ಆ್ಯಪ್ನಗರ

ಆರ್‌ಆರ್‌ ನಗರ ಗೆಲ್ಲಲು ಜೆಡಿಎಸ್‌ನಿಂದ ರಣತಂತ್ರ..! ಕಾರ್ಯಕರ್ತರ 50 ತಂಡ, 10 ಶಾಸಕರ ಉಸ್ತುವಾರಿ

ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಗೆಲ್ಲಲು ಮೂರು ಪಕ್ಷಗಳು ಭಾರೀ ರಣತಂತ್ರ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿರುವ ಜೆಡಿಎಸ್‌ ಕ್ಷೇತ್ರದಲ್ಲಿ ಗೆಲ್ಲಲು ಒಟ್ಟು 50 ತಂಡಗಳನ್ನು ರಚಿಸಿದ್ದು, 10 ಶಾಸಕರಿಗೆ ವಾರ್ಡ್‌ವಾರು ಉಸ್ತುವಾರಿ ನೀಡಲಾಗಿದೆ.

Vijaya Karnataka Web 21 Oct 2020, 11:54 pm
ಬೆಂಗಳೂರು: ಮೂರು ಪಕ್ಷಗಳಿಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆರ್‌ಆರ್‌ ನಗರ ಗೆಲ್ಲಲು ರಾಷ್ಟ್ರೀಯ ಪಕ್ಷಗಳಂತೆ ಜೆಡಿಎಸ್‌ ಕೂಡ ರಣತಂತ್ರ ರೂಪಿಸಿದೆ. ಒಟ್ಟು 50 ತಂಡಗಳನ್ನು ರಚಿಸಿರುವ ಜೆಡಿಎಸ್‌ ಪ್ರತಿ ತಂಡಕ್ಕೆ 10 ರಿಂದ 15 ಬೂತ್‌ಗಳ ಉಸ್ತುವಾರಿ ನೀಡುವ ಮೂಲಕ ಮನೆ-ಮನೆ ತಲುಪವ ಯೋಜನೆ ಹಾಕಿಕೊಂಡಿದೆ.
Vijaya Karnataka Web jds big plan to win for rr nagar by election
ಆರ್‌ಆರ್‌ ನಗರ ಗೆಲ್ಲಲು ಜೆಡಿಎಸ್‌ನಿಂದ ರಣತಂತ್ರ..! ಕಾರ್ಯಕರ್ತರ 50 ತಂಡ, 10 ಶಾಸಕರ ಉಸ್ತುವಾರಿ


ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಕೊರೊನಾ ವೈರಸ್‌ ಕಾರಣದಿಂದ ಅಬ್ಬರದ ಪ್ರಚಾರಕ್ಕೆ ಮಣೆ ಹಾಕದೇ ಪ್ರತಿ ಮತದಾರರನ್ನು ತಲುಪುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. 10 ಶಾಸಕರಿಗೆ ವಾರ್ಡ್‌ವಾರು ಉಸ್ತುವಾರಿ ನೀಡಲಾಗಿದ್ದು, ಶಾಸಕರು ಹಾಗೂ ನಾಯಕರಿಂದ ವಾರ್ಡ್‌ವಾರು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಮತಯಾಚಿಸಲಾಗುವುದು ಎಂದು ಹೇಳಿದ್ದಾರೆ.

'ನಾನು ಈ ಕ್ಷೇತ್ರದ ಮಗ, ಗೆಲುವು ನನ್ನದೇ..!'
ಇನ್ನು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ, ನಾನು ಈ ಕ್ಷೇತ್ರದ ಮಗ ನಿಮ್ಮೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡೇ ಬೆಳೆದವನು. ಜೆಡಿಎಸ್‌ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ. ಈ ಚುನಾವಣೆಯಲ್ಲಿ ನಾವೇ ಗೆಲ್ಲುವುದು. ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ ಎಂದರು.

ಆರ್‌ಆರ್‌ ನಗರ: 50-60 ಕೋಟಿ ರೂ.ಗೆ ಮುನಿರತ್ನ ಮಾರಾಟವಾಗಿದ್ದಾರೆ ಎಂದು ಕೃಷ್ಣಮೂರ್ತಿ ಕಿಡಿ

ಬಿಜೆಪಿ-ಕಾಂಗ್ರೆಸ್‌ನವರು ಎಷ್ಟೇ ಜನರನ್ನು ಜೆಡಿಎಸ್‌ನಿಂದ ಸೇರಿಸಿಕೊಂಡರು ನಮ್ಮ ಮೇಲೆ ಯಾವ ಪರಿಣಾಮ ಬೀರಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರಿಸೋಣ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದರು. ಬೆಳಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಕೃಷ್ಣಮೂರ್ತಿ, ಪ್ರೆಸ್ ಲೇಔಟ್ ಪಾರ್ಕ್, ಬಿಇಎಂಎಲ್‌ ಲೇಔಟ್‌, ಲಗ್ಗೆರೆ, ಕೊಟ್ಟಿಗೆಪಾಳ್ಯ ಹಾಗೂ ಜ್ಞಾನಭಾರತಿ ವಾರ್ಡ್‌ಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿದರು.

ದೇವೇಗೌಡರ ಕುಟುಂಬವನ್ನು ಖರೀದಿಸಲು ಆಗಲ್ಲ: ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ