ಆ್ಯಪ್ನಗರ

Traffic Fine: ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡಿ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕಿಸಿಕೊಂಡ..!

Traffic Fine: ಧನು ಅವರು ರೀಲ್ಸ್‌ ವಿಡಿಯೋಗಳನ್ನು ಮಾಡುವ ವೇಳೆ ಸಾಕಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರು. ರೀಲ್ಸ್‌ ವಿಡಿಯೋ ತುಣುಕುಗಳನ್ನು ಅವರ ತಮ್ಮ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಧನು ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡುವ ಮೂಲಕ ಮತ್ತು ನಿಗದಿತ ಮಿತಿ ಮೀರಿ ನಾಲ್ವರು ಯುವಕರನ್ನು ಹತ್ತಿಸಿಕೊಂಡು ಬೈಕ್‌ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿರುವುದು ವಿಡಿಯೊಗಳಿಂದ ದೃಢ ಪಟ್ಟಿತ್ತು. ಹೀಗಾಗಿ 17,500 ರೂ. ದಂಡ ವಿಧಿಸಲಾಗಿದೆ.

Edited byದಿಲೀಪ್ ಡಿ. ಆರ್. | Vijaya Karnataka 30 Jun 2022, 3:02 pm

ಹೈಲೈಟ್ಸ್‌:

  • ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ
  • ನಿಯಮ ಉಲ್ಲಂಘನೆಗೆ 17,500 ರೂ. ಫೈನ್‌
  • ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಧನು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web reel head
ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡಿ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕಿಸಿಕೊಂಡ..!
ಬೆಂಗಳೂರು: ಇನ್‌ಸ್ಟಾ ಗ್ರಾಂ ವಿಡಿಯೋ (ರೀಲ್ಸ್‌) ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಧನು ಎಂಬುವರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕೆ ಬೆಂಗಳೂರು ನಗರದ ಪೊಲೀಸರು ದಂಡದ ಅಸ್ತ್ರ ಪ್ರಯೋಗಿಸಿದ್ದಾರೆ.

ಧನು ಅವರು ರೀಲ್ಸ್‌ ವಿಡಿಯೋಗಳನ್ನು ಮಾಡುವ ವೇಳೆ ಸಾಕಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರು. ರೀಲ್ಸ್‌ ವಿಡಿಯೋ ತುಣುಕುಗಳನ್ನು ಅವರ ತಮ್ಮ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಧನು ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡುವ ಮೂಲಕ ಮತ್ತು ನಿಗದಿತ ಮಿತಿ ಮೀರಿ ನಾಲ್ವರು ಯುವಕರನ್ನು ಹತ್ತಿಸಿಕೊಂಡು ಬೈಕ್‌ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿರುವುದು ವಿಡಿಯೊಗಳಿಂದ ದೃಢ ಪಟ್ಟಿತ್ತು. ಹೀಗಾಗಿ 17,500 ರೂ. ದಂಡ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

Viral Video: ಫಾಸ್ಟ್‌ಟ್ಯಾಗ್ ಬಗೆಗಿನ ಈ ವೈರಲ್ ವಿಡಿಯೋದ ಅಸಲಿಯತ್ತೇನು?: ಇಲ್ಲಿದೆ ಸತ್ಯಾಂಶ
ಈ ಸಂಬಂಧ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇ ಗೌಡ 'ವಿಕ' ಜತೆ ಮಾತನಾಡಿ, 'ಮನರಂಜನೆಗಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವವರ ಖಾತೆಗಳ ಮೇಲೆ ಇಲಾಖೆಯ ಸೋಶಿಯಲ್‌ ಮೀಡಿಯಾ ವಾಚ್‌ ವಿಭಾಗ ನಿಗಾ ವಹಿಸಿದೆ. ನಿಂತಿರುವ ಬೈಕ್‌ನಲ್ಲಿ ವಿಡಿಯೋ ಮಾಡಿದರೆ ಸಂಚಾರ ನಿಯಮ ಉಲ್ಲಂಘನೆ ಆಗುವುದಿಲ್ಲ. ಆದರೆ, ಚಲಿಸುತ್ತಿರುವ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸದೆ ವಿಡಿಯೋ ಮಾಡುವುದು ಮತ್ತು ಮೂವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದು ಸಂಚಾರ ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ಅಂತಹವರಿಗೆ ದಂಡ ವಿಧಿಸಲಾಗುತ್ತದೆ' ಎಂದು ತಿಳಿಸಿದರು.

Viral Video: ಬಾತುಕೋಳಿಗಳ ಕುಟುಂಬವನ್ನು ರಸ್ತೆ ದಾಟಿಸಿದ ಹೃದಯವಂತ: ನೆಟ್ಟಿಗರಿಂದ ಮೆಚ್ಚುಗೆ

'ಸಂಚಾರ ನಿಯಮ ಉಲ್ಲಂಘಿಸಿ ವಿಡಿಯೋ ಮಾಡಿರುವ ವಾಹನಗಳ ಮಾಲೀಕರಿಗೆ ನೋಟಿಸ್‌ ನೀಡುತ್ತೇವೆ. ಜತೆಗೆ ದಂಡ ಸಹ ವಿಧಿಸುತ್ತೇವೆ. ವಿಡಿಯೋದಲ್ಲಿರುವ ವ್ಯಕ್ತಿ ಇಲಾಖೆಯ ನೋಟಿಸ್‌ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ, ನಾವು ಸಾಕ್ಷ್ಯಾಧಾರ ಇಟ್ಟುಕೊಂಡೇ ಕ್ರಮ ಕೈಗೊಂಡಿರುತ್ತೇವೆ. ರೀಲ್ಸ್‌ ವಿಡಿಯೋ ಮಾಡುವ ಧನು ಎಂಬಾತನಿಗೆ ದಂಡ ವಿಧಿಸಿರುವ ಬಗ್ಗೆ ಸದ್ಯಕ್ಕೆ ನನಗೆ ಮಾಹಿತಿಯಿಲ್ಲ. ಈ ನಿರ್ದಿಷ್ಟ ಪ್ರಕರಣದ ಬಗ್ಗೆ ಸಿಬ್ಬಂದಿಯಿಂದ ವಿವರ ಪಡೆಯುತ್ತೇನೆ' ಎಂದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ