ಆ್ಯಪ್ನಗರ

'ವಿಕ ’ಮಾದರಿಯಲ್ಲಿ ಜಲಮಂಡಳಿ ನೇರ ಪೋನ್‌ ಇನ್‌

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ವಿಜಯ ಕರ್ನಾಟಕ ನಡೆಸುವ ನೇರ ಫೋನ್‌ ಇನ್‌ ಕಾರ್ಯಕ್ರಮದ ಮಾದರಿಯಲ್ಲಿ ಬೆಂಗಳೂರು ಜಲಮಂಡಳಿ ಪ್ರತಿ ಶನಿವಾರ ಪೋನ್‌ ಇನ್‌ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಮೊದಲ ಫೋನ್‌ ಇನ್‌ ಕಾರ್ಯಕ್ರಮ ಫೆ.9 ರಂದು ನಡೆಯಲಿದೆ.

Vijaya Karnataka 8 Feb 2019, 5:00 am
ಬೆಂಗಳೂರು : ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ವಿಜಯ ಕರ್ನಾಟಕ ನಡೆಸುವ ನೇರ ಫೋನ್‌ ಇನ್‌ ಕಾರ್ಯಕ್ರಮದ ಮಾದರಿಯಲ್ಲಿ ಬೆಂಗಳೂರು ಜಲಮಂಡಳಿ ಪ್ರತಿ ಶನಿವಾರ ಪೋನ್‌ ಇನ್‌ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಮೊದಲ ಫೋನ್‌ ಇನ್‌ ಕಾರ್ಯಕ್ರಮ ಫೆ.9 ರಂದು ನಡೆಯಲಿದೆ.
Vijaya Karnataka Web jalamandali phone in programme in vk style
'ವಿಕ ’ಮಾದರಿಯಲ್ಲಿ ಜಲಮಂಡಳಿ ನೇರ ಪೋನ್‌ ಇನ್‌


ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಕಳೆದ ನ.17 ರಂದು ವಿಕ ನೇರ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಕರೆ ಮಾಡಿದ ಜನರು ಕುಡಿಯುವ ನೀರು ಹಾಗೂ ಒಳಚರಂಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ತುಷಾರ್‌ ಗಿರಿನಾಥ್‌, ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಜಲಮಂಡಳಿ ವತಿಯಿಂದ ಪೋನ್‌ ಇನ್‌ ಕಾರ್ಯಕ್ರಮ ಏರ್ಪಡಿಸಿ ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದ್ದರು.

ಮೈಸೂರು ಬ್ಯಾಂಕ್‌ ವೃತ್ತ ಸಮೀಪದ ಜಲಮಂಡಳಿಯ ಪ್ರಧಾನ ಕಚೇರಿಯಲ್ಲಿ ಶನಿವಾರ ಬೆಳಗ್ಗೆ 9 ರಿಂದ 10.30 ಗಂಟೆವರೆಗೆ ಫೋನ್‌ ಇನ್‌ ಕಾರ್ಯಕ್ರಮ ನಡೆಯಲಿದೆ. ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರೇ ಜನರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಪ್ರತಿ ಶನಿವಾರ ಇದೇ ಸಮಯದಲ್ಲಿ ಫೋನ್‌ ಇನ್‌ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ.

ಫೋನ್‌ ಇನ್‌ಗೆ ಕರೆ ಮಾಡಿ

080-22945119

ಫೋನ್‌ ಇನ್‌ ಸಮಯ

ಬೆಳಗ್ಗೆ 9 ರಿಂದ 10.30

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ