ಆ್ಯಪ್ನಗರ

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ; ಬಿಬಿಎಂಪಿ ಸೇವೆಯಿಂದ ಮಾಯಣ್ಣ ಅಮಾನತು

ಆರೋಪಿಯನ್ನು ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರಿಸಿದರೆ ಪ್ರಭಾವ ಬಳಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಇಲ್ಲವೇ ತಿರುಚುವ ಸಾಧ್ಯತೆಗಳಿವೆ. ಆದರ ಕಾರಣ, ಆರೋಪಿ ನೌಕರನನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಎಸಿಬಿಯ ಪೊಲೀಸ್‌ ಅಧೀಕ್ಷಕರು ನ. 29ರಂದು ಬಿಬಿಎಂಪಿಗೆ ಪತ್ರ ಬರೆದು ಶಿಫಾರಸು ಮಾಡಿದ್ದರು.

Vijaya Karnataka 9 Dec 2021, 12:40 pm
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
Vijaya Karnataka Web mayanna


ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ನ. 24ರಂದು ಮಾಯಣ್ಣ ಅವರ ಮನೆ ಮೇಲೆ ದಾಳಿ ನಡೆಸಿ, 5.71 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ಚರಾಸ್ತಿಯನ್ನು ವಶಪಡಿಸಿಕೊಂಡಿತ್ತು. ಆರೋಪಿತ ನೌಕರ ಮಾಯಣ್ಣ ಒಟ್ಟು 5.71 ಕೋಟಿ ರೂ. ಆಸ್ತಿ ಹೊಂದಿದ್ದು, ಇದರಲ್ಲಿ 2.20 ಕೋಟಿ ರೂ. ಆದಾಯ ಹೊಂದಿದ್ದಾನೆ. ಆರೋಪಿಯು ತನ್ನ ಆದಾಯಕ್ಕಿಂತ ಹೆಚ್ಚುವರಿಯಾಗಿ 3.51 ಕೋಟಿ ರೂ. (ಶೇ 159ರಷ್ಟು) ಅಕ್ರಮ ಆಸ್ತಿ ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ.
ಕಪ್ಪು ಹಣದ ಅಕ್ರಮ ವರ್ಗಾವಣೆ ದಂಧೆ: ಬೆಂಗಳೂರಿನಲ್ಲಿ ನಾಲ್ವರ ಬಂಧನ
ಆರೋಪಿಯನ್ನು ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರಿಸಿದರೆ ಪ್ರಭಾವ ಬಳಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಇಲ್ಲವೇ ತಿರುಚುವ ಸಾಧ್ಯತೆಗಳಿವೆ. ಆದರ ಕಾರಣ, ಆರೋಪಿ ನೌಕರನನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಎಸಿಬಿಯ ಪೊಲೀಸ್‌ ಅಧೀಕ್ಷಕರು ನ. 29ರಂದು ಬಿಬಿಎಂಪಿಗೆ ಪತ್ರ ಬರೆದು ಶಿಫಾರಸು ಮಾಡಿದ್ದರು.

ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕಾಯಿದೆ- 1988ರ ಕಲಂ 13(1)(ಬಿ) ಜತೆಗೆ 13(2)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಹೀಗಾಗಿ, ಎಸಿಬಿ ವಿಚಾರಣೆ ಬಾಕಿ ಇರಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇವರ ಲೀನ್‌ (ವೇತನ ಸ್ಥಳ ಬದಲಾವಣೆ) ಅನ್ನು ಸಹಾಯಕ ಕಂದಾಯ ಅಧಿಕಾರಿ (ದಕ್ಷಿಣ- ಮಾರುಕಟ್ಟೆ) ಕಚೇರಿಗೆ ವರ್ಗಾಯಿಸಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ