಯವನ್ನು ಪಡೆದು ಯಾವ ಕಾರಣಕ್ಕೆ ಕೋಡಿ ಒಡೆಯಿತು ಎಂದು ಪತ್ತೆ ಹಚ್ಚಿ. ಮುಂದಿನ ವಿಚಾರಣೆ ವೇಳೆ ಈ ಬಗ್ಗೆ ನಿಖರ ಕಾರಣ ತಿಳಿಸಲು ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ.

ಭಾರಿ ಮಳೆಗೆ ತುಂಬಿ ಹರಿದ ಬೆಂಗಳೂರಿನ 9 ಕೆರೆಗಳು

ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಸಹ ಹುಳಿಮಾವು ಕೆರೆ ಅನಾಹುತ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ