ಆ್ಯಪ್ನಗರ

ಕೈಗಾರಿಕೋದ್ಯಮಿಗಳಿಂದ 'ಕೋವಿಡ್‌-19 ಸಿಎಂ ಪರಿಹಾರ ನಿಧಿಗೆ' ಭರಪೂರ ದೇಣಿಗೆ!

ಕೊರೊನಾ ವೈರಸ್‌ ( ಕೋವಿಡ್-19) ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ವತಿಯಿಂದ ಭರಪೂರ ದೇಣಿಗೆ ಘೊಷಿಸಿವೆ.

Vijaya Karnataka Web 31 Mar 2020, 4:35 pm
ಬೆಂಗಳೂರು: ಕೊರೊನಾ ವೈರಸ್‌ ( ಕೋವಿಡ್-19) ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ವತಿಯಿಂದ ಭರಪೂರ ದೇಣಿಗೆ ಘೊಷಿಸಿವೆ.
Vijaya Karnataka Web corona tube


ಏಷಿಯನ್ ಪೇಂಟ್‌ ಕಂಪನಿಯು 2 ಕೋಟಿ ರೂಗಳನ್ನು ಈಗಾಗಲೇ ಸಿಎಂ ನಿಧಿಗೆ ಅರ್ಪಿಸಿದ್ದಾರೆ., ಟೊಯೋಟಾ ಇಂಡಸ್ಟ್ರೀಸ್‌ ಎಂಜಿನ್ ವತಿಯಿಂದ 31 ಲಕ್ಷ ರೂ, ಜಿಯೋಮಿ ಟೆಕ್ನಾಲಜಿ, ಜೆ.ಎಂ. ಫಿನಾಶಿಯಲ್ ಕಂಪನಿಯು ತಲಾ 25 ಲಕ್ಷ ರೂ., ಟೊಯೋಟಾ ಕಿರ್ಲೋಸ್ಕರ್ ಆಟೋಪಾರ್ಟ್ಸ್‌ ವತಿಯಿಂದ 23 ಲಕ್ಷ ರೂ., ಕೆನ್ನಾ ಮೆಟಲ್ಸ್ ವತಿಯಿಂದ 15 ಲಕ್ಷ ರೂ, ಬ್ರಿಗೇಡ್‌ ಎಂಟರ್‌ಪ್ರೈಸಸ್ ವತಿಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿವೆ.

ಜೊತೆಗೆ ಸ್ಯಾಮ್‌ಸಂಗ್ ಆ‌ರ್‌ ಆ್ಯಂಡ್‌ ಡಿ ಕಂಪನಿಯಿಂದ 1 ಕೋಟಿ ರು. ಮೊತ್ತದ ಹೆಲ್ತ್‌ ಕಿಟ್‌‌ನನ್ನು ಕೊರಿಯಾ ದೇಶದಿಂದ ಆಮದು ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಕೊರೊನಾ ಎಫೆಕ್ಟ್‌: ಸಿರುಗುಪ್ಪಾದಲ್ಲಿ ಅಬಕಾರಿ ಕಚೇರಿಗೆ ಕನ್ನ, ಸಾವಿರಾರು ರೂ. ಮೌಲ್ಯದ ಎಣ್ಣೆ ಬಾಟಲ್‌ ಸಮೇತ ಪರಾರಿ

ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ವತಿಯಿಂದ 30 ಲಕ್ಷ ರೂ, ದೇಣಿಗೆ ಸಹಿತ ವೈದ್ಯರು ಹಾಗೂ ನರ್ಸ್‌ಗಳಿಗೆ 500 ಬಾಡಿ ಸ್ಯೂಟ್, 5 ಸಾವಿರ ಎನ್95 ಮಾಸ್ಕ್ ಹಾಗೂ ರಾಮನಗರ ಭಾಗದಲ್ಲಿ ಬಡ ಕುಟುಂಬಗಳಿಗೆ 1200 ಊಟದ ಪೊಟ್ಟಣ ನೀಡುತ್ತಿದೆ.

ಅಸಂಘಟಿತ ಕಾರ್ಮಿಕರ ಸ್ಯಾನಿಟೈಸರ್ ಖರೀದಿಗೆ ₹8 ಲಕ್ಷ ನೀಡಿದ ಕಾರ್ಮಿಕ ಇಲಾಖೆ!

ಹಿಮಾಟ್ಸಿಂಗ್ ಸೈಡ್ ಲಿಮಿಟೆಡ್‌ ವತಿಯಿಂದ 10 ಕೋಟಿ ರು. ಮೊತ್ತದ ಪಿಲ್ಲೋ ಕವರ್, ಬೆಡ್‌ಶೀಟ್, ಟವಲ್‌ಗಳನ್ನು ನೀಡುವ ಹೊಣೆ ಹೊತ್ತಿದೆ. ಜೊತೆಗೆ ಬ್ರಿಟಾನಿಯಾ ಇಂಡಸ್ಟ್ರೀ, ವಿಪ್ರೋ, ಜೆಎಸ್‌ಕೆ, ಜ್ಯೋತಿಲಾಲ್‌ ಮೆಡಿಸನ್‌ ಕಂಪನಿಗಳು ಸಹ ಇತರೆ ಆರೋಗ್ಯ ಕಿಟ್ ಹಾಗೂ ದೇಣಿಗೆ ಘೋಷಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ