ಆ್ಯಪ್ನಗರ

ಇದು ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ: ಬೊಮ್ಮಾಯಿ ಸರ್ಕಾರದ ಬಗ್ಗೆ ಸಿಎಂ ಇಬ್ರಾಹಿಂ ವ್ಯಂಗ್ಯ!

ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ ಇದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿ,ನಾನು ಆಕಾಂಕ್ಷಿ ಆಗಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟ ಮಾಡೋಕೆ ಕೂತರೆ ಹೆಂಗೆ? ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಕೆಲವೇ ಕ್ಷಣಗಳಲ್ಲಿ ಘೋಷಣೆ ಆಗಲಿದೆ ಎಂದರು.

ಹೈಲೈಟ್ಸ್‌:

  • ರಾಜ್ಯ ಸರ್ಕಾರದ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ
  • ಇದು ಮಂಗಳಮುಖಿಯರ ಸರ್ಕಾರ ಎಂದು ಲೇವಡಿ
  • ಆದಷ್ಟು ಬೇಗ ಸರ್ಕಾರ ತೆಗೆಯಬೇಕು ಎಂದ ಜೆಡಿಎಸ್‌ ರಾಜ್ಯಾಧ್ಯಕ್ಷ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web cm ibrahim
ಬೆಂಗಳೂರು: ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರವನ್ನು ತೆಗೆಯಬೇಕು.. ಹೀಗೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು,‌ ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ ಇದು ಎಂದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿ,ನಾನು ಆಕಾಂಕ್ಷಿ ಆಗಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟ ಮಾಡೋಕೆ ಕೂತರೆ ಹೆಂಗೆ? ಎಂದು ಪ್ರಶ್ನಿಸಿದರು.

ಶಾಲಾ ಪಠ್ಯದಲ್ಲಿ ಹೆಡಗೇವಾರ್ ಭಾಷಣ: ಸಿಎಂ ಇಬ್ರಾಹಿಂ ಆಕ್ಷೇಪ
11.30 ಜೆಡಿಎಸ್ ಅಭ್ಯರ್ಥಿ ಘೋಷಣೆ
ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಕೆಲವೇ ಕ್ಷಣಗಳಲ್ಲಿ ಘೋಷಣೆ ಆಗಲಿದೆ. ಅಭ್ಯರ್ಥಿ ಆಯ್ಕೆ ಕುರಿತಾಗಿ ವಿಧಾನಸೌಧದಲ್ಲಿ ಜೆಡಿಎಲ್‌ಪಿ ಸಭೆ ನಡೆದ ಬಳಿಕ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಚರ್ಚೆ ನಡೆಯಲಿದೆ ಎಂದರು.

ಅರ್ಜುನರಾಗಿ ಕುಮಾರಸ್ವಾಮಿ ಇದ್ರೆ, ಅವರ ಸಾರಥಿಯಾಗಿ ನಾನಿದ್ದೇನೆ! ನಮ್ಮ ಗುರಿ ಮಹಾಭಾರತ ಎಂದ ಸಿಎಂ ಇಬ್ರಾಹಿಂ
ಒಟ್ಟು 18 ನಾಮಪತ್ರ ಸಲ್ಲಿಕೆ
ಇನ್ನು ವಿಧಾನ ಪರಿಷತ್‌ ಚುನಾವಣೆಗೆ ಈ ವರೆಗೆ ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾಗುವೆ. ವಾಯುವ್ಯ ಪದವೀಧರ ಕ್ಷೇತ್ರ 3, ಪಶ್ಚಿಮ ಪದವೀಧರ ಕ್ಷೇತ್ರ9,ದಕ್ಷಿಣ ಶಿಕ್ಷಕರ ಕ್ಷೇತ್ರ ಐದು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರ 1 ಸೇರಿದಂತೆ ಈ ವರೆಗೆ ವಿಧಾನಪರಿಷತ್ ಚುನಾವಣೆಗೆ ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇನ್ನೂ ಹೊರಬಿದ್ದಿಲ್ಲ ಬಿಜೆಪಿ ಪಟ್ಟಿ!
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ (ಮೇ 24) ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಅತಿ ಶೀಘ್ರದಲ್ಲೇ ಬಿಜೆಪಿಯೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದೆ.

ಕಳೆ ಕಿತ್ತುಕೊಂಡು ಹೋದರೆ ಸಮೃದ್ಧಿ ಆಗುತ್ತೆ ಬೆಳೆ: ಪಕ್ಷ ತೊರೆಯುವವರಿಗೆ ಸಿಎಂ ಇಬ್ರಾಹಿಂ ಟಾಂಗ್‌
ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಒಟ್ಟು ಏಳು ಸ್ಥಾನಗಳ ಪೈಕಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ 2 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ. ಕಾಂಗ್ರೆಸ್‌ನಿಂದ ಅಚ್ಚರಿಯ ಆಯ್ಕೆ ಎಂಬಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್‌ ಹಾಗೂ ನಾಗರಾಜ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ.

ಬಿಜೆಪಿಯಿಂದ ವಿಜಯೇಂದ್ರ ಹೆಸರು ಕೇಳಿ ಬಂದಿದ್ದರೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇವರ ಹೊರತಾಗಿ ನಿರ್ಮಲ್ ಕುಮಾರ್ ಸುರಾನ, ಛಲವಾದಿ ನಾರಾಯಣ ಸ್ವಾಮಿ, ಮಹಾಂತೇಶ ಕವಟಗಿಮಠ, ಕೇಶವಪ್ರಸಾದ್, ಮಂಜಮ್ಮ ಜೋಗತಿ, ಲಿಂಗರಾಜ ಪಾಟೀಲ, ಗೀತಾ ವಿವೇಕಾನಂದ ಹೆಸರು ಕೇಳಿಬರುತ್ತಿವೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನ ಆಗಿರುವುದರಿಂದ ಅಭ್ಯರ್ಥಿಗಳ ಹೆಸರು ಯಾವ ಕ್ಷಣದಲ್ಲಾದರೂ ಪ್ರಕಟವಾಗಬಹುದು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ