ಆ್ಯಪ್ನಗರ

4 ವರ್ಷದಲ್ಲಿ ಬೆಂಗಳೂರಿನಲ್ಲಿ ​ರಸ್ತೆ ಅಪಘಾತಗಳಿಗೆ ಬಲಿಯಾದವರು 3,250 ಮಂದಿ

ಬೆಂಗಳೂರು ನಾಲ್ಕು ವರ್ಷ ( 2014 - 2018 ) ಗಳಲ್ಲಿ ರಸ್ತೆ ಅಪಘಾತಗಳಿಗೆ 3,250 ಮಂದಿ ಬಲಿಯಾಗಿದ್ದು, 18,694 ಮಂದಿ ಗಾಯಗೊಂಡಿದ್ದಾರೆ.

Vijaya Karnataka Web 30 Jul 2018, 3:21 pm
ಬೆಂಗಳೂರು: ನಗರದಲ್ಲಿ ನಾಲ್ಕು ವರ್ಷ ( 2014 - 2018 )ಗಳಲ್ಲಿ ರಸ್ತೆ ಅಪಘಾತಗಳಿಗೆ 3,250 ಮಂದಿ ಬಲಿಯಾಗಿದ್ದು, 18,694 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web ACCIDENT


511 ಕಾರು, 477 ಮಂದಿ ಲಾರಿ, 458 ಮಂದಿ ಬೈಕ್‌, 352 ಅಪರಿಚಿತ ವಾಹನ ಅಪಘಾತಗಳಿಂದ ಮೃತಪಟ್ಟಿದ್ದಾರೆ. 2014-15ರಲ್ಲಿ 740, 2016-17ರಲ್ಲಿ 642, 2018 ಜೂನ್‌ವರೆಗೆ 338 ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರ ದಾಖಲೆ ತಿಳಿಸಿದೆ.

ನಗರದಲ್ಲಿ ದ್ವಿಚಕ್ರ ವಾಹನ ಅಪಘಾತಗಳು ಹೆಚ್ಚುತ್ತಿವೆ. ಹೆಲ್ಮೆಟ್‌ ಇಲ್ಲದ ಹಿಂಬದಿ ಸವಾರರು ಸಾಯುವ ಸಂಖ್ಯೆ ಹೆಚ್ಚು. ಎಲ್ಲ ಚಾಲಕರು ಟ್ರಾಫಿಕ್‌ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಟ್ರಾಫಿಕ್‌ ವಿಭಾಗದ ಹೆಚ್ಚುವರಿ ಆಯುಕ್ತ ಹಿತೇಂದ್ರ ಹೇಳಿದ್ದಾರೆ.

ಈ ವರ್ಷ ಇಲ್ಲಿವರೆಗೆ 1,660 ಅಪಘಾತಗಳಲ್ಲಿ ಯಾರೂ ಮೃತಪಟ್ಟಿಲ್ಲ, 2,102 ಮಂದಿ ಗಾಯಗೊಂಡಿದ್ದಾರೆ. ಉಳಿದ 330 ಅಪಘಾತಗಳಲ್ಲಿ 338 ಪ್ರಾ ಣ ಕಳೆದುಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ