ಆ್ಯಪ್ನಗರ

ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ ಗುರುತಿನ ಚೀಟಿ

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳಲ್ಲಿವ್ಯಾಪಾರ ನಡೆಸುತ್ತಿರುವ 24 ಸಾವಿರ ಮಂದಿಗೆ ಶೀಘ್ರದಲ್ಲೇ ಗುರುತಿನ ಚೀಟಿ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪ್ರಕಟಿಸಿದರು.

Vijaya Karnataka Web 23 Feb 2018, 10:24 am
ಬೆಂಗಳೂರು: ರಾಜಧಾನಿಯಲ್ಲಿನ ಪಾದಚಾರಿ ಮಾರ್ಗಗಳಲ್ಲಿವ್ಯಾಪಾರ ನಡೆಸುತ್ತಿರುವ 24 ಸಾವಿರ ಮಂದಿಗೆ ಶೀಘ್ರದಲ್ಲೇ ಗುರುತಿನ ಚೀಟಿ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪ್ರಕಟಿಸಿದರು.
Vijaya Karnataka Web id card to hawkers
ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ ಗುರುತಿನ ಚೀಟಿ


ವಿಧಾನ ಪರಿಷತ್‌ನಲ್ಲಿಗುರುವಾರ ಪ್ರಶ್ನೋತ್ತರ ಅವಧಿಯಲ್ಲಿಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು ''ಸಾರ್ವಜನಿಕ ಸ್ಥಳಗಳಲ್ಲಿಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಇಲ್ಲ. ಇದನ್ನು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು , ಪಾದಚಾರಿಗಳಿಗೆ ತೊಂದರೆ ಆಗದ ರೀತಿ ವಹಿವಾಟು ನಡೆಸಲು ಅಧಿಕೃತ ಗುರುತಿನ ಚೀಟಿ ವಿತರಿಸಲಾಗುವುದು,'' ಎಂದರು.

''ರಸ್ತೆ ಬದಿಯಿರುವ ಎಲ್ಲಾ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗದು. ಮಾನವೀಯ ದೃಷ್ಟಿಯಿಂದಲೂ ಸಮಸ್ಯೆಯನ್ನು ವೀಕ್ಷಿಸಬೇಕಿದೆ. ಆದರೆ, ಪಾದಚಾರಿಗಳಿಗೆ ಪದೇ ಪದೆ ತೊಂದರೆ ಆಗುವಂತಿದ್ದಲ್ಲಿಅಂತಹ ಸ್ಥಳಗಳಲ್ಲಿವ್ಯಾಪಾರಕ್ಕೆ ಕಡಿವಾಣ ಹಾಕಲಾಗುವುದು,'' ಎಂದು ಸ್ಪಷ್ಟಪಡಿಸಿದರು.

''ವಿದೇಶದಲ್ಲಿಪಾದಚಾರಿಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ನಮ್ಮಲ್ಲಿಅಂತಹ ವಾತಾವರಣ ಇನ್ನೂ ಬಂದಿಲ್ಲ. ಇಲ್ಲಿನ ಪಾದಚಾರಿ ಮಾರ್ಗಗಳನ್ನು ಜನಸ್ನೇಹಿಯಾಗಿಸಲು ಸರಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿದ್ದು , ಇನ್ನಷ್ಟು ಕಾಮಗಾರಿ ಕೈಗೊಳ್ಳಲಾಗುವುದು,'' ಎಂದು ಸಚಿವರು ವಿವರಿಸಿದರು.

ಗುರುತಿಸಲಾದ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ

ವಲಯ ಫಲಾನುಭವಿ

ಪೂರ್ವ 3550

ಪಶ್ಚಿಮ 5481

ದಕ್ಷಿಣ 3970

ಬೊಮ್ಮನಹಳ್ಳಿ 2820

ಮಹದೇವಪುರ 2584

ಯಲಹಂಕ 1905

ದಾಸರಹಳ್ಳಿ 1892

ಆರ್‌.ಆರ್‌.ನಗರ2655

ಒಟ್ಟು 24857


ಮ್ಯಾನ್‌ಹೋಲ್‌ ಸ್ಥಳಾಂತರಕ್ಕೆ ಕ್ರಮ

''ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ1.5 ಲಕ್ಷ ಮ್ಯಾನ್‌ಹೋಲ್‌(ಇಳಿಗುಂಡಿ) ಇವೆ. ಇವುಗಳನ್ನು 118 ಜೆಟ್ಟಿಂಗ್‌ ಹಾಗೂ 32 ಡಿಸಿಲ್ಟಿಂಗ್‌ ಯಂತ್ರಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ರಸ್ತೆ ಮಧ್ಯದಲ್ಲಿರುವ ಇಳಿಗುಂಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಜತೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಥಿಲಾವಸ್ಥೆ ತಲುಪಿಸುವ ಇಳಿಗುಂಡಿಗಳ ದುರಸ್ತಿಗೂ ಗಮನ ಹರಿಸಲಾಗಿದೆ,'' ಎಂದು ಸಚಿವ ಜಾರ್ಜ್‌ ಅವರು ಬಿಜೆಪಿಯ ತಾರಾ ಅನುರಾಧಾ ಪ್ರಶ್ನೆಗೆ ಉತ್ತರಿಸಿದರು.

' ವೈಟ್‌ ಟಾಪಿಂಗ್‌ ರಸ್ತೆಯಲ್ಲಿನಿಧಾನವಾಗಿ ಚಲಿಸಿ'

''ರಾಜಧಾನಿಯಲ್ಲಿನ ರಸ್ತೆಗಳನ್ನು ಸರ್ವ ಋತು ಮಾರ್ಗವನ್ನಾಗಿಸಲು ವೈಟ್‌ ಟಾಪಿಂಗ್‌ಗೆ ಬದಲಾಯಿಸಲಾಗುತ್ತಿದೆ. ಇದರಿಂದ ರಸ್ತೆಗಳು ದೀರ್ಘ‌ ಬಾಳಿಕೆ ಬರುತ್ತವೆ. ಗುಂಡಿ ಬಿದ್ದ ರಸ್ತೆಗಳ ಜಾಗದಲ್ಲಿಉತ್ತಮ ಮಾರ್ಗಗಳು ನಗರದ ಜನರಿಗೆ ಲಭ್ಯವಾಗಲಿದೆ. ಲೋಕಾರ್ಪಣೆ ಮಾಡಿರುವ ವೈಟ್‌ ಟಾಪಿಂಗ್‌ ರಸ್ತೆಗಳು ಉತ್ತಮವಾಗಿರುವ ಕಾರಣ ಸವಾರರು ವೇಗವಾಗಿ ವಾಹನ ಚಾಲಯಿಸುತ್ತಿದ್ದು , ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರಭಸವಾಗಿ ವಾಹನ ಓಡಿಸದೆ ನಿಧಾನವಾಗಿ ಚಲಿಸಿದರೆ ಸವಾರರು ಸುರಕ್ಷಿತವಾಗಿ ಗಮ್ಯ ತಲುಪಬಹುದು,'' ಎಂದು ಸಚಿವರು ಬಿಜೆಪಿಯ ರಾಮಚಂದ್ರಗೌಡ ಪ್ರಶ್ನೆಗೆ ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ